ಮನೋರಂಜನೆ

ಪ್ರೇಮಿಗಳ ದಿನದಂದು ಹಸೆಮಣೆ ಏರಲಿರುವ ಪ್ರೀತಿ ಝಿಂಟಾ ! ಈಕೆಯನ್ನು ಕೈ ಹಿಡಿಯಲಿರುವ ವರ ಯಾರು ಗೊತ್ತೇ…?

Pinterest LinkedIn Tumblr

preethi

ಮುಂಬೈ: ಬಾಲಿವುಡ್ ಡಿಂಪಲ್ ಸುಂದರಿ ಪ್ರೀತಿ ಝಿಂಟಾ ಅವರು ಇದೀಗ ಮತ್ತೆ ಸುದ್ದಿಗೆ ಬಂದಿದ್ದು, ಈ ಬಾರಿ ಅವರ ಮದುವೆ ಬಗ್ಗೆ ಹಲವು ಸುದ್ದಿಗಳು ಸಾಮಾಜಿಕ ಜಾಲತಾಣದಾದ್ಯಂತ ಹರಿದಾಡುತ್ತಿದೆ.

ನಟಿ ಪ್ರೀತಿ ಝಿಂಟಾ ಅವರು ತಮ್ಮ ಅಮೆರಿಕದ ಬಾಯ್ ಫ್ರೆಂಡ್ ಜೀನ್ ಗುಡ್ ಎನಫ್ ಎಂಬುವವರೊಂದಿಗೆ ಇದೇ ಫೆ.14 ರ ಪ್ರೇಮಿಗಳ ದಿನದಂದು ವಿವಾಹ ಮಾಡಿಕೊಳ್ಳಲಿದ್ದಾರೆಂದು ಖಾಸಗಿ ಮಾಧ್ಯಮವೊಂದು ವರದಿ ಮಾಡಿದೆ.

ವರದಿಯಲ್ಲಿ ಇಷ್ಟು ದಿನ ತಮ್ಮ ಪ್ರೀತಿಯನ್ನು ಗುಟ್ಟಾಗಿಟ್ಟುಕೊಂಡು ಬಂದಿದ್ದ ನಟಿ ಪ್ರೀತಿ ಝಿಂಟಾ ಅವರು ಇದೀಗ ತಮ್ಮ ಪ್ರೀತಿಯೊಂದಿಗೆ ವಿವಾಹವಾಗಲಿದ್ದು, ವಿವಾಹವು ಫೆ.12 ರಿಂದ 16 ರೊಳಗಾಗಿ ನಡೆಯಲಿದೆ ಎಂದು ಹೇಳಿಕೊಂಡಿದೆ. ತಮ್ಮ ವಿವಾಹ ವಿಚಾರದ ಕುರಿತಂತೆ ಹಲವು ಚರ್ಚೆಗಳು ಆರಂಭವಾಗಿದ್ದರೂ ಪ್ರೀತಿ ಝಿಂಟಾ ಮಾತ್ರ ಈ ವರೆಗೂ ಯಾವುದೇ ಅಧಿಕೃತ ಹೇಳಿಕೆಯನ್ನು ನೀಡಿಲ್ಲ.

ಮೂಲಗಳ ಪ್ರಕಾರ ಜೀನ್ ಗುಡ್ ಎನಫ್ ಅವರು ಲಾಸ್ ಏಂಜಲೀಸ್ ನಲ್ಲಿ ಹಣಕಾಸು ವಿಶ್ಲೇಷಕರನಾಗಿ ಕಾರ್ಯನಿರ್ವಹಿಸುತ್ತಿದ್ದು, ಪ್ರೀತಿ ಅವರು ನೆಸ್ ವಾಡಿಯಾ ಜೊತೆಗೆ ಸಂಬಂಧ ಮುರಿದು ಕೊಂಡ ಬಳಿಕ ಈತನ ಜೊತೆ ಗುಟ್ಟಾಗಿ ಪ್ರೀತಿ ಮಾಡುತ್ತಿದ್ದರು ಎಂದು ಹೇಳಲಾಗುತ್ತಿದೆ.

Write A Comment