ಕರ್ನಾಟಕ

ಕೊರೋನಾದ ಸಕ್ರಿಯ ಪ್ರಕರಣಗಳಲ್ಲಿ ರಾಜ್ಯಕ್ಕೆ ನಂ 2 ಸ್ಥಾನ

Pinterest LinkedIn Tumblr


ಬೆಂಗಳೂರು(ಜುಲೈ 26): ದೇಶದಲ್ಲಿ ಈವರೆಗೆ ದಾಖಲಾಗಿರುವ ಕೊರೋನಾವೈರಸ್ ಸೋಂಕಿನ ಪ್ರಕರಣ 14 ಲಕ್ಷ ಗಡಿ ದಾಟುತ್ತಿದೆ. ಸಕ್ರಿಯ ಪ್ರಕರಣಗಳ ಸಂಖ್ಯೆಯೇ 4.67 ಲಕ್ಷ ದಾಟಿ ಹೋಗಿದೆ. ಇದರಲ್ಲಿ ಮಹಾರಾಷ್ಟ್ರ ರಾಜ್ಯವೊಂದೇ ಸಿಂಹಪಾಲು ಹೊಂದಿದೆ. ಆದರೆ, ಅಚ್ಚರಿಯಾಗಿ ಬೆಳೆದದ್ದು ಕರ್ನಾಟಕದಲ್ಲೇ. ಆರಂಭದಲ್ಲಿ ಕೊರೋನಾವನ್ನು ನಿಯಂತ್ರಣಕ್ಕೆ ತಂದಿದಂತಿದ್ದ ಕರ್ನಾಟಕದಲ್ಲಿ ಸೋಂಕು ನಾಗಾಲೋಟದಲ್ಲಿ ವ್ಯಾಪಿಸುತ್ತಿದೆ. ನೋಡನೋಡುತ್ತಿದ್ದಂತೆಯೇ ಒಂದೊಂದೇ ರಾಜ್ಯಗಳನ್ನ ಹಿಂದಿಕ್ಕುತ್ತಾ ಈಗ ಅತಿಹೆಚ್ಚು ಸಕ್ರಿಯ ಪ್ರಕರಣಗಳಲ್ಲಿ ಎರಡನೇ ಸ್ಥಾನಕ್ಕೇರಿದೆ. ತಮಿಳುನಾಡನ್ನೂ ಮೀರಿಸಿ ಬೆಳೆದಿದೆ. ರಾಜ್ಯದಲ್ಲಿ ಈಗ ಆಕ್ಟಿವ್ ಕೇಸ್​ಗಳ ಸಂಖ್ಯೆ 55 ಸಾವಿರ ದಾಟಿದೆ.

ದೇಶದಲ್ಲಿ ಮೊದಲ ಕೊರೋನಾ ಸೋಂಕು ಪತ್ತೆಯಾದ ಕೇರಳ ರಾಜ್ಯವು ಗಮನಾರ್ಹ ರೀತಿಯಲ್ಲಿ ನಿಯಂತ್ರಣ ಮಾಡುತ್ತಿದೆ. ಆತಂಕಕಾರಿ ಮಟ್ಟದಲ್ಲಿ ಸೋಂಕು ವ್ಯಾಪಿಸಿದ್ದ ದೆಹಲಿಯಲ್ಲಿ ಈಗ ಆಕ್ಟಿವ್ ಕೇಸ್​ಗಳು 13 ಸಾವಿರಕ್ಕಿಂತ ಕಡಿಮೆ ಇವೆ. ಮಹಾರಾಷ್ಟ್ರ 1.45 ಲಕ್ಷ ಆ್ಯಕ್ಟಿವ್ ಕೇಸ್​ಗಳ ಮೂಲಕ ನಂಬರ್ ಒನ್ ಸ್ಥಾನದಲ್ಲಿದೆ.

ಇನ್ನು, ಅಂಡಮಾನ್-ನಿಕೋಬಾರ್ ದ್ವೀಪಗಳಲ್ಲಿ ಅತಿಕಡಿಮೆ ಸಕ್ರಿಯ ಪ್ರಕರಣಗಳಿವೆ. ಇಲ್ಲಿ 114 ಮಂದಿ ಮಾತ್ರ ಸದ್ಯ ಸೋಂಕಿನಿಂದ ಆಸ್ಪತ್ರೆಗೆ ದಾಖಲಾಗಿದ್ದಾರೆ. ಸಿಕ್ಕಿಮ್, ಮಿಜೋರಾಮ್, ಲಡಾಕ್, ನಾಗರ್ ಹವೇಲಿ ಮತ್ತು ಚಂಡೀಗಡದಲ್ಲಿ 500ಕ್ಕಿಂತ ಕಡಿಮೆ ಆ್ಯಕ್ಟಿವ್ ಕೇಸ್​ಗಳಿವೆ.

ದೇಶದಲ್ಲಿರುವ ಸಕ್ರಿಯ ಕೊರೋನಾ ಪ್ರಕರಣಗಳ ಟಾಪ್ ಪಟ್ಟಿ
ರಾಷ್ಟ್ರಾದ್ಯಂತ: 4,67,882
1) ಮಹಾರಾಷ್ಟ್ರ: 1,45,7952) ಕರ್ನಾಟಕ: 55,396
3) ತಮಿಳುನಾಡು: 52,273
4) ಆಂಧ್ರ ಪ್ರದೇಶ: 44,431
5) ಉತ್ತರ ಪ್ರದೇಶ: 22,452
6) ಪಶ್ಚಿಮ ಬಂಗಾಳ: 19,391
7) ಗುಜರಾತ್: 12,695
8) ದೆಹಲಿ: 12,657
9) ಬಿಹಾರ: 12,317
10) ತೆಲಂಗಾಣ: 11,677
11) ಕೇರಳ: 9,428
12) ರಾಜಸ್ಥಾನ: 9,379
13) ಅಸ್ಸಾಮ್: 7,954
14) ಒಡಿಶಾ: 7,954
15) ಮಧ್ಯಪ್ರದೇಶ: 7,639
16) ಜಮ್ಮು-ಕಾಶ್ಮೀರ: 7,483
17) ಹರಿಯಾಣ: 6,495
18) ಜಾರ್ಖಂಡ್: 4,329
19) ಪಂಜಾಬ್: 4,096

ಅತಿ ಕಡಿಮೆ ಸಕ್ರಿಯ ಪ್ರಕರಣಗಳಿರುವ ರಾಜ್ಯಗಳು:
1) ಅಂಡಮಾನ್-ನಿಕೋಬಾರ್: 114
2) ಮಿಜೋರಾಮ್: 178
3) ಲಡಾಖ್: 216
4) ಚಂಡೀಗಡ: 284
5) ದಾದರ್, ನಾಗರ್ ಹವೇಲಿ: 328
6) ಸಿಕ್ಕಿಂ: 357
7) ಮಣಿಪುರ: 652
8) ಅರುಣಾಚಲಪ್ರದೇಶ: 695
9) ನಾಗಾಲ್ಯಾಂಡ್: 744
10) ಹಿಮಾಚಲ ಪ್ರದೇಶ: 865
11) ಪುದುಚೇರಿ: 1,055
12) ಗೋವಾ: 1,606
13) ತ್ರಿಪುರಾ: 1,642
14) ಉತ್ತರಾಖಂಡ್: 2,403
15) ಛತ್ತೀಸ್​ಗಡ: 2,365

ಇನ್ನು, ವಿಶ್ವಾದ್ಯಂತ ಚಿತ್ರಣ ನೋಡಿದಾಗ ಭಾರತ ಒಟ್ಟಾರೆ ಕೇಸ್ ಮತ್ತು ಆ್ಯಕ್ಟಿವ್ ಕೇಸ್ ಎರಡರಲ್ಲೂ 3ನೇ ಸ್ಥಾನದಲ್ಲಿದೆ. ಅಮೆರಿಕ ಮತ್ತು ಬ್ರೆಜಿಲ್ ನಂತರದ ಸ್ಥಾನದಲ್ಲಿ ಭಾರತ ಇದೆ. ಕೋವಿಡ್-19 ರೋಗ ಉದ್ಭವವಾದ ಚೀನಾದಲ್ಲಿ ಸಕ್ರಿಯ ಪ್ರಕರಣಗಳು 288ಕ್ಕೆ ಇಳಿದೆ. ಕೊರೋನಾ ಆರ್ಭಟ ಜೋರಾಗಿದ್ದ ಜರ್ಮನಿ, ಕತಾರ್, ಕೆನಡಾ ಮತ್ತು ಟರ್ಕಿ ದೇಶಗಳಲ್ಲೂ ಕೊರೋನಾ ನಿಯಂತ್ರಣಕ್ಕೆ ಬಂದಿದೆ. ಆದರೆ, ಜನಸಂಖ್ಯಾವಾರು ಲೆಕ್ಕ ಹಾಕಿದರೆ ಭಾರತದಲ್ಲಿ ಪ್ರಕರಣಗಳ ಸಂಖ್ಯೆ ಕಡಿಮೆ ಇದೆ.

Comments are closed.