ಮುಂಬೈ

ಪತಿಯೊಂದಿಗೆ ಜಗಳ: ಮಧ್ಯಾಹ್ನ ಹುಟ್ಟಿದ ಮಗುವನ್ನು 17ನೇ ಮಹಡಿಯಿಂದ ಕೆಳಕ್ಕೆಸೆದ ತಾಯಿ!

Pinterest LinkedIn Tumblr


ಮುಂಬೈ: ಗಂಡನೊಂದಿಗೆ ಜಗಳವಾಡಿ ಕೋಪದಿಂದ ಮಹಿಳೆ ನವಜಾತ ಶಿಶುವನ್ನು ಕಟ್ಟಡದ 17ನೇ ಮಹಡಿಯಿಂದ ಕೆಳಕ್ಕೆಸೆದ ಘಟನೆ ಮುಂಬೈನಲ್ಲಿ ನಡೆದಿದೆ.

ಈ ಘಟನೆ ಗುರುವಾರ ಸಂಜೆ ನಡೆದಿದ್ದು, ಮುಂಬೈನ ಕಾಂಡಿವಲಿ ಪ್ರದೇಶದಲ್ಲಿ ನಡೆದಿದೆ.

ಗುರುವಾರ ಸಂಜೆ ಮಗು ಕಟ್ಟಡದ ಬಳಿ ಪತ್ತೆಯಾಗಿದ್ದು, ಗಮನಿಸಿದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದರು.

ತಾಯಿ ಅದೇ ದಿನ ಮಧ್ಯಾಹ್ನ ತನ್ನ ಮನೆಯ ಬಾತ್ ರೂಮ್ ನಲ್ಲಿ ಮಗುವಿಗೆ ಜನ್ಮ ನೀಡಿದ್ದು, ಸಂಜೆ ಕೆಳಗೆ ಎಸೆದಿದ್ದಾಳೆ ಎಂದು ಪ್ರಾಥಮಿಕ ವರದಿಯಲ್ಲಿ ತಿಳಿದು ಬಂದಿದೆ.

ಗಂಡ ತನ್ನನ್ನು ಸರಿಯಾಗಿ ನೋಡಿಕೊಳ್ಳುತ್ತಿಲ್ಲ ಎಂಬ ಕಾರಣಕ್ಕೆ ಕೋಪಗೊಂಡ ಆಕೆ ಮಗುವನ್ನು ಕೆಳಕ್ಕೆ ಎಸೆದಿದ್ದಾಳೆ ಎನ್ನಲಾಗಿದೆ.

ಸದ್ಯಕ್ಕೆ ನಾವು ಆಕೆಯನ್ನು ಬಂಧಿಸಿಲ್ಲ. ಮಹಿಳೆ ಮತ್ತು ಆಕೆಯ ಗಂಡನನ್ನು ವಿಚಾರಣೆ ನಡೆಸಿದ್ದೇವೆ. ನೆರೆಹೊರೆಯವರ ಬಳಿಯೂ ಮಾಹಿತಿ ಸಂಗ್ರಹ ಮಾಡಿದ್ದೇವೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

Comments are closed.