ಕರ್ನಾಟಕ

ಮೈಸೂರು ದಸರಾ ಆನೆಗಳಿಗೂ ನಡೆಯಲಿದೆ ಕೊರೋನಾ ಪರೀಕ್ಷೆ..!?

Pinterest LinkedIn Tumblr

ಮೈಸೂರು: ಕೊರೋನಾ ಅಟ್ಟಹಾಸ ದಿನೇದಿನೇ ಹೆಚ್ಚುತ್ತಿರುವ ಬೆನ್ನಲ್ಲೇ ಪ್ರಸಿದ್ಧ ಮೈಸೂರು ದಸಾರಕ್ಕೆ ಆಗಮಿಸುವ ಆನೆಗಳಿಗೂ ಕೊರೋನಾ ಪರೀಕ್ಷೆ ನಡೆಸಲು ನಿರ್ಧರಿಸಲಾಗಿದೆ. ಮುಂದಿನ ತಿಂಗಳಿನಲ್ಲಿ ನಡೆಯುವ ಸರಳ ದಸರಾ ಆಚರಣೆಯಲ್ಲಿ ವೈರಸ್ ನಿಂದ ಆನೆಗಳನ್ನು ರಕ್ಷಿಸಲು ಮುಂಜಾಗ್ರತಾ ಕ್ರ ಮ ಕೈಗೊಳ್ಳಲು ನಿರ್ಧರಿಸಲಾಗಿದೆ.

(ಸಾಂದರ್ಭಿಕ ಚಿತ್ರ)

ಮೈಸೂರು ಅರಮನೆಯಲ್ಲಿರುವ ದಸರಾ ಆನೆಗಳನ್ನು ನೋಡಲು ಪ್ರವಾಸಿಗರಿಗೆ ನಿರ್ಬಂಧ ಹೇರಲಾಗಿದೆ. ಜೊತೆಗೆ ಆನೆಗಳಿರುವ ಸ್ಥಳಕ್ಕೆ ಪದೇ ಪದೇ ಹೋಗದಂತೆ ಮಾವುತರಿಗೂ ಸೂಚನೆ ನೀಡಲಾಗಿದೆ.

ದಸರಾ ಆಚರಣೆ ಮುಗಿದ ನಂತರ ಅವುಗಳಿಗೆ ಸೋಂಕು ತಗುಲಿದೆಯೇ ಅಥವಾ ಇಲ್ಲವೇ ಎಂಬುದನ್ನು ಪರೀಕ್ಷಿಸಲು ಆನೆಗಳು ಶಿಬಿರಕ್ಕೆ ತೆರಳುವ ಮುನ್ನ ಕೊರೋನಾ ಪರೀಕ್ಷೆ ನಡೆಸಲಾಗುವುದು ಎಂದು ಅರಣ್ಯ ಅಧಿಕಾರಿಗಳು ತಿಳಿಸಿದ್ದು ಆನೆಗಳ ಜೊತೆ ಆಗಮಿಸುವ ಮಾವುತರು, ಕಾವಾಡಿಗರಿಗೂ ಆರೋಗ್ಯ ತಪಾಸಣೆ ಮಾಡಿಸಲಾಗುತ್ತದೆ ಎಂದು ತಿಳಿದುಬಂದಿದೆ.

Comments are closed.