ಮುಂಬಯಿ: 1993 ರ ಮುಂಬಯಿ ಸ್ಫೋಟ ಪ್ರಕರಣದ ಅಪರಾಧಿ ಅಬ್ದುಲ್ ಗನಿ ತುರ್ಕ್ ಗುರುವಾರ ನಾಗ್ಪುರದ ಜಿಎಂಸಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾನೆ.
ನಾಗ್ಪುರ ಸೆಂಟ್ರಲ್ ಜೈಲಿನಲ್ಲಿದ್ದ ಅಬ್ದುಲ್ ಗನಿ ತುರ್ಕ್ ನನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.
2006 ರಲ್ಲಿ ಟಾಡಾ ನ್ಯಾಯಾಲಯ ಅಬ್ದುಲ್ ಗನಿ ತುರ್ಕ್ ನನ್ನು ಅಪರಾಧಿ ಎಂದು ಘೋಷಿಸಿ ಜಿವಾವಧಿ ಶಿಕ್ಷೆ ವಿಧಿಸಿತ್ತು.
ತುರ್ಕ್ ಸೆಂಚುರಿ ಬಜಾರ್‌ಗೆ ಸ್ಫೋಟಗಳನ್ನು ಸಾಗಿಸಿದ್ದ ಮತ್ತು ವಾಹನಕ್ಕೆ ಆರ್‌ಡಿಎಕ್ಸ್ ಫಿಕ್ಸ್ ಮಾಡಿದ್ದ. ಭೀಕರ ದಾಳಿಯಲ್ಲಿ 113 ಮಂದಿ ಪ್ರಾಣ ಕಳೆದುಕೊಂಡಿದ್ದರು.