ಭೂಗತ ಪಾತಕಿ ದಾವೂದ್ ಇಬ್ರಾಹಿಂನ ಸಹೋದರಿ ಚಿತ್ರ ತೆರೆಯ ಮೇಲೆ ಬರುತ್ತಿದ್ದು ಈ ಚಿತ್ರದಲ್ಲಿ ದಾವುದ್ ನ ಸಹೋದರಿ ಪಾತ್ರಕ್ಕೆ ಸೋನಾಕ್ಷಿ ಸಿನ್ಹಾ ಆಯ್ಕೆಯಾಗಿದ್ದಾಳೆ.
ಈ ಕುರಿತು ಸಂತಸ ವ್ಯಕ್ತಪಡಿಸಿರುವ ಸೋನಾಕ್ಷಿ ಸಿನ್ಹಾ ಉತ್ತಮ ಕಥೆ ಹಾಗೂ ಪವರ್ ಫುಲ್ ಪಾತ್ರವಾಗಿದ್ದು, ನಾನು ಯಾವಾಗಲೂ ಜೀವನ ಚರಿತ್ರೆಯನ್ನು ಮಾಡಲು ಬಯಸುತ್ತೇನೆ. ಹಾಗಾಗಿ ಈ ಚಾಲೆಂಜಿಗ್ ಪಾತ್ರ ನಿರ್ವಹಿಸಲು ಒಪ್ಪಿದೆ ಎಂದು ತಿಳಿಸಿದ್ದಾರೆ.
‘ಹಸೀನಾ ದಿ ಕ್ವೀನ್ ಆಫ್ ಮುಂಬೈ’ ಎಂಬ ಈ ಚಿತ್ರಕ್ಕೆ ಮುಬಿನಾ ಬಂಡವಾಳ ಹೂಡುತ್ತಿದ್ದು, ಅಪೂರ್ವ ಲಕ್ಹೈ ನಿರ್ದೇಶಿಸಲಿದ್ದಾರೆ. ಮುಂದಿನ ವರ್ಷ ಚಿತ್ರೀಕರಣ ಆರಂಭವಾಗಲಿದ್ದು, ದಾವುದ್ ಇಬ್ರಾಹಿಂಗೆ 12 ಮಂದಿ ಸಹೋದರಿಯರು ಇದ್ದು ಅದರಲ್ಲಿ ಮುಂಬೈನ ನಾಗ್ಪಾಡದಲ್ಲಿ ವಾಸವಾಗಿದ್ದ ಏಳನೆಯ ಸಹೋದರಿ ಹಸೀನಾ ಪರ್ಕರ್ ದಾವೂದ್‍ಗೆ ಆತ್ಮೀಯವಾಗಿದ್ದಳು. ಆದರೆ 2014ರಲ್ಲಿ ಹಸೀನಾ ಪರ್ಕರ್ ಹೃದಯಾಘಾತದಿಂದ ಮೃತಪಟ್ಟಿದ್ದಳು. ಈಕೆಯ ಕಥೆ ಈಗ ಸಿನಿಮಾ ರೂಪದಲ್ಲಿ ಬರುತ್ತಿರುವುದು ಕುತೂಹಲಕ್ಕೆ ಕಾರಣವಾಗಿದೆ.