ಕರ್ನಾಟಕ

ದುಡ್ಡಿಗಾಗಿ 4 ‌ತಿಂಗಳ ಹೆಣ್ಣು ಮಗುವನ್ನೇ ಮಾರಾಟ ಮಾಡಿದ ಹೆತ್ತವರು

Pinterest LinkedIn Tumblr


ಚಿಂತಾಮಣಿ : ಹೆತ್ತ ಮಗುವನ್ನೇ ಹಣಕ್ಕಾಗಿ ಮಾರಾಟ ಮಾಡಿದ ಘಟನೆ ಚಿಂತಾಮಣಿ ತಾಲ್ಲೂಕು ತಿನಕಲ್ಲು ಗ್ರಾಮದಲ್ಲಿ ಘಟನೆ ನಡೆದಿದೆ. ತಿನಕಲ್ಲು ಗ್ರಾಮದ ನರಸಿಂಹಮೂರ್ತಿ ಮಹಾಲಕ್ಷ್ಮಿ ದಂಪತಿಗಳ ತನ್ನ 4 ‌ತಿಂಗಳ ಹೆಣ್ಣು ಮಗುವನ್ನು ಬೇರೆ ಗ್ರಾಮದ ಅಪರಿಚಿತ ವ್ಯಕ್ತಿಗಳಿಗೆ ಒಂದು ಲಕ್ಷ ರೂ. ಹಣಕ್ಕೆ ಮಾರಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ಎರಡು- ಮೂರು ದಿನ ಮಗು ಕಾಣದೆ ಇದ್ದಾಗ, ಮಗುವನ್ನು ಏನೋ ಮಾಡಿದ ಹಣದಲ್ಲಿ ತಂದೆ ನರಸಿಂಹ ಮೂರ್ತಿ ಕಂಠಪೂರ್ತಿ ಕುಡಿದು ಊರೆಲ್ಲಾ ತೇಲಾಡ್ತಾ ಇದ್ದದ್ದು ನೋಡಿ ಅನುಮಾನಗೊಂಡ ಗ್ರಾಮಸ್ಥರು ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದಿದ್ದಾರೆ. ತಕ್ಷಣ ಕಾರ್ಯಪ್ರವೃತ್ತರಾಗಿ ಸ್ಥಳಕ್ಕೆ ಆಗಮಿಸಿದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಿ ಮಗುವಿನ ಪೋಷಕರ ವಿಚಾರಣೆ ನಡೆಸಿದ್ದಾರೆ. ಕಡು ಬಡತನ ಇದ್ದದ್ದರಿಂದ, ಬಡತನವೇ ಮಗುವಿನ ಮಾರಾಟಕ್ಕೆ ಕಾರಣ ಎಂದು ತಿಳಿದು ಬಂದಿದೆ.

ವಿಚಾಣೆ ವೇಳೆ, ಮಗುವನ್ನು ಮಾರಿದ ಹಣವನ್ನು ಬ್ಯಾಂಕಿನಲ್ಲಿ ಇಟ್ಟಿರುವುದಾಗಿ ತಾಯಿ ಮಹಾಲಕ್ಷ್ಮೀ ಸಂಕಷ್ಟ ಹಂಚಿಕೊಂಡಿದ್ದಾರೆ ಎಂದು ಉನ್ನತ ಮೂಲಗಳಿಂದ ತಿಳಿದು ಬಂದಿದೆ. ಅಧಿಕಾರಿಗಳ ಮುಂದೆ ಮಗು ಮಾರಿರುವುದನ್ನು ಮಗುವಿನ ತಾಯಿ ಮಹಾಲಕ್ಷ್ಮೀ ಒಪ್ಪಿಕೊಂಡಿದ್ದಾರೆ. ಕಡು ಬಡತನ, ಕುಡುಕ ಗಂಡನ ಕಾಟ ತಾಳಲಾರದೆ ಮಗುವನ್ನು ಮಾರಾಟ ಮಾಡಿದ್ದೇವೆ ಎಂದು ತಪ್ಪು ಒಪ್ಪಿಕೊಂಡಿದ್ದಾರೆ ಎಂದು ತಿಳಿದುಬರುತ್ತದೆ.

ಈಗಲೋ ಆಗಲೋ ಬಿದ್ದು ಹೋಗುವ ಹಂತ ತಲುಪಿರುವ ಮನೆ ರಿಪೇರಿಗೂ ಹಣವಿಲ್ಲದ ಕಾರಣ ಮಗು ನೀಡಿ ಹಣ ಪಡೆದಿದ್ದಾರೆ ಎಂದು ಹೇಳಲಾಗುತ್ತಿದೆ. ಇನ್ನು ಮಗುವನ್ನು ಹಾಗೂ ತಂದೆ ತಾಯಿಯನ್ನು ಚಿಕ್ಕಬಳ್ಳಾಪುರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಜಿಲ್ಲಾ ಅಧಿಕಾರಿ ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.

Comments are closed.