ಮುಂಬೈ

ತುಂಡುಡುಗೆ ತೊಟ್ಟಿದ್ದಕ್ಕೆ ವಿಮಾನದಿಂದ ಕೆಳಗಿಳಿಸಿದರು!

Pinterest LinkedIn Tumblr

vimaಮುಂಬೈ: ತುಂಡು ಉಡುಗೆಗೆ ತೊಟ್ಟ ಕಾರಣಕ್ಕೆ ಮಹಿಳಾ ಪ್ರಯಾಣಿಕಳೊಬ್ಬಳನ್ನು ವಿಮಾನದಿಂದ ಕೆಳಗಿಳಿಸಿದ ಘಟನೆ ಮುಂಬೈನಲ್ಲಿ ನಡೆದಿದೆ.

ಫ್ರಾಕ್ ಧರಿಸಿದ್ದ ರ್ಮಹಿಳೆಯೋರ್ವರು ಕತಾರ್ ಏರವೇಸ್ ವಿಮಾನದ ಮೂಲಕ ದೋಹಾದಿಂದ ಪ್ರಯಾಣಿಸಿದ್ದರು. ಮುಂಬೈನಲ್ಲಿ ಇಳಿದು ನವದೆಹಲಿಗೆ ತೆರಳಲು ಹೊರಟದ್ದ ಅವರನ್ನು ಇಂಡಿಗೋ ಉದ್ಯೋಗಿಗಳು ತಡೆದಿದ್ದಾರೆ.

ಈ ಘಟನೆಯ ಕುರಿತು ಇನ್ನೋರ್ವ ಪ್ರಯಾಣಿಕರಾದ ಪುರಬಿ ದಾಸ್ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದು ಇಂಡಿಗೋದ ಮೂವರು ಪುರುಷ ಉದ್ಯೋಗಿಗಳು ಯುವ ಮಹಿಳೆಗೆ ಕಿರುಕುಳ ನೀಡಿದರು ಎಂದು ಆರೋಪಿಸಿದ್ದಾರೆ.

ತಮ್ಮ ಉದ್ಯೋಗಿಗಳ ವರ್ತನೆಯನ್ನು ಸಮರ್ಥಿಸಿಕೊಂಡಿರುವ ಇಂಡಿಗೋ, ‘ಸಂಸ್ಥೆಯ ಉದ್ಯೋಗಿಗಳಿಗೆ ಡ್ರೆಸ್ ಕೋಡ್‌ ನಿಗದಿ ಪಡಿಸಲಾಗಿದೆ. ಅನುಚಿತ ಉಡುಗೆ ತೊಟ್ಟಿದ್ದ ಮಹಿಳೆ ಹಿಂದೊಮ್ಮೆ ನಮ್ಮದೇ ಸಂಸ್ಥೆಯ ಉದ್ಯೋಗಿಯಾಗಿದ್ದರು. ಅವರ ಸಹೋದರಿ ಈಗಲೂ ನಮ್ಮ ಸಂಸ್ಥೆಯ ಉದ್ಯೋಗಿಯಾಗಿದ್ದಾರೆ. ಪ್ರಯಾಣದ ಸಂದರ್ಭದಲ್ಲಿ ನಮ್ಮ ಸಂಸ್ಥೆಯ ವಿಶೇಷ ಸೌಲಭ್ಯ ಪಡೆಯುವ ಉದ್ಯೋಗಿಗಳ ಕುಟುಂಬಕ್ಕೂ ಇದು ಅನ್ವಯಿಸುತ್ತದೆ. ಡ್ರೆಸ್ ಕೋಡ್ ನಿಯಮ ಉಲ್ಲಂಘನೆ ಮಾಡಿದ್ದಕ್ಕೆ ಅವರನ್ನು ಪ್ರಯಾಣಿಸದಂತೆ ತಡೆಯಲಾಗಿದೆ’, ಎಂದು  ಸ್ಪಷ್ಟನೆ ನೀಡಿದೆ.

ಮಹಿಳೆ ತಾನು ಪ್ರಯಾಣಿಸಬೇಕಾಗಿದ್ದ ವಿಮಾನವನ್ನು ಮಿಸ್ ಮಾಡಿಕೊಂಡಳು. ಆದರೆ ಆಕೆ ಪ್ಯಾಂಟ್ ಧರಿಸಿದ ಬಳಿಕ ಇನ್ನೊಂದು ವಿಮಾನದಲ್ಲಿ ಸಾಗಲು ಸ್ಥಳಾವಕಾಶ ಮಾಡಿಕೊಡಲಾಯಿತು ಎಂದು ತಿಳಿದು ಬಂದಿದೆ.

Write A Comment