ಕರ್ನಾಟಕ

ಕಂಠಪೂರ್ತಿ ಮದ್ಯ ಕುಡಿಸಿ ಭಿಕ್ಷುಕಿ ಮೇಲೆ ಅತ್ಯಾಚಾರ ನಡೆಸಿದ ಕಾಮುಕ ಅರೆಸ್ಟ್

Pinterest LinkedIn Tumblr

ಯಾದಗಿರಿ: ಭಿಕ್ಷುಕಿಯ ಮೇಲೆ ಅತ್ಯಾಚಾರ ಮಾಡಿದ್ದ ಕಾಮುಕನನ್ನು ಪೊಲೀಸರು ಬಂಧಿಸಿದ್ದಾರೆ.

ಯಾದಗಿರಿ ನಗರದ ಹಳೆ ಬಸ್ ನಿಲ್ದಾಣದಲ್ಲಿ ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಕಾಮುಕ ಹನುಮಂತ್(40) ರಾತ್ರಿ ಭಿಕ್ಷುಕಿಗೆ ಕಂಠ ಪೂರ್ತಿ ಮದ್ಯ ಕುಡಿಸಿದ್ದಲ್ಲದೆ ತಾನು ಕುಡಿದು ರೇಪ್ ಮಾಡಿದ್ದಾನೆ. ಭಿಕ್ಷುಕಿ ನಿರಾಕರಿಸಿದ್ದರೂ, ಆಕೆಯ ಮೇಲೆ ಹಲ್ಲೆ ಮಾಡಿ ಅತ್ಯಾಚಾರ ಮಾಡಿದ್ದಾನೆ.

ಹನುಮಂತ್ ಕಲಬುರ್ಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ಸಂಕನೂರ ಗ್ರಾಮದ ನಿವಾಸಿಯಾಗಿದ್ದು, ಸ್ಥಳೀಯರು ಪ್ರಶ್ನಿಸಿದ್ದಾಗ ಭಿಕ್ಷುಕಿಯನ್ನು ನನ್ನ ಹೆಂಡ್ತಿ ಆಗಬೇಕೆಂದು ನಾಟಕ ಮಾಡಿದ್ದ. ಆದರೆ ಅನುಮಾನ ಬಂದ ಸ್ಥಳೀಯರು ಪೊಲೀಸರನ್ನು ಸ್ಥಳಕ್ಕೆ ಕರೆಸಿ ಕಾಮುಕನನ್ನು ಒಪ್ಪಿಸಿದ್ದಾರೆ.

Comments are closed.