ಮುಂಬೈ

3 ತಿಂಗಳ ಕರುವಿನೊಂದಿಗೆ ಅಸ್ವಾಭಾವಿಕ ಸೆಕ್ಸ್- ಆರೋಪಿ ಬಂಧನ

Pinterest LinkedIn Tumblr


ಮುಂಬೈ: ಮೂರು ತಿಂಗಳ ಕರುವಿನ ಜೊತೆಗೆ ಅಸ್ವಾಭಾವಿಕ ನಡೆಸಿದ್ದ ಆರೋಪಿಯನ್ನು ಮಹಾರಾಷ್ಟ್ರ ಪೊಲೀಸರು ಬಂಧಿಸಿದ್ದಾರೆ.

ನಾಂದೇಡ್ ಜಿಲ್ಲೆಯ ಶೆಂಬೋಲಿ ನಿವಾಸಿ ನಂಬಿಸಾಬ್ ಶೇಖ್ ಬಂಧಿತ ಆರೋಪಿ. ನಂಬಿಸಾಬ್‍ನನ್ನು ವಶಕ್ಕೆ ಪಡೆದಿರುವ ಬಾರ್ಡ್ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಪ್ರಕರಣ ಕುರಿತು ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.

ಇಂತಹದ್ದೇ ವಿಲಕ್ಷಣ ಘಟನೆಯೊಂದು ಉತ್ತರ ಪ್ರದೇಶದ ಅಯೋಧ್ಯೆಯ ಆಶ್ರಯವೊಂದರಲ್ಲಿ ನಡೆದಿತ್ತು. 2019ರ ಮೇ ತಿಂಗಳಿನಲ್ಲಿ ಹಸುಗಳೊಂದಿಗೆ ಅಸ್ವಾಭಾವಿಕ ಲೈಂಗಿಕ ಸಂಬಂಧ ಹೊಂದಿದ್ದ ಆರೋಪದ ಮೇಲೆ 27 ವರ್ಷದ ರಾಜ್‍ಕುಮಾರ್ ಬಂಧಿಸಲಾಗಿತ್ತು.

ಕುಡಿದ ಅಮಲಿನಲ್ಲಿ ಕೃತ್ಯ ಎಸಗಿದ್ದ ಆರೋಪಿಯನ್ನು ಆಗ್ರಮದ ಸ್ವಯಂ ಸೇವಕರು ಥಳಿಸಿ, ಸ್ಥಳೀಯ ಪೊಲೀಸರಿಗೆ ಒಪ್ಪಿಸಿದ್ದರು. ಇಂತರ ಕೃತ್ಯ ಎಸಗುವ ಆರೋಪಿಗಳ ವಿರುದ್ಧ ಐಪಿಸಿ ಸೆಕ್ಷನ್ 377/511 (ಅಸ್ವಾಭಾವಿಕ ಲೈಂಗಿಕ ಪ್ರಯತ್ನ) ಮತ್ತು ಪ್ರಾಣಿಗಳ ಮೇಲಿನ ಕ್ರೌರ್ಯ ಕಾಯ್ದೆಯ ಸೆಕ್ಷನ್ 11 (ಪ್ರಾಣಿಗಳ ಮೇಲೆ ನೋವು ಅಥವಾ ಸಂಕಟವನ್ನು ಉಂಟುಮಾಡುವುದು) ಅಡಿ ಪ್ರಕರಣ ದಾಖಲಾಗುತ್ತದೆ.

Comments are closed.