ಮುಂಬೈ

ವಿಮಾನ ಅಪಹರಣ ಬೆದರಿಕೆ: ಯುವಕನ ಸೆರೆ

Pinterest LinkedIn Tumblr

air

ಠಾಣೆ: ಏರ್‌ ಇಂಡಿಯಾ ವಿಮಾನವನ್ನು ಅಪಹರಿಸುವುದಾಗಿ ಬೆದರಿಕೆ ಕರೆ ಮಾಡಿದ್ದ ಮಧ್ಯಪ್ರದೇಶದ 20 ವರ್ಷದ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ. ಮಧ್ಯಪ್ರದೇಶದ ಹಾರ್ದಾ ಜಿಲ್ಲೆಯ ರಾಹತ್‌ಗಾಂವ್‌ ಗ್ರಾಮದಲ್ಲಿ ಬೆದರಿಕೆ ಕರೆ ಮಾಡಿದ ಯುವಕನನ್ನು ಬಂಧಿಸಿದ್ದು, ಪೊಲೀಸರು ಆತನ ಹೆಸರು, ಗುರುತು ಬಹಿರಂಗಪಡಿಸಿಲ್ಲ.

’ಬಂಧಿತನು ಇದೇ ನವೆಂಬರ್‌ 20 ರಂದು ರಾತ್ರಿ 10.25ಕ್ಕೆ ಠಾಣೆಯಲ್ಲಿರುವ ಏರ್‌ ಇಂಡಿಯಾ ಕಾಲ್‌ ಸೆಂಟರ್‌ಗೆ ಕರೆ ಮಾಡಿ ನ. 28 ರಂದು ವಿಮಾನವನ್ನು ಅಪಹರಿಸುವುದಾಗಿ ಬೆದರಿಕೆ ಹಾಕಿದ್ದ. ತಾನು ಐಎಸ್‌ ಸದಸ್ಯ ಎಂದೂ ಹೇಳಿಕೊಂಡಿದ್ದ. ಇದೆಲ್ಲವನ್ನು ತಮಾಷೆಗಾಗಿ ಮಾಡಿರುವುದಾಗಿ ವಿಚಾರಣೆ ಸಂದರ್ಭದಲ್ಲಿ ಯುವಕ ಹೇಳಿದ್ದಾನೆ’ ಎಂದು ಉಪ ಪೊಲೀಸ್‌ ಆಯುಕ್ತ (5ನೇ ವಲಯ) ವಿಲಾಸ್‌ ಚಂದನಶಿವೆ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ದ್ವಿತೀಯ ಪಿಯುಸಿ ಓದುತ್ತಿರುವ ಈತನನ್ನು ಶುಕ್ರವಾರ ಬಂಧಿಸಲಾಯಿತು. ಸ್ಥಳೀಯ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಡಿಸೆಂಬರ್‌ 2ರ ವರೆಗೆ ಪೊಲೀಸ್‌ ವಶಕ್ಕೆ ತೆಗೆದುಕೊಳ್ಳಲಾಗಿದೆ. ಈತನ ಬಳಿ ಮೂರು ಮೊಬೈಲ್‌ ಸಿಮ್‌ ಕಾರ್ಡುಗಳಿವೆ. ಅವುಗಳ ಪೈಕಿ ಒಂದು ಸಿಮ್‌ ಕಾರ್ಡ್‌ನಿಂದ ಈತ ಕರೆ ಮಾಡಿದ್ದ. ಮೊಬೈಲ್‌ ಕರೆ ಆಧರಿಸಿ ಈತನನ್ನು ಪತ್ತೆ ಹಚ್ಚಲಾಯಿತು ಎಂದರು. ರಾಜ್ಯದ ಎಟಿಎಸ್‌ ಹಾಗೂ ಗುಪ್ತಚರ ವಿಭಾಗದವರೂ ಈತನ ವಿಚಾರಣೆ ನಡೆಸುತ್ತಿದ್ದಾರೆ ಎಂದ ಅವರು, ಶ್ರೀನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಹೇಳಿದರು.

Write A Comment