ಮನೋರಂಜನೆ

ಜಿ.ಎಸ್.ಬಿ ಮಂಡಳ ಡೊಂಬಿವಲಿ ವಾರ್ಷಿಕ ಕ್ರೀಡೋತ್ಸವ

Pinterest LinkedIn Tumblr

10919038_10153034137751972_6098229873197343128_n

ಮುಂಬಯಿ, ಜ.20: ಜಿ.ಎಸ್.ಬಿ ಮಂಡಳ ಡೊಂಬಿವಲಿಯ ವಾರ್ಷಿಕ ಕ್ರೀಡೆಯು ಡೊಂಬಿವಲಿಯ ಚಂದ್ರಕಾಂತ್ ಪಾಟ್ಕರ್ ವಿದ್ಯಾಲಯದ ಮೈದಾನದಲ್ಲಿ ಕಳೆದ ಭಾನುವಾರ ಜರಗಿತು ಬೆಳಿಗ್ಗೆ ಮಂಡಲದ ಅಧ್ಯಕ್ಷ ಮನೋಹರ್ ಪೈ ದೀಪ ಪ್ರಜ್ವಲಿಸಿ ಕ್ರಿಡೋತ್ಸವಕ್ಕೆ ಚಾಲನೆಯನ್ನೀದ್ಡಿದ್ದು, ವಂದೇ ಮಾತರಂ ಗೀತೆಯೊಂದಿಗೆ ಕ್ರೀಡೆಯು ಪ್ರಾರಂಭ ಗೊಂಡಿತು.

ಐದು ವರ್ಷಕಿಂತ ಚಿಕ್ಕ ಮಕ್ಕಳಿಗೆ ಓಟಗಳು, ಶಾಲಾ ಮಕ್ಕಳಿಗೆ ಜ್ಞಾಪಕಶಕ್ತಿ ಪರೀಕ್ಷೆ, ಒಂಟಿ ಕಾಲಿನ ಓಟ, ವಯಸ್ಕರಿಗೆ ಒಂಟಿ ಕಾಲಿನ ಓಟ, ಬುಕ್ ಬ್ಯಾಲೆನ್ಸಿಂಗ್, ಗುಂಡೆಸೆತ, ಸಂಗೀತ ಕುರ್ಚಿ, ಬ್ಯಾಟ್ಮಿಂಟನ್ ಇತ್ಯಾದಿ ಕ್ರೀಡಾ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ಒಂದು ವರ್ಷದ ಮಗುವಿನಿಂದ 75 ವರ್ಷದ ವಯೋವೃದ್ಧರ ವರೆಗೆ ನೂರಾರು ಕ್ರೀಡಾಭಿಮಾನಿಗಳು ಪಾಲ್ಗೊಂಡು ವಿಜೇತರೆಣಿಸಿದರು.

10917299_10153034106546972_8316150010358697423_n

10502485_10153034111471972_5544786017703510028_n

10382829_10153034131426972_3056738088089953657_n

ಸಾಯಂಕಾಲ ನಡೆಸಲಾದ ಸಮಾರೋಪ ಸಮಾರಂಭದಲ್ಲಿ ವಿಜೇತ ಸರ್ವ ಕ್ರೀಡಾಪಟುಗಳಿಗೆ ಬಹುಮಾನಗಳನ್ನು ವಿತರಿಸಿ ಗೌರವಿಸಲಾಯಿತು. ಮಂಡಳದ ಅಧ್ಯಕ್ಷ ಮನೋಹರ್ ಪೈ ಉಪಾದ್ಯಕ್ಷ ರಾಮಾನಂದ ಪಡಿಯಾರ್, ಕಾರ್ಯದರ್ಶಿ ಪಲಿಮಾರು ನಿತ್ಯಾನಂದ ಕೆ.ಶೆಣೈ, ಖಚಾಂಚಿ ವೆಂಕಟೇಶ್ ಕಾಮತ್ ಹಾಗೂ ಸದಸ್ಯರಾದ ದಿನೇಶ್ ಕುಡ್ವ, ಮುರಳಿಧರ್ ಭಟ್, ನಾರಾಯಣ ಕಾಮತ್, ಶ್ರೀಮತಿ ಕಸ್ತೂರಿ ಕಾಮತ, ವಿನಿತ್ ಕಿಣಿ ಮತ್ತು ರಾಜೇಂದ್ರ ಭಟ್ ಉಪಸ್ಥಿತರಿದ್ದು ಪಾರಿತೋಷಕಗಳನ್ನು ಪ್ರದಾನಿಸಿ ಶುಭಾರೈಸಿದರು

ಮಂಡಳದ ಸದಸ್ಯರುಗಳಾದ ಗಣೇಶ್ ಕಿಣಿ ಹಾಗೂ ಉಪ ಕಾರ್ಯದರ್ಶಿ ವಿಷ್ಣುದಾಸ್ ಮಲ್ಯ ಅವರ ಉಸ್ತುವಾರಿಯಲ್ಲಿ ನೆರವೇರಿದ ಕ್ರಿಡೋತ್ಸವವು ರಾಷ್ಟ್ರಗೀತೆ ಯೊಂದಿಗೆ ಸಂಪನ ಗೊಂಡಿತು.

Write A Comment