ಮುಂಬಯಿ: ಸಮುದ್ರದಲ್ಲಿ ತೇಲಿ ಬಂದ ಸೂಟ್ ಕೇಸ್ ನ ರಹಸ್ಯವನ್ನು ಪೊಲೀಸರು ಬೇಧಿಸಿದ್ದು ಆರೋಪಿಗಳನ್ನು ಬಂಧಿಸಿದ್ದಾರೆ. ದತ್ತು ಪಡೆದ ಮಗಳೊಬ್ಬಳು ತನ್ನ ಪ್ರಿಯಕರನೊಂದಿಗೆ ಸೇರಿಕೊಂಡು ತಂದೆಯನ್ನೇ ಹತ್ಯೆಗೈದು ಸೂಟ್ ಕೇಸ್ ನಲ್ಲಿ ತುಂಬಿಸಿ ಮಾಹಿಮ್ ಬೀಚ್ ನಲ್ಲಿ ಎಸೆದು ಹೋದ ಘಟನೆ ಇದಾಗಿದೆ.
ಸೋಮವಾರ ಸಂಜೆ ಮಾಹಿಮ್ ಸಮುದ್ರ ತೀರದಲ್ಲಿ ಕಪ್ಪು ಬಣ್ಣದ ಸೂಟ್ ಕೇಸ್ ಒಂದು ಕಂಡುಬಂದಿದ್ದು ಅದನ್ನು ತೆರೆದ ಪೋಲಿಸರು ಅರೆಕ್ಷಣ ಬೆಚ್ಚಿಬಿದ್ದಿದ್ದರು. ಅದರಲ್ಲಿ ಭುಜದಿಂದ ಬೇರ್ಪಡಿಸಲ್ಪಟ್ಟ ಒಂದು ಕೈ ಮತ್ತು ಕಾಲಿನ ಒಂದು ಭಾಗ ಹಾಗೂ ಗಂಡಸಿನ ಮರ್ಮಾಂಗದ ಭಾಗಗಳನ್ನು ತುಂಬಿಸಲಾಗಿತ್ತು.
ಪ್ರಕರಣ ದಾಖಲಿಸಿಕೊಂಡ ಮಾಹಿಮ್ ಪೊಲೀಸರು, ಸೂಟ್ ಕೇಸ್ ನಲ್ಲಿ ದೊರಕಿದ ಎರಡು ಶರ್ಟ್ಸ್ , ಸ್ವೆಟ್ಟರ್ , ಪ್ಯಾಂಟ್ ಗಳ ಆಧಾರದ ಮೇಲೆ ತನಿಖೆ ನಡೆಸಿದ್ದಾರೆ. ಈ ವೇಳೆ ಹತ್ಯೆಗೊಳಗಾದವನ ವಿವರ ತಿಳಿದುಬಂದು ಆತನನ್ನು ಬೆನೆಟ್ ಎಂದು ಗುರುತಿಸಲಾಗಿದೆ. ಆತನ ದತ್ತು ಮಗಳನ್ನು ಈ ಕುರಿತು ವಿಚಾರಿಸಿದಾಗ ತನ್ನ ಸ್ನೇಹಿತನೊಂದಿಗೆ ಸೇರಿಕೊಂಡು ತಾನೇ ಹತ್ಯೆಗೈದಿರುವುದಾಗಿ ಒಪ್ಪಿಕೊಂಡಿದ್ದಾಳೆ.
ನನ್ನ ತಂದೆ (ಬೆನೆಟ್) ನನ್ನನ್ನು ಲೈಂಗಿಕವಾಗಿ ಬಳಸಿಕೊಳ್ಳಲು ಯತ್ನಿಸಿದರು. ಆ ಕಾರಣದಿಂದಲೇ ಸ್ನೇಹಿತನೊಡಗೂಡಿ ಅವರನ್ನು ಹತ್ಯೆ ಮಾಡಿದೆ ಎಂದು ತನಿಖೆಯ ವೇಳೆ ತಿಳಿಸಿದ್ದಾಳೆ.
ನವೆಂಬರ್ 26 ರಂದು ಬೆನೆಟ್ ಅವರನ್ನು ಕೋಲಿನಿಂದ ಹೊಡೆದು ಆ ಬಳಿಕ ಇರಿದು ಕೊಂದಿದ್ದು. ಶವವನ್ನು ಮೂರು ದಿನ ಸಾಂತ ಕ್ರೂಜ್ ಫ್ಲ್ಯಾಟ್ ನಲ್ಲಿ ಇರಿಸಿದ್ದೇವು. ಆ ಬಳಿಕ ಶವವನ್ನು ಹಲವು ಭಾಗಗಳಾಗಿ ತುಂಡು ಮಾಡಿ ಸೂಟ್ ಕೇಸ್ ನಲ್ಲಿ ತುಂಬಿಸಿ ವಕೋಲ ಬಳಿಯ ಮಿತ್ತಿ ನದಿಯಲ್ಲಿ ಎಸೆಯಲಾಗಿತ್ತು ಎಂದು ವಿಚಾರಣೆಯ ವೇಳೆ ತಿಳಿಸಿದ್ದಾರೆ. ಆ ಬಳಿಕ ಸೂಟ್ ಕೇಸ್ ಮಾಹೀಮ್ ಬೀಚ್ ಬಳಿ ಬಂದು ಆತಂಕ ಸೃಷ್ಟಿಯಾಗಿತ್ತು.
Comments are closed.