ಕರ್ನಾಟಕ

ರಾಜ್ಯದ 7 ಜಿಲ್ಲೆಗಳಲ್ಲಿ ಆ. 13ರವರೆಗೂ ಭಾರೀ ಮಳೆ

Pinterest LinkedIn Tumblr


ಕರ್ನಾಟಕದ ಮಲೆನಾಡು, ಕರಾವಳಿಯ ಭಾಗದಲ್ಲಿ 2 ದಿನಗಳಿಂದ ಮಳೆ ಕೊಂಚ ಕಡಿಮೆ ಆಗಿತ್ತು. ಆದರೆ ಇಂದಿನಿಂದ ರಾಜ್ಯದಲ್ಲಿ ಇನ್ನೂ 5 ದಿನ ಭಾರೀ ಮಳೆಯಾಗುವ ಸಾಧ್ಯತೆಯಿದೆ. ಇಂದಿನಿಂದ ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು, ಉತ್ತರ ಕನ್ನಡ, ಕೊಡಗು, ಶಿವಮೊಗ್ಗ, ಹಾಸನದಲ್ಲಿ ಮಳೆ ಹೆಚ್ಚಾಗುವ ಸಾಧ್ಯತೆಗಳಿವೆ. ಇದರಿಂದಾಗಿ ಈ ಜಿಲ್ಲೆಗಳಲ್ಲಿ ರೆಡ್ ಅಲರ್ಟ್​ ಘೋಷಿಸಲಾಗಿದೆ. ಆ. 13ರವರೆಗೂ ಈ 7 ಜಿಲ್ಲೆಗಳಲ್ಲಿ ರೆಡ್ ಅಲರ್ಟ್​ ಘೋಷಿಸಲಾಗಿದೆ.

ಕರಾವಳಿ ಭಾಗದಲ್ಲಿ ಮೀನುಗಾರರಿಗೆ ಸಮುದ್ರಕ್ಕೆ ಇಳಿಯದಂತೆ ಎಚ್ಚರಿಕೆ ನೀಡಲಾಗಿದೆ. ಮಂಗಳೂರು, ಕಾರವಾರ ಸಮುದ್ರದಲ್ಲಿ ಎತ್ತರದ ಅಲೆಗಳು ಅಪ್ಪಳಿಸಲಿದ್ದು, ಅಕ್ಕಪಕ್ಕದ ಗ್ರಾಮಗಳ ಜನರು ಎಚ್ಚರಿಕೆಯಿಂದಿರಲು ಸೂಚಿಸಲಾಗಿದೆ. ಕರ್ನಾಟಕದ ಪ್ರಮುಖ ಜಲಾಶಯಗಳ ಇಂದಿನ ನೀರಿನ ಮಟ್ಟ ಹೀಗಿದೆ…

ಲಿಂಗನಮಕ್ಕಿ ಜಲಾಶಯ

ಗರಿಷ್ಠ ಮಟ್ಟ-554.4 ಅಡಿ​
ಇಂದಿನ ಮಟ್ಟ- 545 ಅಡಿ​
ಗರಿಷ್ಠ ಸಾಮರ್ಥ್ಯ- 151.75 ಟಿಎಂಸಿ
ಇಂದಿನ ನೀರು ಸಂಗ್ರಹ- 69.28 ಟಿಎಂಸಿಇಂದಿನ ಒಳಹರಿವು- 56,956 ಕ್ಯೂಸೆಕ್ಸ್​
ಇಂದಿನ ಹೊರ ಹರಿವು- 00 ಕ್ಯೂಸೆಕ್ಸ್​

ವರಾಹಿ ಜಲಾಶಯ
ಗರಿಷ್ಠ ಮಟ್ಟ-594.36 ಅಡಿ​
ಇಂದಿನ ಮಟ್ಟ- 540 ಅಡಿ​
ಗರಿಷ್ಠ ಸಾಮರ್ಥ್ಯ- 31.10 ಟಿಎಂಸಿ
ಇಂದಿನ ನೀರು ಸಂಗ್ರಹ- 10.58 ಟಿಎಂಸಿ
ಇಂದಿನ ಒಳಹರಿವು- 8,884 ಕ್ಯೂಸೆಕ್ಸ್​
ಇಂದಿನ ಹೊರ ಹರಿವು- 0 ಕ್ಯೂಸೆಕ್ಸ್​

ಹಾರಂಗಿ ಜಲಾಶಯ
ಗರಿಷ್ಠ ಮಟ್ಟ-871.42 ಅಡಿ​
ಇಂದಿನ ಮಟ್ಟ- 870.18 ಅಡಿ​
ಗರಿಷ್ಠ ಸಾಮರ್ಥ್ಯ- 8.50 ಟಿಎಂಸಿ
ಇಂದಿನ ನೀರು ಸಂಗ್ರಹ-6.83 ಟಿಎಂಸಿ
ಇಂದಿನ ಒಳಹರಿವು- 13,592 ಕ್ಯೂಸೆಕ್ಸ್​
ಇಂದಿನ ಹೊರ ಹರಿವು- 14,033 ಕ್ಯೂಸೆಕ್ಸ್​

ಹೇಮಾವತಿ ಜಲಾಶಯ
ಗರಿಷ್ಠ ಮಟ್ಟ-2,922 ಅಡಿ​
ಇಂದಿನ ಮಟ್ಟ- 2918.88 ಅಡಿ​
ಗರಿಷ್ಠ ಸಾಮರ್ಥ್ಯ- 37.103 ಟಿಎಂಸಿ
ಇಂದಿನ ನೀರು ಸಂಗ್ರಹ- 34.13 ಟಿಎಂಸಿ
ಇಂದಿನ ಒಳಹರಿವು- 11,990 ಕ್ಯೂಸೆಕ್ಸ್​
ಇಂದಿನ ಹೊರ ಹರಿವು- 3880 ಕ್ಯೂಸೆಕ್ಸ್​

ಕೆಆರ್​ಎಸ್​ ಜಲಾಶಯ​
ಗರಿಷ್ಠ ಸಂಗ್ರಹ ಸಾಮರ್ಥ್ಯ- 45.5 ಟಿಎಂಸಿ
ಇಂದಿನ ನೀರು ಸಂಗ್ರಹ- 35.79 ಟಿಎಂಸಿ
ಇಂದಿನ ಒಳಹರಿವು- 67,817 ಕ್ಯೂಸೆಕ್ಸ್​
ಇಂದಿನ ಹೊರ ಹರಿವು- 18,955 ಕ್ಯೂಸೆಕ್ಸ್​

ಕಬಿನಿ ಜಲಾಶಯ
ಗರಿಷ್ಠ ಮಟ್ಟ- 696.16 ಅಡಿ
ಇಂದಿನ ಮಟ್ಟ- 2281.05 ಅಡಿ
ಗರಿಷ್ಠ ಸಾಮರ್ಥ್ಯ- 19.52 ಟಿಎಂಸಿ
ಇಂದಿನ ನೀರು ಸಂಗ್ರಹ- 17.66 ಟಿಎಂಸಿ
ಇಂದಿನ ಒಳಹರಿವು- 41,676 ಕ್ಯೂಸೆಕ್ಸ್​
ಇಂದಿನ ಹೊರ ಹರಿವು- 18,892 ಕ್ಯೂಸೆಕ್ಸ್​

ತುಂಗಾ ಜಲಾಶಯ
ಗರಿಷ್ಠ ಮಟ್ಟ-497.74 ಅಡಿ​
ಇಂದಿನ ಮಟ್ಟ- 493 ಅಡಿ​
ಗರಿಷ್ಠ ಸಾಮರ್ಥ್ಯ- 100 ಟಿಎಂಸಿ
ಇಂದಿನ ನೀರು ಸಂಗ್ರಹ- 54.52 ಟಿಎಂಸಿ
ಇಂದಿನ ಒಳಹರಿವು- 1,01,002 ಕ್ಯೂಸೆಕ್ಸ್​
ಇಂದಿನ ಹೊರ ಹರಿವು- 0 ಕ್ಯೂಸೆಕ್ಸ್​

ಘಟಪ್ರಭಾ ಜಲಾಶಯ
ಗರಿಷ್ಠ ಮಟ್ಟ-662.94 ಅಡಿ​
ಇಂದಿನ ಮಟ್ಟ- 659 ಅಡಿ​
ಗರಿಷ್ಠ ಸಾಮರ್ಥ್ಯ- 48.98 ಟಿಎಂಸಿ
ಇಂದಿನ ನೀರು ಸಂಗ್ರಹ- 41.98 ಟಿಎಂಸಿ
ಇಂದಿನ ಒಳಹರಿವು- 46,749 ​ಕ್ಯೂಸೆಕ್ಸ್
ಇಂದಿನ ಹೊರ ಹರಿವು- 0 ಕ್ಯೂಸೆಕ್ಸ್​

ಮಲಪ್ರಭಾ ಜಲಾಶಯ
ಗರಿಷ್ಠ ಮಟ್ಟ-633.83 ಅಡಿ​
ಇಂದಿನ ಮಟ್ಟ- 631.01 ಅಡಿ​
ಗರಿಷ್ಠ ಸಾಮರ್ಥ್ಯ- 34.35 ಟಿಎಂಸಿ
ಇಂದಿನ ನೀರು ಸಂಗ್ರಹ- 27.29 ಟಿಎಂಸಿ
ಇಂದಿನ ಒಳಹರಿವು- 22,733 ಕ್ಯೂಸೆಕ್ಸ್​
ಇಂದಿನ ಹೊರ ಹರಿವು- 4,164 ಕ್ಯೂಸೆಕ್ಸ್​

ಆಲಮಟ್ಟಿ ಜಲಾಶಯ
ಗರಿಷ್ಠ ಮಟ್ಟ-519.63 ಅಡಿ​
ಇಂದಿನ ಮಟ್ಟ- 517.63 ಅಡಿ
ಗರಿಷ್ಠ ಸಾಮರ್ಥ್ಯ- 123.081 ಟಿಎಂಸಿ
ಇಂದಿನ ನೀರು ಸಂಗ್ರಹ- 92.593 ಟಿಎಂಸಿ
ಇಂದಿನ ಒಳಹರಿವು- 1,85,000 ಕ್ಯೂಸೆಕ್ಸ್​
ಇಂದಿನ ಹೊರ ಹರಿವು- 1,81,922 ಕ್ಯೂಸೆಕ್ಸ್

Comments are closed.