ಕರ್ನಾಟಕ

ಭಾರತದ ಟಿಕ್ ಟಾಕ್ ನ್ನು ಖರೀದಿಸಲಿರುವ ಅಂಬಾನಿ?

Pinterest LinkedIn Tumblr


ಬೆಂಗಳೂರು: ಭಾರತದ ಪ್ರತಿಷ್ಠಿತ ರಿಲಾಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ (ಆರ್ ಐಎಲ್) ಭಾರತದಲ್ಲಿ ಟಿಕ್ ಟಾಕ್ ನ್ನು 5$ ಬಿಲಿಯನ್ ಗೆ ಖರೀದಿಸುವ ಸಾಧ್ಯತೆ ಇದೆ.

ಬೈಟ್ ಡಾನ್ಸ್ ಸಂಸ್ಥೆಯ ಟಿಕ್ ಟಾಕ್ ಜೊತೆಗೆ ಅಂಬಾನಿ ಮಾಲಿಕತ್ವದ ಸಂಸ್ಥೆಯೊಂದಿಗೆ ಖರೀದಿಗೆ ಸಂಬಂಧಿಸಿದಂತೆ ಮಾತುಕತೆ ಪ್ರಾರಂಭಿಸಿದ್ದು 5$ಬಿಲಿಯನ್ ಗೆ ಖರೀದಿಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ಚೀನಾದ ಹೊರಭಾಗದಲ್ಲಿ ಕಿರು ವಿಡಿಯೋಗಳಿಗೆ ಭಾರತ ಅತಿ ದೊಡ್ಡ ಮಾರುಕಟ್ಟೆಯಾಗಿದ್ದು, ಈವರೆಗೂ 611 ಮಿಲಿಯನ್ ಡೌನ್ ಲೋಡ್ ಗಳಾಗಿವೆ. ಆದರೆ ಆದಾಯದ ವಿಷಯದಲ್ಲಿ ಚೀನಾ, ಅಮೆರಿಕ, ಬ್ರಿಟನ್ ಟಿಕ್ ಟಾಕ್ ನ ಆದಾಯದ ಶೇ.90 ರಷ್ಟು ಪಾಲನ್ನು ಹೊಂದಿದೆ.

ರಿಲಾಯನ್ಸ್ ಜಿಯೋ ನಲ್ಲಿ ಹೂಡಿಕೆ ಮಾಡಿದ್ದ ಫೇಸ್ ಬುಕ್ ಸಹ ಇತ್ತೀಚೆಗಷ್ಟೇ ಇನ್ಸ್ಟಾಗ್ರಾಮ್ ರೀಲ್ಸ್ ನ್ನು ಭಾರತದಲ್ಲಿ ಪರಿಚಯಿಸಿ ಕಿರು ವಿಡಿಯೋಗಳನ್ನು ಅಪ್ ಲೋಡ್ ಮಾಡಿ ಹಂಚಿಕೊಳ್ಳುವ ವೇದಿಕೆಯನ್ನು ಸೃಷ್ಟಿಸಿತ್ತು. ಟಿಕ್ ಟಾಕ್ ಗಿಂತಲೂ ಫೇಸ್ ಬುಕ್ ಭಾರತದಲ್ಲಿ ಹೆಚ್ಚಿನ ವ್ಯಾಪ್ತಿ ಹೊಂದಿದೆ.

Comments are closed.