ಮನೋರಂಜನೆ

ರಾನು ಮೊಂಡಲ್ ಹಾಡು ಕೇಳಿ ಬಿಕ್ಕಿಬಿಕ್ಕಿ ಅತ್ತ ಗಾಯಕ ಹಿಮೇಶ್

Pinterest LinkedIn Tumblr


ಮುಂಬೈ: ಇಂಟೆರ್‌ನೆಟ್ ಸ್ಟಾರ್ ರಾನು ಮೊಂಡಲ್ ಅವರ ಹಾಡು ಕೇಳಿ ಗಾಯಕ ಹಿಮೇಶ್ ರೇಶ್ಮಿಯಾ ಬಿಕ್ಕಿಬಿಕ್ಕಿ ಅತ್ತ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

ಹಿಂದಿಯ ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ‘ಇಂಡಿಯನ್ ಐಡಲ್ ಸೀಸನ್-11’ ಗ್ರ್ಯಾಂಡ್ ಫಿನಾಲೆ ಇಂದು ಪ್ರಸಾರವಾಗಲಿದೆ. ಈ ಫಿನಾಲೆಯ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ಇದರಲ್ಲಿ ಗಾಯಕ ಹಿಮೇಶ್, ಸ್ಪರ್ಧಿಗಳು ಹಾಡಿದ ರಾನು ಅವರ ಹಾಡು ಕೇಳಿ ಬಿಕ್ಕಿಬಿಕ್ಕಿ ಅತ್ತಿದ್ದಾರೆ.

ಕಾರ್ಯಕ್ರಮದ ಐವರು ಫಿನಾಲೆ ಸ್ಪರ್ಧಿಗಳು ಹಿಮೇಶ್ ಅವರು ಕಂಪೋಸ್ ಮಾಡಿರುವ ‘ತೇರಿ ಮೇರಿ ಕಹಾನಿ’ ಹಾಡನ್ನು ಹಾಡಿದ್ದಾರೆ. ಇದನ್ನು ಕೇಳಿ ಹಿಮೇಶ್ ಭಾವುಕರಾಗಿ ಬಿಕ್ಕಿಬಿಕ್ಕಿ ಅತ್ತಿದ್ದಾರೆ. ಹಿಮೇಶ್ ಬಿಕ್ಕಿಬಿಕ್ಕಿ ಅತ್ತಿರುವುದನ್ನು ನೋಡಿದ ಗಾಯಕರಾದ ವಿಶಾಲ್ ದದ್ಲಾನಿ ಹಾಗೂ ನೇಹಾ ಕಕ್ಕರ್ ತಕ್ಷಣ ಎದ್ದು ನಿಂತು ಅವರನ್ನು ಸಮಾಧಾನ ಮಾಡಿದ್ದಾರೆ. ವೈರಲ್

ತೇರಿ ಮೇರಿ ಕಹಾನಿ ಹಾಡನ್ನು ರಾನು ಮೊಂಡಲ್ ಹಾಡಿದ್ದಾರೆ. ರೈಲ್ವೆ ನಿಲ್ದಾಣದಲ್ಲಿ ರಾನು ಹಾಡನ್ನು ಹಾಡುತ್ತಿರುವಾಗ ಯುವಕನೊಬ್ಬ ಅವರ ವಿಡಿಯೋ ಮಾಡಿ ಅದನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದರು. ಇದನ್ನು ನೋಡಿ ಹಿಮೇಶ್ ರಾನು ಅವರಿಗೆ ತಮ್ಮ ಚಿತ್ರದಲ್ಲಿ ಹಾಡಲು ಅವಕಾಶ ನೀಡಿದ್ದರು. ಈ ಹಾಡು ಸ್ಪರ್ಧಿಗಳು ಹಾಡುತ್ತಿದ್ದಂತೆ ಹಿಮೇಶ್ ಭಾವುಕರಾದರು.

Comments are closed.