ಕರ್ನಾಟಕ

ಹೆಂಡತಿಯ ಹೆಸರಿನಲ್ಲಿರುವ ಗೃಹ ಸಾಲ ಮನ್ನಾಕ್ಕಾಗಿ ಪತಿ ಮಾಡಿದ ಭೀ#ಕರ ಕೃತ್ಯವೇನು ಗೊತ್ತಾ?

Pinterest LinkedIn Tumblr


ಹೊನ್ನಾಳಿ: ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ಪತ್ನಿಯನ್ನು ಪತಿಯೇ ಮನಬಂದಂತೆ ಥ#ಳಿಸಿ ಕತ್ತು ಹಿ#ಸುಕಿ ಕೊ#ಲೆ ಮಾಡಿರುವ ಘಟನೆ ತಾಲೂಕಿನ ಸಿಂಗಟಗೆರೆ ಗ್ರಾಮದಲ್ಲಿ ನಡೆದಿದೆ.

ಆ. 27ರಂದು ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ಪತ್ನಿ ರೋಜಾಳನ್ನು ಆಕೆಯ ಪತಿ ಅಶೋಕ ಎಂಬಾತ ಥ#ಳಿಸಿ, ಕತ್ತು ಹಿ#ಸುಕಿದ್ದ. ನಂತರ ಮಾವನಿಗೆ ಕರೆ ಮಾಡಿ, ನಿಮ್ಮ ಮಗಳು ಪ್ರಜ್ಞೆ ತಪ್ಪಿ ಬಿದ್ದಿದ್ದಾಳೆ ಎಂದು ಸುಳ್ಳು ಹೇಳಿದ್ದ. ಆಕೆಯನ್ನು ಕರೆದೊಯ್ದು ಹೊನ್ನಾಳಿ, ಶಿವಮೊಗ್ಗದಲ್ಲಿ ಚಿಕಿತ್ಸೆ ಕೊಡಿಸಿ, ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಿಸದೆ ಆಕೆ ಸೆ. 3ರಂದು ಮೃ#ತಪಟ್ಟಿದ್ದಳು!

ಮಗಳ ಸಾ#ವಿನಿಂದ ಅನುಮಾನಗೊಂಡ ಮಾವ ಶಿವಮೊಗ್ಗ ಜಿಲ್ಲೆಯ ರಾಮನಗರದ ಹಾಲೇಶಪ್ಪ, ಅಳಿಯನ ವಿರುದ್ಧ ಸೆ. 14ರಂದು ಹೊನ್ನಾಳಿ ಠಾಣೆಯಲ್ಲಿ ದೂ#ರು ದಾಖಲಿಸಿದ್ದರು. ಆ#ರೋಪಿ ಅಶೋಕನನ್ನು ಬಂ#ಧಿಸಿ ವಿಚಾರಿಸಿದಾಗ ತಾನೇ ಪತ್ನಿಯನ್ನು ಕೊಂ#ದಿರುವುದಾಗಿ ಒಪ್ಪಿಕೊಂಡಿದ್ದಾನೆ ಎಂದು ಸಿಪಿಐ ಟಿ.ವಿ.ದೇವರಾಜ್ ತಿಳಿಸಿದ್ದಾರೆ.

ಪತ್ನಿಯೇ ಇಲ್ಲವಾದರೆ ಆಕೆಯ ಹೆಸರಿನ ಮೇಲಿರುವ ಗೃಹ ಸಾಲ ಮನ್ನಾ ಆಗುತ್ತದೆ ಎಂಬ ದುರುದ್ದೇಶದಿಂದ ಕೊ#ಲೆ ಮಾಡಿದ್ದಾನೆ. ಇದಲ್ಲದೆ ಈತನಿಗೆ ಬೇರೊಬ್ಬ ಮಹಿಳೆ ಜತೆ ಅ#ನೈತಿಕ ಸಂಬಂಧ ಇತ್ತು. ಈ ವಿಷಯ ಈತನ ಪತ್ನಿಗೆ ಗೊತ್ತಿತ್ತು. ಈ ಸಂಬಂಧ ಆಗಾಗ ಜ#ಗಳವೂ ಆಗುತ್ತಿತ್ತು. ಆದ್ದರಿಂದ ಆ ವಿಷಯವನ್ನು ಸಂಬಂಧಿಕರಿಗೆ ತಿಳಿಸುತ್ತಾಳೆಂಬ ಭಯವೂ ಕೊ#ಲೆಗೆ ಕಾರಣವಿರಬಹುದು ಎಂದು ಪೊಲೀಸರು ಹೇಳಿದ್ದಾರೆ.

Comments are closed.