ಕರ್ನಾಟಕ

ಕೆಎಎಸ್ ಅಧಿಕಾರಿ ಸುಧಾಗೆ ಮತ್ತೆ ಶಾಕ್ ಕೊಟ್ಟ ಎಸಿಬಿ; ಬೆಂಗಳೂರಿನ 9 ಕಡೆ ದಾಳಿ

Pinterest LinkedIn Tumblr

ಬೆಂಗಳೂರು: ಕಳೆದೆರಡು ವಾರಗಳ ಹಿಂದೆ ಕೆಎಎಸ್ ಅಧಿಕಾರಿ ಸುಧಾ ಮನೆ ಹಾಗೂ ಏಕಕಾಲದಲ್ಲಿ ಎಸಿಬಿ ದಾಳಿ ನಡೆಸಿದ್ದು ಇಂದು (ಮಂಗಳವಾರ) ಮತ್ತೆ ಎಸಿಬಿ ಶಾಕ್ ನೀಡಿದೆ. ಸುಧಾ ಆಪ್ತರ ಮನೆಯ ಮೇಲೆ ದಾಳಿ ನಡೆಸಲಾಗಿದೆ. ಮಂಗಳವಾರ ಬೆಳಿಗ್ಗೆ ಒಟ್ಟು ಒಂಬತ್ತು ಕಡೆಗಳಲ್ಲಿ ಏಕಕಾಲದಲ್ಲಿ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ಇಂದು ಬೆಳಗ್ಗೆ ಕೆಎಎಸ್ ಅಧಿಕಾರಿ ಸುಧಾ ಮನೆ ಹಾಗೂ ಸುಧಾ ಸ್ನೇಹಿತರು, ಕುಟುಂಬ ಸದಸ್ಯರ ಮನೆಗಳು ಸೇರಿ ಒಟ್ಟು ಒಂಭತ್ತು ಕಡೆಗಳಲ್ಲಿ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ನವೆಂಬರ್ 7ರಂದು ಸುಧಾ ಅವರ ನಿವಾಸದ ಮೇಲೆ ಎಸಿಬಿ ಅಧಿಕಾರಿಗಳು ದಾಳಿ ಮಾಡಿದ್ದರು. ಬೆಂಗಳೂರು, ಉಡುಪಿ ಸೇರಿದಂತೆ ಹಲವೆಡೆ ದಾಳಿ ನಡೆಸಿ ಮಹತ್ವದ ದಾಖಲೆಗಳು, ಚಿನ್ನಾಭರಣಗಳನ್ನು ವಶಕ್ಕೆ ಪಡೆದಿದ್ದರು. ಈ ವೇಳೆ ಬಹಳಷ್ಟು ಅಕ್ರಮ ಆಸ್ತಿ ಪತ್ತೆಯಾಗಿತ್ತು ಎಂಬ ಮಹಿತಿ ಅಭ್ಯವಾಗಿತ್ತು.

Comments are closed.