
ಮುಂಬೈ: ಬ್ಯಾಂಕ್ಗಳಿಗೆ ವಂಚನೆ ಮಾಡುವ ಪ್ರಕರಣಗಳು ಗಣನೀಯವಾಗಿ ಏರಿಕೆಯಾಗುತ್ತಲೇ ಇದೆ. ಕಳೆದ ಒಂದು ವರ್ಷದಲ್ಲೇ ಶೇಕಡ 74ರಷ್ಟು ವಂಚನೆ ಪ್ರಮಾಣ ಹೆಚ್ಚಾಗಿದೆ. 2019ರ ಆರ್ಥಿಕ ವರ್ಷದಲ್ಲಿ ಒಟ್ಟು 71,542.93 ಕೋಟಿ ವಂಚನೆಯಾಗಿವೆ ಎಂದು ಆರ್ಬಿಐ ತನ್ನ ವಾರ್ಷಿಕ ವರದಿಯಲ್ಲಿ ಹೇಳಿದೆ.
2017-18ನೇ ಸಾಲಿನಲ್ಲಿ 41,167.04 ಕೋಟಿ ರೂ. ವಂಚನೆ ನಡೆದಿತ್ತು. ಆದರೆ, ಈ ವರ್ಷದಲ್ಲಿ ಆ ವಂಚನೆಗೆ ಹೆಚ್ಚುವರಿಯಾಗಿ 30 ಸಾವಿರ ಕೋಟಿ ಸೇರಿಕೊಂಡಿದೆ.
ವಂಚನೆಯಾಗಿರುವ ಬಹುಪಾಲ ಹಣ ಸಾಲದ ರೂಪದ್ದೆ. ಒಟ್ಟು 6,801 ಬ್ಯಾಂಕ್ ವಂಚನೆ ಪ್ರಕರಣಗಳು ವರದಿಯಾಗಿವೆ. ಕಳೆದ ಸಾಲಿನಲ್ಲಿ 5,916 ಬ್ಯಾಂಕ್ ವಂಚನೆ ಪ್ರಕರಣಗಳು ವರದಿಯಾಗಿದ್ದವು. ಸರ್ಕಾರಿ ಸ್ವಾಮ್ಯದ ಬ್ಯಾಂಕಿಗಳಲ್ಲಿ 3,766 ಪ್ರಕರಣಗಳಲ್ಲಿ ಒಟ್ಟು 64,509.43 ಕೋಟಿ ರೂ.ವಂಚನೆಯಾಗಿದೆ.
ರಿಸರ್ವ್ ಬ್ಯಾಂಕ್ಗಳಲ್ಲಿ ಹೆಚ್ಚುವರಿ ಬಂಡವಾಳ ಮೀಸಲಿರಿಸಲಾಗಿರುತ್ತದೆ. ದೇಶದ ಸಂಭವಿಸುವ ಆರ್ಥಿಕ ಹಿಂಜರಿತ, ನೈಸರ್ಗಿಕ ವಿಕೋಪಗಳ ಸಂದರ್ಭದಲ್ಲಿ ಆರ್ಥಿಕತೆ ಸದೃಢವಾಗಿಸಲು ಈ ಹಣವನ್ನು ಬಳಸಲಾಗುತ್ತದೆ.
Comments are closed.