ಕರ್ನಾಟಕ

‘ಸಿದ್ದರಾಮಯ್ಯನವರೇ, ಯಾರೂ ಯಾರಪ್ಪನ ಮನೆಯಿಂದ ಕೊಡುವುದಿಲ್ಲ’- ಬಿ.ಸಿ ಪಾಟೀಲ್

Pinterest LinkedIn Tumblr

ಬೆಂಗಳೂರು: ಯಾರೂ ಯಾರಪ್ಪನ ಮನೆಯಿಂದ ಕೊಡುವುದಿಲ್ಲ ಎಲ್ಲರೂ ಸರ್ಕಾರದಿಂದಲೇ ಕೊಡುವುದು ಎಂಬುದು ಸಿದ್ದರಾಮಯ್ಯ ಅವರ ಗಮನದಲ್ಲಿರಲಿ ಎಂದು ಕೃಷಿ ಸಚಿವ ಬಿ.ಸಿ ಪಾಟೀಲ್ ಅವರು ಸರಣಿ ಟ್ವೀಟ್ ಮೂಲಕ ಮಾಜಿ ಸಿಎಂ‌ ಸಿದ್ಧರಾಮಯ್ಯ ವಿರುದ್ಧ ಹರಿಹಾಯ್ದಿದ್ದಾರೆ.

ಸನ್ಮಾನ್ಯ ಸಿದ್ಧರಾಮಯ್ಯನವರೇ ನಿಮ್ಮ ಟೀಕೆಗಳು ಕ್ರಿಯಾತ್ಮಕವಾಗಿರಬೇಕೇ ಹಆಗ್ರಹಿಸಿದ್ದಾರೆ.ಲ್ಲಿ ಅಲ್ಲ. ಕೀಳುಮಟ್ಟದ ಭಾಷೆಯನ್ನು ಬಳಸುವುದರಿಂದ ಜನಾನುರಾಗಿ ಆಗುತ್ತೇನೆ ಎಂದು ನೀವು ಭಾವಿಸಿದ್ದರೆ ಅದು ತಪ್ಪು. ನಿಮ್ಮ ಕಾಲದಲ್ಲಿ ಕೊಡುತ್ತಿದ್ದಂತೆಯೇ ಈಗಲೂ ಕೂಡ ಪಡಿತರ ವ್ಯವಸ್ಥೆ ಅದೇ ಮುಂದುವರಿದಿದೆ. 2 ಕೆಜಿ ಅಕ್ಕಿ ಮಾತ್ರ ಕಡಿಮೆಯಾಗಿದೆ. ಆದರೆ ಈ ಕೋವಿಡ್ ಮತ್ತು ನೆರೆ ಪ್ರವಾಹ ಪರಿಸ್ಥಿತಿ ಯಲ್ಲಿಯೂ ಕೂಡ ಕಿಸಾನ್ ಸಮ್ಮಾನ್ ಯೋಜನೆಯಲ್ಲಿ ನಾವು ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ಹತ್ತುಸಾವಿರ ರೂಪಾಯಿಗಳನ್ನು ಕೊಡುತ್ತಿರುವುದು ನಿಮ್ಮ ಗಮನಕ್ಕೆ ಬಂದಿಲ್ಲವೇ?

ಕೋವಿಡ್ ಸಂಕಷ್ಟದ ಸಮಯದಲ್ಲಿ ಹತ್ತು ಲಕ್ಷ ರೈತರಿಗೆ ಪ್ರತಿಯೊಬ್ಬರಿಗೆ 5 ಸಾವಿರದಂತೆ ಮೆಕ್ಕೆಜೋಳಕ್ಕೆ ಪರಿಹಾರ ಕೊಟ್ಟಿರುವುದು ನಿಮ್ಮ ಗಮನಕ್ಕೆ ಬಂದಿಲ್ಲವೇ? ಈ ರೀತಿ ಕೀಳು ಮಟ್ಟದ ಪ್ರಚಾರವನ್ನು ನಿಲ್ಲಿಸುವುದು ಒಳ್ಳೆಯದು.

ಜನರಿಗೆ ಅಕ್ಕಿ ಕೊಡುತ್ತಿದ್ದೆವು ಎಂದು ಹೇಳುವ ಸಿದ್ದರಾಮಯ್ಯನವರು ಈ ಅಕ್ಕಿಯನ್ನು ಯಾರೂ ಸಹ ಯಾರಪ್ಪನ ಮನೆಯಿಂದ ಕೊಡುವುದಿಲ್ಲ ಎಂಬುದನ್ನು ತಿಳಿಯಬೇಕು. ಕೀಳುಮಟ್ಟದ ಮಾತು ಭಾಷಾ ಪ್ರಯೋಗದಿಂದ ಸರ್ಕಾರವನ್ನು ಟೀಕಿಸಿದ್ದ ಮಾತ್ರಕ್ಕೆ ಸಿದ್ದರಾಮಯ್ಯ ಜನಾನುರಾಗಿಗಳಾಗುತ್ತಾರೆ ಎಂದು ಒಂದು ವೇಳೆ ಭಾವಿಸಿದ್ದರೆ ಅದು ಅವರ ತಪ್ಪುಕಲ್ಪನೆ ಹಾಗೂ ಮೂರ್ಖತನವಾಗುತ್ತದೆ.

ಬಿಜೆಪಿ ಸರ್ಕಾರ ಬಿಪಿಎಲ್ ಕಾರ್ಡುದಾರ ಪ್ರತಿಯೊಬ್ಬರಿಗೆ 5 ಕೆ.ಜಿ ಅಕ್ಕಿ 1 ಕಾರ್ಡಿಗೆ 2 ಕೆ.ಜಿ. ಗೋಧಿ ನೀಡುತ್ತದೆ. ಅಂತ್ಯೋದಯ ಕಾರ್ಡಿಗೆ 35 ಕೆ.ಜಿ ಅಕ್ಕಿಯನ್ನು ಈ ಮೊದಲಿನಂತೆಯೇ ನೀಡುತ್ತಿದ್ದೆ. ಕೇವಲ ಪ್ರಚಾರಕ್ಕಾಗಿಯೋ ಅಥವಾ ಕ್ರಿಯಾಶೀಲರಾಗಿದ್ದೇವೆ ಎಂದು ತೋರಿಸಿಕೊಳ್ಳಲೋ ಅಥವಾ ಸರ್ಕಾರವನ್ನು ಉದ್ದೇಶಪೂರಕವಾಗಿ ಟೀಕಿಸಲೇಬೇಕಂತಲೋ ಟೀಕಿಸಬಾರದು. ಮುಖ್ಯಮಂತ್ರಿಗಳ ವಿರುದ್ಧ ಕೀಳುಮಟ್ಟದ ಭಾಷೆ ಬಳಸುವುದನ್ನು ಬಿಡಬೇಕು ಎಂದು ಆಗ್ರಹಿಸಿದ್ದಾರೆ.

Comments are closed.