ಕರ್ನಾಟಕ

ಗಣೇಶನ ಅಕ್ಕ ಪಕ್ಕ ಮಸೀದಿ, ಏಸು: ಮೈಮೇಲೆ ವಿವಾದ ಎಳೆದುಕೊಂಡ ಶಾಸಕಿ ಸೌಮ್ಯ ರೆಡ್ಡಿ

Pinterest LinkedIn Tumblr


ಬೆಂಗಳೂರು: ಒಂದೇ ಫೋಟೊದಲ್ಲಿರುವ ಗಣಪತಿ, ಮಸೀದಿ, ಏಸು ದೇವರುಗಳಿಗೆ ಪೂಜಿಸುವ ಮೂಲಕ ಶಾಸಕಿ ಸೌಮ್ಯ ರೆಡ್ಡಿ ಹಾಗೂ ಮಾಜಿ ಸಚಿವ ರಾಮಲಿಂಗಾ ರೆಡ್ಡಿ ವಿವಾದ ಎಳೆದುಕೊಂಡಿದ್ದಾರೆ.

ಫೋಟೊದಲ್ಲಿ ಶಾಸಕಿ ಸೌಮ್ಯ ರೆಡ್ಡಿ ಹಾಗೂ ಮಾಜಿ ಸಚಿವ ರಾಮಲಿಂಗಾ ರೆಡ್ಡಿ ಇಬ್ಬರು ಸೇರಿಕೊಂಡು ಮೂರು ಧರ್ಮಗಳ ದೇವರಿರುವ ಫೋಟೊವನ್ನು ಇಟ್ಟು ಅದಕ್ಕೆ ಹೂ ಮಾಲೆ ಹಾಕಿದ್ದಾರೆ. ಅಲ್ಲದೆ ಸೌಮ್ಯ ರೆಡ್ಡಿ ಅದಕ್ಕೆ ಆರತಿ ಬೆಳಗುತ್ತಾರೆ. ಈ ಎಲ್ಲಾ ಕೆಲಸಗಳಿಗೆ ರಾಮಲಿಂಗಾ ರೆಡ್ಡಿ ಸಾಥ್‌ ನೀಡಿದ್ದಾರೆ.

ಈ ಫೋಟೊವನ್ನು ಶೇರ್‌ ಮಾಡಿಕೊಂಡು ವಕೀಲೆ, ಸಾಮಾಜಿಕ ಕಾರ್ಯಕರ್ತೆ ಮೀರಾ ರಾಘವೇಂದ್ರ ಎಂಬವರು ಟ್ವೀಟ್‌ ಮಾಡಿದ್ದು “ಈ ತರದ ಆಚರಣೆ ಬೇಕಿತ್ತಾ ಅಪ್ಪಾ ಮಗಳಿಗೆ!? ಇಸ್ಲಾಂನಲ್ಲಿ ಮಂಗಳಾರತಿಗೆ ಅವಕಾಶ ಇದ್ಯಾ!? ಇದನ್ನು ಮುಸ್ಲಿಮರು ಒಪ್ಪುವರೇ/ ವಿರೋಧಿಸುವರೇ !? ಅಥವಾ ಕಾಂಗ್ರೆಸಿಗರು ಏನೇ ಮಾಡಿದ್ರು ಓಕೆ ಎನ್ನುವರೇ!? ಬಾಯಿ ಬಿಟ್ಟು ಮೌಲ್ವಿಗಳು ಉತ್ತರಿಸಿ” ಎಂದು ಪ್ರಶ್ನಿಸಿದ್ದಾರೆ.

ಇನ್ನು ಮೀರಾ ಅವರ ಟ್ವೀಟ್‌ ಭಾರೀ ವಾದ ಪ್ರತಿವಾದಕ್ಕೆ ಕಾರಣವಾಗಿದೆ. ಅನೇಕರು ಇಸ್ಲಾಂನಲ್ಲಿ ಮೂರ್ತಿ ಪೂಜೆಯೇ ಇಲ್ಲ ಇದು ಭಾರೀ ನಾಟಕ ಎಂದು ಟ್ವೀಟ್‌ ಮಾಡಿದ್ದಾರೆ. ಮತ್ತೊಬ್ಬರು ಇದು ಜಾತ್ಯಾತೀತತೆಯ ಪರಮಾವಧಿ ಎಂದಿದ್ದಾರೆ. ಇನ್ನು ಸೌಮ್ಯ ರೆಡ್ಡಿ ಪರ ಕೆಲವರು ಬ್ಯಾಟ್‌ ಬೀಸಿದ್ದು, ಅಕ್ಕ ಇದು ಜಾತ್ಯತೀತ ಭಾರತ ಇಲ್ಲಿ ಅವರವರ ಆಚರಣೆ ಮಾಡಲು ಸಂಪೂರ್ಣ ಹಕ್ಕಿದೆ. ಅವರ ನಂಬಿಕೆ ಅವ್ರಿಗೆ ಬಿಟ್ಟಿದು ಎಂದು ಮೀರಾ ಅವರಿಗೆ ಟಾಂಗ್‌ ಕೊಟ್ಟಿದ್ದಾರೆ.

Comments are closed.