
ಮುಂಬೈ: ಜೈನ ಭಿಕ್ಷು ಒಬ್ಬರ ಅಂತ್ಯಕ್ರಿಯೆಯನ್ನ ನೆರವೇರಿಸಲು ಭಕ್ತರಿಗೆ ಅವಕಾಶ ನೀಡಿದ್ದು, ಇದಕ್ಕಾಗಿ ಹರಾಜು ಪ್ರಕ್ರಿಯೆ ನಡೆಸಲಾಗಿತ್ತು. ಭಿಕ್ಷುವಿನ ಅಂತ್ಯಸಂಸ್ಕಾರ ನಡೆಸಿ ಪುಣ್ಯ ಪಡೆದುಕೊಳ್ಳಲು ಭಕ್ತರು ಬರೋಬ್ಬರಿ 7 ಕೋಟಿ ರೂ. ಹಣ ನೀಡಿದ್ದಾರೆ.
ಹೌದು. ಮುಂಬೈನ ಜೈನ ಸಮಿತಿ ಇಂತಹದೊಂದು ಅವಕಾಶವನ್ನ ಭಕ್ತರಿಗೆ ನೀಡಿತ್ತು. ಮಧ್ಯಪ್ರದೇಶದ ಧಾರ್ ಜಿಲ್ಲೆಯ ಸಣ್ಣ ನಗರ ರಾಜ್‍ಗರ್‍ನಲ್ಲಿ ಕಳೆದವಾರ ಶ್ರೀ ಮಧ್ವಿಜಯ್ ರವೀಂದ್ರಸೂರಿ ಮಹಾರಾಜಸಾಹೇಬ್ ಜೀ(62) ಭಿಕ್ಷು ಸಾವನ್ನಪ್ಪಿದ್ದರು. ಇವರ ಅಂತ್ಯಕ್ರಿಯೆಯನ್ನ ನಡೆಸಲು ಭಕ್ತರಿಗೆ ಅವಕಾಶ ಕೊಟ್ಟಿತ್ತು ಸಮಿತಿ.
ಅಂತ್ಯಕ್ರಿಯೆಯಲ್ಲಿ ನಡೆಯುವ ಒಟ್ಟು 25 ವಿಧಿವಿಧಾನಗಳಿಗೆ ಹರಾಜು ಕೂಗಲಾಗಿತ್ತು. ಅದರಲ್ಲಿ ಭಿಕ್ಷು, ಪಾದ ತೊಳೆಯುವದು, ಮೃತದೇಹವನ್ನ ಸುತ್ತುವುದಕ್ಕೆ, ಕೊನೆಯ ಆರತಿ ಮಾಡಲು, ಕೇಸರಿ ಮತ್ತು ಗಂಧವನ್ನ ದೇಹದ ಮೇಲೆ ಹಾಕಲು, ಹರಾಜು ಕೂಗಲಾಗಿತ್ತು.
ಈ ಭಿಕ್ಷು ಅಂತ್ಯಕ್ರಿಯೆಯಲ್ಲಿ ಕೂಗಿದ ಹರಾಜಿನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಗೆದ್ದವರು ಚಿನ್ನದ ವ್ಯಾಪರಿಗಳು ಎಂದು ಹೇಳಲಾಗಿದೆ. ಅದರಲ್ಲಿ ದುಬೈನ ಜಯೆಷ್ ಬಾಯ್ ಎಂಬುವವರು 68 ಲಕ್ಷ ರೂ. ನೀಡಿ ಅಂತ್ಯಕ್ರಿಯೆಯ ಮೊದಲ ಹಕ್ಕನ್ನ ಪಡೆದಿದ್ದಾರೆ. ಇನ್ನುಳಿದಂತೆ 2ನೇ ವ್ಯಕ್ತಿ 42 ಲಕ್ಷ ರೂ, ಮೂರನೇ ವ್ಯಕ್ತಿ 27 ಲಕ್ಷ ರೂ, ನಾಲ್ಕನೇ ವ್ಯಕ್ತಿ 20 ಲಕ್ಷ ರೂ. ನೀಡಿದ್ದಾರೆ. ಇನ್ನೂ ಭಿಕ್ಷು ಮೃತದೇಹವನ್ನ ಸುತ್ತೋದಕ್ಕೆ ಭಕ್ತರು ಒಟ್ಟು 52.52 ಲಕ್ಷ ರೂ. ನೀಡಿದ್ದಾರೆ ಎಂದು ಹೇಳಲಾಗಿದೆ.
Comments are closed.