ಮುಂಬೈ

ಮಗುವನ್ನು ಕೊಂದು ರೈಲು ಹಳಿಯಲ್ಲಿ ಎಸೆದ ತಂದೆ

Pinterest LinkedIn Tumblr

murderಮುಂಬೈ: ಈದ್ ಶಾಪಿಂಗ್‌ಗೆಂದು ಕರೆದೊಯ್ದು 2 ವರ್ಷದ ಮಗನನ್ನು ತಂದೆಯೇ ಕೊಂದ ಹೇಯ ಘಟನೆ ಮುಂಬೈನಲ್ಲಿ ನಡೆದಿದೆ.

ಮೃತನನ್ನು ಕೈಫ್ ಖಾನ್ ಎಂದು ಗುರುತಿಸಲಾಗಿದ್ದು, ಆತ ಮಂಗಳವಾರ ಸಂಜೆ 7.30ರ ಸುಮಾರಿಗೆ ತಂದೆಯೊಂದಿಗೆ ಈದ್ ಶಾಪಿಂಗ್‌ಗೆ ಹೋಗಿದ್ದ. ಬಳಿಕ ಇಬ್ಬರು ಹಿಂತಿರುಗಿರಲಿಲ್ಲ. ಹೀಗಾಗಿ ಮಗುವಿನ ತಾಯಿ ಬುಧವಾರ ಬೆಳಿಗ್ಗೆ ಜೆ.ಜೆ ಮಾರ್ಗ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದಳು.

ಪೊಲೀಸರು ಇಬ್ಬರಿಗಾಗಿ ಹುಡುಕಾಟ ನಡೆಸುತ್ತಿದ್ದಾಗ ಪತ್ನಿಗೆ ಫೋನ್ ಕರೆ ಮಾಡಿದ ಕಾದಿರ್ ಮಗನನ್ನು ಕೊಂದು ರೈಲು ಹಳಿಯ ಮೇಲೆ ಬೀಸಾಕಿದ್ದೇನೆ ಎಂದು ಹೇಳಿದ್ದಾನೆ.

ತಕ್ಷಣ ಸ್ಥಳಕ್ಕೆ ಧಾವಿಸಿದ ಪೊಲೀಸರಿಗೆ ಮಗುವಿನ ಶವ ದೊರೆತಿದೆ. ನಿರುದ್ಯೋಗಿಯಾಗಿದ್ದ ಕಾದಿರ್ ಈ ಕೃತ್ಯವನ್ನೇಕೆ ಎಸಗಿದ ಎಂಬುದು ತಿಳಿದು ಬಂದಿಲ್ಲ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Comments are closed.