ಮುಂಬೈ,: ಮೆಗಾಸ್ಟಾರ್ ಅಮಿತಾಬ್ ಬಚ್ಚನ್ ನಿರ್ದೇಶಕ ಶಿರಿಷ್ ಕುಂದರ್‌ಗೆ ಶುಭಾಷಯ ಕೋರಿದ್ದಾರೆ. ಕೃತಿ ಕಿರುಚಿತ್ರವು ಮೊನ್ನೆ ತಾನೇ ಯೂ ಟೂಬ್‌ಲ್ಲಿ ಮೂರು ಮಿಲಿಯನ್ ಜನರು ವೀಕ್ಷಿಸಿದ್ದರು. ಅದಲ್ಲದೇ ಕೃತಿ ಶೀರ್ಷಿಕೆಯಡಿ ಮೂಡಿಬಂದಿರುವ ಕಿರುಚಿತ್ರಕ್ಕೆ ಕೃತಿ ಚೌರ್ಯದ ಆರೋಪ ಕೇಳಿ ಬಂದಿತ್ತು.
‘ಕೃತಿ’ ಕಿರು ಸಿನಿಮಾದ ಕುರಿತು ಬಿಗ್‌ಬಿ ಪೋಸ್ಟ್ ಮಾಡಿದ್ದಾರೆ. ಶಿರಿಷ್ ಕುಂದರ್ ಮುದಗೊಳಿಸುವ ಕಿರುಚಿತ್ರ ನೀಡಿದ್ದಾರೆ ಎಂದು ಹೇಳಿದ್ದಾರೆ. ಬಿಗ್‌ಬಿ ಟ್ವಿಟ್‌ಗೆ ಪ್ರತಿಕ್ರಿಯೆ ನೀಡಿರುವ ಶಿರಿಷ್ ಕುಂದರ್ ನಿಮ್ಮ ಅಭಿಮಾನವನ್ನು ಕಾಪಾಡಿಕೊಂಡು ಬರುತ್ತೇನೆ.
ನಿಮ್ಮಗೆ ಧನ್ಯವಾದಗಳು ಎಂದು ಶಿರಿಷ್ ಕುಂದರ್ ತಿಳಿಸಿದ್ದಾರೆ. ನೇಪಾಳಿ ನಿರ್ಮಾಪಕ ಅನಿಲ್ ಎಂಬುವವರು ಕೃತಿ ಸಿನಿಮಾದ ಕಿರುಚಿತ್ರ ಕದ್ದ ಆರೋಪ ಮಾಡಿದ್ದರು. ಅಂತರ್ಜಾಲ ತಾಣದಲ್ಲಿ ಕೃತಿ ಅಪ್‌ಲೋಡ್ ಆಗಿದ್ದೇ ತಡ. ನೇಪಾಳಿ ನಿರ್ದೇಶಕ ಅನಿಲ್ ಎಂಬುವವರು ಫೇಸ್‌ಬುಕ್‌ನಲ್ಲಿ ಕಿರಿಕ್ ತೆಗೆದಿದ್ದರು. ಈ ಮೊದಲು ನಾನು ಮಾಡಿದ್ದ ಬಾಂಬ್ ಎಂಬ ಕಿರುಚಿತ್ರವನ್ನು ಶಿರಿಷ್ ಕಾಪಿ ಮಾಡಿದ್ದಾರೆ ಎಂದು ಆರೋಪ ಮಾಡಿದ್ದರು.
ಮಾನಸಿಕ ಸಮತೋಲನ ಕಳೆದುಕೊಂಡ ವ್ಯಕ್ತಿಯೊಬ್ಬ ತನ್ನ ಪ್ರಿಯತಮೆಯನ್ನೆ ಕೊಲೆ ಮಾಡುವುದು ಈ ಕಿರುಚಿತ್ರದ ಒನ್‌ಲೈನ್ ಕಥೆ.. ಮನೋರೋಗ ತಜ್ಞೆಯಾಗಿ ರಾಧಿಕಾ ಆಪ್ಟೆ ನಡಿಸಿದ್ದಾರೆ.
Comments are closed.