ಮುಂಬೈ

ಮಹಾರಾಷ್ಟ್ರ: ಕಲರ್‌ ಫೋಟೋ ಕಾಪಿಯರ್‌ ಬಳಸಿಕೊಂಡು ನಕಲಿ ನೋಟು ಮುದ್ರಣ: 6 ಮಂದಿ ಬಂಧನ

Pinterest LinkedIn Tumblr


ಮುಂಬಯಿ: ಇಲ್ಲಿಂದ ಸುಮಾರು 250 ಕಿ.ಮೀ. ದೂರದ ಪಶ್ಚಿಮ ಮಹಾರಾಷ್ಟ್ರದ ಸಾತಾರದಲ್ಲಿ ಕಲರ್‌ ಫೋಟೋ ಕಾಪಿಯರ್‌ ಬಳಸಿಕೊಂಡು 2000 ಮತ್ತು 500 ರೂ. ನಕಲಿ ನೋಟುಗಳನ್ನು ಮುದ್ರಿಸುತ್ತಿದ್ದರೆನ್ನಲಾದ ಆರು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.

ಪೊಲೀಸರು 26.54 ಲಕ್ಷ ರೂ. ಮುಖ ಬೆಲೆಯ ನಕಲಿ ನೋಟುಗಳನ್ನು ಹಾಗೂ 29.88 ಲಕ್ಷ ರೂ. ಮುಖ ಬೆಲೆಯ ಒಂದು ಬದಿ ಮಾತ್ರವೇ ಮುದ್ರಿಸಲ್ಪಟ್ಟ ನಕಲಿ ನೋಟುಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ಹಿರಿಯ ಪೊಲೀಸ್‌ ಅಧಿಕಾರಿ ತಿಳಿಸಿದ್ದಾರೆ.

ನಿನ್ನೆ ಗುರುವಾರ ಇಲ್ಲಿನ ಕಟೇಶ್ವರ ದೇವಾಲಯದ ಹೊರಗೆ ಇಬ್ಬರು ವ್ಯಕ್ತಿಗಳು ಈ ನಕಲಿ ನೋಟುಗಳನ್ನು ಸಾಚಾ ನೋಟುಗಳಂತೆ ವ್ಯವಹಾರಕ್ಕೆ ಬಳಸಲು ಯತ್ನಿಸಿದಾಗ ಅವರು ಸಿಕ್ಕಿಬಿದ್ದರು. ಕ್ರೈಮ್‌ ಬ್ರಾಂಚ್‌ ತಂಡದವರು ಇವರನ್ನು ತೀವ್ರವಾಗಿ ಪ್ರಶ್ನಿಸಿದಾಗ ಅವರು ಈ ನಕಲಿ ನೋಟು ಮುದ್ರಣದ ಬಗ್ಗೆ ಬಾಯಿ ಬಿಟ್ಟರು ಎಂದು ಹಿರಿಯ ಪೊಲೀಸ್‌ ಅಧಿಕಾರಿ ತಿಳಿಸಿದ್ದಾರೆ.

Comments are closed.