ಕರ್ನಾಟಕ

ವಿರೋಧದ ನಡುವೆ ಮದುವೆಯಾದ ಅಂತರ್​ಧರ್ಮಿಯ ಪ್ರೇಮಿಗಳ ಪರದಾಟ

Pinterest LinkedIn Tumblr


ಹಾವೇರಿ: ಕುಟುಂಬಸ್ಥರಿಂದ ಜೀವ ಬೆದರಿಕೆ ಇದೆ. ನಮಗೆ ರಕ್ಷಣೆ ಕೊಡಿ ಎಂದು ಗೃಹ ಸಚಿವರು, ಜಿಲ್ಲಾಧಿಕಾರಿ ಹಾಗೂ ಮಹಿಳಾ ಆಯೋಗಕ್ಕೆ ಯುವಜೋಡಿಯೊಂದು ಮನವಿ ಮಾಡಿಕೊಂಡಿದೆ.

ಜಿಲ್ಲೆಯ ಶಿಗ್ಗಾಂವ ಪಟ್ಟಣದ ಜಯಶ್ರೀ ಹುಣಸಿಕಟ್ಟಿ ಹಾಗೂ ಹಾನಗಲ್ ತಾಲೂಕಿನ ನೀರಲಗಿ ಗ್ರಾಮದ ಅಲ್ತಾಫ್​ ಯತ್ನಳ್ಳಿ ಪರಸ್ಪರ ಪ್ರೀತಿಸುತ್ತಿದ್ದರು. ಆದರೆ, ಅಂತರ್​ಧರ್ಮ ಹಿನ್ನೆಲೆಯಲ್ಲಿ ಇವರಿಬ್ಬರ ಮದುವೆಗೆ ಯುವತಿಯ ಕುಟುಂಬಸ್ಥರು ವಿರೋಧಿಸಿದ್ದರು.

ವಿರೋಧದ ನಡುವೆಯೂ ಇದೀಗ ಇಬ್ಬರು ವಿವಾಹ ಮಾಡಿಕೊಂಡಿದ್ದಾರೆ. ಇದರ ಬೆನ್ನಲ್ಲೇ ನಮಗೆ ಜೀವ ಬೆದರಿಕೆ ಹಾಕುತ್ತಿದ್ದಾರೆ ಎಂದು ತನ್ನ ಸಹೋದರರ ವಿರುದ್ಧವೇ ಯುವತಿ ಆರೋಪಿಸಿದ್ದಾಳೆ. ಅಲ್ಲದೆ, ತನ್ನ ಪತಿಯ ಮೇಲೆ ಹಲ್ಲೆ ಮಾಡಿದ್ದಾರೆ. ಮನೆಗೆ ನುಗ್ಗಿ ಕಾರು, ಪೀಟೋಪಕರಣವನ್ನು ಧ್ವಂಸ ಮಾಡಿದ್ದಾರೆಂದು ದೂರಿದ್ದಾಳೆ.

ಸದ್ಯ ಮನೆ ಬಿಟ್ಟು ಇಬ್ಬರು ಅಜ್ಞಾತ ಸ್ಥಳದಲ್ಲಿದ್ದಾರೆ. ಅಲ್ಲಿಂದಲೇ ಜಾಲತಾಣ ಮೂಲಕ ಗೃಹ ಸಚಿವರು, ಜಿಲ್ಲಾಧಿಕಾರಿ ಹಾಗೂ ಮಹಿಳಾ ಆಯೋಗಕ್ಕೆ ಮನವಿ ನವಜೋಡಿ ಮನವಿ ಮಾಡಿಕೊಂಡಿದೆ.

Comments are closed.