ಮುಂಬೈ

ಕೊರೋನಾ ಸೋಂಕಿತ ಮಕ್ಕಳಲ್ಲಿ ಹೊಸ ಸಮಸ್ಯೆ- 18 ಮಕ್ಕಳು ಬಲಿ

Pinterest LinkedIn Tumblr


ಮುಂಬೈ: ಕರೊನಾ ಹಾಟ್‌ಸ್ಪಾಟ್‌ ಆಗಿರುವ ಮಹಾರಾಷ್ಟ್ರದಲ್ಲಿ ಕ್ಷಣ ಕ್ಷಣಕ್ಕೂ ಸೋಂಕಿತರ ಸಂಖ್ಯೆ ಹೆಚ್ಚುತ್ತಲೇ ಇದೆ. ವೃದ್ಧರಿಗೆ ಹಾಗೂ ಅನಾರೋಗ್ಯ ಸಮಸ್ಯೆಯಿಂದ ಬಳಲುತ್ತಿರುವವರಲ್ಲಿ ಈ ಸಮಸ್ಯೆ ಹೆಚ್ಚಾಗಿ ಕಾಣಿಸುತ್ತಿದ್ದರೂ ಇದೀಗ ಭಾರಿ ಪ್ರಮಾಣದಲ್ಲಿ ಕರೊನಾ ಸೋಂಕು ಮಕ್ಕಳಲ್ಲಿ ಕಾಣಿಸಿಕೊಳ್ಳುತ್ತಿದೆ.

ಇದು ಒಂದೆಡೆ ಚಿಂತೆಗೀಡುಮಾಡುತ್ತಿದ್ದರೆ, ಇನ್ನೂ ಒಂದು ಆಘಾತಕಾರಿ ಬೆಳವಣಿಗೆ ಮಹಾರಾಷ್ಟ್ರದಲ್ಲಿ ಕಾಣಿಸಿಕೊಂಡಿದೆ. ಅದೇನೆಂದರೆ, ಕರೊನಾ ಸೋಂಕಿತ ಮಕ್ಕಳಲ್ಲಿ ಹೊಸ ಸಮಸ್ಯೆ ಎದುರಾಗಿದ್ದು, ಇದಕ್ಕೆ ಎಂಟು ಮಕ್ಕಳು ಬಲಿಯಾಗಿದ್ದಾರೆ.

ಪೆಡಿಯಾಟ್ರಿಕ್ ಮಲ್ಟಿಸಿಸ್ಟಮ್ ಇನ್‌ಫ್ಲಾಮೇಟರಿ ಸಿಂಡ್ರೋಮ್ (ಪಿಎಂಐಎಸ್‌) ಎಂಬ ಸಮಸ್ಯೆ ಮಕ್ಕಳಲ್ಲಿ ಕಾಣಿಸಿಕೊಳ್ಳಲು ಶುರುವಾಗಿದೆ. ಮುಂಬೈನ ವಾಡಿಯಾ ಆಸ್ಪತ್ರೆ ಒಂದರಲ್ಲಿಯೇ ಕರೊನಾ ಸೋಂಕಿತ 100 ಮಕ್ಕಳ ಪೈಕಿ 18 ಮಕ್ಕಳು ಇದಕ್ಕೆ ಬಲಿಯಾಗಿದ್ದಾರೆ.

ಪಿಎಂಐಎಸ್‌ ಸಮಸ್ಯೆಗೆ ಒಳಗಾಗಿರುವ ಮಕ್ಕಳಲ್ಲಿ ಜ್ವರ, ಕಣ್ಣು ಉರಿ, ಚರ್ಮದ ಮೇಲೆ ದದ್ದು, ಹೊಟ್ಟೆಯ ಸಮಸ್ಯೆ ಕಾಣಿಸಿಕೊಳ್ಳುತ್ತಿದೆ. ಸೋಂಕಿತ ಮಕ್ಕಳಿಗೆ ಈ ಸಮಸ್ಯೆ ಕಾಣಿಸಿಕೊಂಡರೆ ಅಂಥ ಮಕ್ಕಳು ಪಿಎಂಐಎಸ್‌ಗೆ ಗುರಿಯಾಗಿದ್ದಾರೆ ಎಂದು ಅರ್ಥ. ಈ ರೋಗದ ಲಕ್ಷಣಗಳು 10 ತಿಂಗಳ ಮಗುವಿನಿಂದ 15 ವರ್ಷದ ಮಕ್ಕಳಲ್ಲಿ ಈ ಸಮಸ್ಯೆ ಕಾಣಿಸಿಕೊಳ್ಳುತ್ತಿದೆ ಎಂದು ವೈದ್ಯರು ಹೇಳುತ್ತಾರೆ.

ಪಿಎಂಐಎಸ್‌ ಸಮಸ್ಯೆ ಕಾಣಿಸಿಕೊಂಡಿರುವ 18 ಮಕ್ಕಳಲ್ಲಿ 2 ಮಕ್ಕಳು ಕರೊನಾದಿಂದ ಚೇತರಿಸಿಕೊಂಡ ನಂತರ ಈ ಕಾಯಿಲೆಯಿಂದ ಮೃತಪಟ್ಟಿರುವುದು ಇನ್ನೂ ಆತಂಕಕ್ಕೆ ಕಾರಣವಾಗಿದೆ ಎನ್ನುವ ವೈದ್ಯರು ಈ ಬಗ್ಗೆ ಮಾಹಿತಿಯನ್ನು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಗೆ ನೀಡಿತ್ತು. ಈ ನಿಟ್ಟಿನಲ್ಲಿ ಸಂಶೋಧನೆ ಕೈಗೊಂಡಾಗ ಇದು ಪೆಡಿಯಾಟ್ರಿಕ್ ಮಲ್ಟಿಸಿಸ್ಟಮ್ ಇನ್‌ಫ್ಲಾಮೇಟರಿ ಸಿಂಡ್ರೋಮ್ ಸಮಸ್ಯೆ ಎಂದು ತಜ್ಞರು ಹೇಳಿದ್ದಾರೆ. ವಿಶ್ವ ಆರೋಗ್ಯ ಸಂಸ್ಥೆ ಇದನ್ನು ಮಲ್ಟಿಸಿಸ್ಟಮ್ ಇನ್‌ಫ್ಲಾಮೇಟರಿ ಸಿಂಡ್ರೋಮ್ ಎಂದು ಹೆಸರಿಸಿದೆ.

’ಕಳೆದ ಮಾರ್ಚ್‌ನಿಂದ ಇಲ್ಲಿಯವರೆಗೆ 600 ಮಕ್ಕಳನ್ನು ಪರೀಕ್ಷಿಸಲಾಗಿದೆ. 100 ಮಕ್ಕಳಲ್ಲಿ ಕರೊನಾ ಸೋಂಕು ಕಾಣಿಸಿಕೊಂಡಿದೆ. ಅವರಲ್ಲಿ 18 ಮಂದಿ ಪಿಎಂಐಎಸ್ ರೋಗಲಕ್ಷಣಗಳನ್ನು ಹೊಂದಿದ್ದಾರೆ ಎಂದು ವಾಡಿಯಾ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ.ಶಕುಂತಲಾ ಪ್ರಭು ಮಾಹಿತಿ ನೀಡುತ್ತಾರೆ.

‘ಹೊಟ್ಟೆ ನೋವಿನ ಜತೆಗೆ, ಎರಡು ಮೂರು ದಿನಗಳವರೆಗೆ ಜ್ವರವಿರುತ್ತದೆ, ಶೇಕಡಾ 60ರಷ್ಟು ಮಕ್ಕಳ ಕಣ್ಣುಗಳು ಕೆಂಪು ಬಣ್ಣಕ್ಕೆ ತಿರುಗಿದರೆ, ಇತರರು ದೇಹದ ಮೇಲೆ ದದ್ದುಗಳನ್ನು ಹೊಂದುತ್ತಾರೆ. ಈ ರೋಗದ ಲಕ್ಷಣಗಳು ಮಕ್ಕಳಲ್ಲಿ ಕಂಡಬಂದರೆ ಪ್ರಾರಂಭಿಕ ಹಂತದಲ್ಲಿಯೇ ಗುರುತಿಸಿ ಚಿಕಿತ್ಸೆ ಕೊಡಬೇಕು. ಹೀಗೆ ಮಾಡಿದರೆ ಮಕ್ಕಳು ಚೇತರಿಸಿಕೊಳ್ಳುತ್ತಾರೆ. ಈ ಬಗ್ಗೆ ಪಾಲಕರು ಎಚ್ಚರಿಕೆ ವಹಿಸಬೇಕು ಎನ್ನುತ್ತಾರೆ ಎಸ್‌ಆರ್‌ಸಿಸಿ ಮಕ್ಕಳ ಆಸ್ಪತ್ರೆಯ ಶಿಶುವೈದ್ಯ ಮತ್ತು ಕ್ರಿಟಿಕಲ್ ಕೇರ್ ಸೊಸೈಟಿಯ ಕಾರ್ಯದರ್ಶಿ ಡಾ.ಅಮಿಶ್ ವೋರಾ.

Comments are closed.