ಮುಂಬೈ

ಎಸ್ಸೆಸ್ಸೆಲ್ಸಿಯನ್ನೂ ಓದದ ಈ ಬಾಲೆಗೆ ಅಮೆರಿಕದ ಎಂಐಟಿಯಿಂದ ಸ್ಕಾಲರ್ಶಿಪ್..!

Pinterest LinkedIn Tumblr

Girl-UNಮುಂಬೈ, ಆ.30- ಅಂಕಕ್ಕಿಂತ ಅರ್ಹತೆ ಮುಖ್ಯ ಎಂಬ ಮಾತನ್ನು 17 ವರ್ಷದ ಪ್ರತಿಭಾವಂತೆ ಬಾಲೆಯೊಬ್ಬಳು ಅಕ್ಷರಶಃ ಸಾಬೀತು ಮಾಡಿದ್ದಾಳೆ. ಪ್ರೌಢಶಾಲೆ ಶಿಕ್ಷಣವನ್ನೂ ಪಡೆಯದ ಈಕೆ ಕಂಪ್ಯೂಟರ್ ಪ್ರೋಗ್ರಾಮಿಂಗ್ನಲ್ಲಿ ಪ್ರಚಂಡಳು. ಈಕೆಯ ಅಗಾಧ ಪ್ರತಿಭೆಗಾಗಿ ಅಮೆರಿಕದ ಮಚಾಸ್ಸುಸೆಟ್ಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಎಂಐಟಿ) ಸ್ಕಾಲರ್ಶಿಪ್ ಪ್ರದಾನ ಮಾಡಿದೆ. ಈಕೆಯ ಹೆಸರು ಮಾಳವಿಕಾ ರಾಜ್ ಜೋಶಿ. ಪ್ರೋಗ್ರಾಮಿಂಗ್ ಒಲಂಪಿಯಡ್ ಎಂದೇ ಕರೆಯಲ್ಪಡುವ ಒಲಂಪಿಯಡ್ ಆಫ್ ಇನ್ಫರ್ಮ್ಶಮ್ಯಾಟಿಕ್ಸ್ (ಐಒಐ) ಮೂರು ಪದಕಗಳನ್ನು (ಎರಡು ಬೆಳ್ಳಿ ಮತ್ತು ಒಂದು ಕಂಚು) ಕೊರಳಿಗೇರಿಸಿದ್ದಾಳೆ.

ಕಂಪ್ಯೂಟರ್ ಪ್ರೋಗ್ರಾಮಿಂಗ್ ಬಗ್ಗೆ ಈಕೆಗಿರುವ ಅಪಾರ ಜ್ಞಾನವನ್ನು ಪರಿಗಣಿಸಿ ಎಂಐಟಿ ಸ್ಕಾಲರ್ಶಿಪ್ ನೀಡಿದೆ. ಇದೇ ವಿಷಯದಲ್ಲಿ ಈಕೆ ವಿಜ್ಞಾನ ಪದವಿ ವ್ಯಾಸಂಗ ಮಾಡುತ್ತಿದ್ದಾಳೆ.
ಒಲಂಪಿಯಡ್ ಪದಕ ವಿಜೇತರಿಗೆ ವಿದ್ಯಾರ್ಥಿಗಳಿಗೆ ಶಿಕ್ಷಣಕ್ಕೆ (ಗಣಿತ, ಭೌತಶಾಸ್ತ್ರ ಮತ್ತು ಕಂಪ್ಯೂಟರ್ ವಿಜ್ಞಾನ) ಎಂಐಟಿ ಸಹಾಯ ಹಸ್ತ ಚಾಚುತ್ತಿದೆ. ಅಚ್ಚರಿ ಸಂಗತಿ ಎಂದರೆ ಮಾಳವಿಕಾ ಎಸ್ಸೆಸ್ಸೆಲ್ಸಿ ಅಥವಾ ಪಿಯುಸಿ ತೇರ್ಗಡೆಯಾಗಿಲ್ಲ. ಆದರೆ ಕಂಪ್ಯೂಟರ್ ವಿಜ್ಞಾನದಲ್ಲಿ ಈಕೆಯ ಸಾಧನೆ ಪರಿಗಣಿಸಿ ವಿದ್ಯಾಭ್ಯಾಸ ಮುಂದುವರೆಸಲು ವಿದ್ಯಾರ್ಥಿವೇತನ ನೀಡಲಾಗಿದೆ.

Comments are closed.