ಮುಂಬೈ

ಪ್ರಧಾನಿ ಮೋದಿ ವಿದೇಶ ಪ್ರವಾಸ: ಎಂಎನ್‌ಎಸ್ ಮುಖ್ಯಸ್ಥ ರಾಜ್ ಠಾಕ್ರೆ ವಾಗ್ದಾಳಿ

Pinterest LinkedIn Tumblr

mnsಮುಂಬೈ: ಪ್ರಧಾನಿ ನರೇಂದ್ರ ಮೋದಿಯವರ ವಿದೇಶ ಪ್ರವಾಸದ ಬಗ್ಗೆ ಪ್ರತಿಕ್ರಿಯೆ ನೀಡಿದ ಮಹಾರಾಷ್ಟ್ರ ನವ ನಿರ್ಮಾಣ ಸೇನೆಯ ಮುಖ್ಯಸ್ಥ ರಾಜ್ ಠಾಕ್ರೆ, ದೇಶದ ಇತಿಹಾಸದಲ್ಲಿಯೇ ದೀರ್ಘಾವಧಿ ವಿದೇಶಿ ಪ್ರವಾಸ ಕೈಗೊಂಡ ಪ್ರಧಾನಿಗಳಲ್ಲಿ ಮೋದಿ ಮೊದಲಿಗರು ಎಂದು ಹೇಳಿದ್ದಾರೆ.

ಎಂತಹ ಕೇಂದ್ರ ಸರಕಾರ ನಮ್ಮನ್ನು ಆಳುತ್ತಿದೆ? ದೇಶದಲ್ಲಿರುವ ಸಮಸ್ಯೆಗಳನ್ನು ಪರಿಹರಿಸಲು ಅಗತ್ಯವಾದ ಕ್ರಮಗಳನ್ನು ತೆಗೆದುಕೊಳ್ಳುವ ಬದಲು, ಪ್ರಧಾನಿ ಮೋದಿ ವಿದೇಶ ಪ್ರವಾಸಕ್ಕೆ ತೆರಳುತ್ತಿರುತ್ತಾರೆ ಎಂದು ವಾಗ್ದಾಳಿ ನಡೆಸಿದರು.

ಇಂಡಿಯಾ ಟುಡೇ ಖಾಸಗಿ ಚಾನೆಲ್‌ನೊಂದಿಗೆ ನಡೆಸಿದ ಸಂದರ್ಶನದಲ್ಲಿ ರಾಜ್ ಠಾಕ್ರೆ ಮಾತನಾಡುತ್ತಿದ್ದರು.

ಇದೀಗ ಸಲ್ಮಾನ್ ಖಾನ್ ಬಜರಂಗಿ ಭಾಯಿಜಾನ್ ಪಾರ್ಟ್ 2 ಚಿತ್ರ ಮಾಡುತ್ತಿದ್ದಾರೆ ಎಂದು ಕೇಳಿದ್ದೇನೆ. ಮೋದಿಯನ್ನು ವಿದೇಶಗಳಿಂದ ದೇಶಕ್ಕೆ ವಾಪಸ್ ಕರೆತರುತ್ತಾರೆ ನೋಡಬೇಕು ಎಂದು ಲೇವಡಿ ಮಾಡಿದರು.

ದೇಶದಲ್ಲಿ ಹಲವಾರು ಜಲ್ವಂತ ಸಮಸ್ಯೆಗಳು ಪ್ರತಿನಿತ್ಯ ತಾಂಡವವಾಡುತ್ತಿವೆ. ರೈತರು ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ಕೋಮುಘಟನೆಗಳಲ್ಲಿ ಹೆಚ್ಚಳವಾಗುತ್ತಿವೆ. ದೇಶದಲ್ಲಿ ಕಾನೂನು ಸುವ್ಯವಸ್ಥೆ ಕುಸಿಯುತ್ತಿದ್ದರೂ ಪ್ರಧಾನಿ ಮೋದಿ ಕೇವಲ ವಿದೇಶ ಪ್ರವಾಸಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಿರುವುದು ನಾಚಿಕೆಗೇಡಿತನದ ಸಂಗತಿ ಎಂದು ಮಹಾರಾಷ್ಟ್ರ ನವ ನಿರ್ಮಾಣ ಸೇನೆಯ ಮುಖ್ಯಸ್ಥ ರಾಜ್ ಠಾಕ್ರೆ ಕಿಡಿಕಾರಿದ್ದಾರೆ.

Write A Comment