ಕರ್ನಾಟಕ

ಮಂಡ್ಯದಲ್ಲಿ ಕಾಮುಕರ ಅಟ್ಟಹಾಸಕ್ಕೆ ಬಲಿಯಾದ ಬಿಕ್ಷುಕಿ ! ರೇಪ್ ಮಾಡಿ ಹತ್ಯೆ

Pinterest LinkedIn Tumblr

ಮಂಡ್ಯ: ಮಂಡ್ಯದಲ್ಲಿ ಕಾಮುಕರ ಅಟ್ಟಹಾಸಕ್ಕೆ ಬಿಕ್ಷುಕಿಯೊಬ್ಬರು ಬಲಿಯಾಗಿರು ಧಾರಣ ಘಟನೆ ಇದೀಗ ಬೆಳಕಿಗೆ ಬಂದಿದೆ.

ಭಿಕ್ಷೆ ಬೇಡಿ ಜೀವನ ಸಾಗಿಸುತ್ತಿದ್ದ ಭಿಕ್ಷುಕಿಯ ಮೇಲೆ ಅತ್ಯಾಚಾರವೆಸಗಿ ತಲೆಯ ಮೇಲೆ ಕಲ್ಲು ಎತ್ತಿ ಹಾಕಿ ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಮಂಡ್ಯ ನಗರದಲ್ಲಿ ನಡೆದಿದೆ. ದುಷ್ಕರ್ಮಿಗಳು ಭೀಕ್ಷುಕಿಯೊಬ್ಬಳನ್ನು ರೇಪ್ ಮಾಡಿ ಹತ್ಯೆಗೈದಿರುವ ಘಟನೆ ಇಲ್ಲಿನ ಬೆಂಗಳೂರು-ಮೈಸೂರು ಹೆದ್ದಾರಿಯ ಹೆಚ್ ಪಿಎನ್ ವೈನ್ಸ್ ಬಾರ್ನ್ ನ ಬಳಿ ಕಳೆದ ರಾತ್ರಿ ನಡೆದಿದೆ.

ನಗರದ ಬಾಟಾ ಶೋರೂಂ ಪಕ್ಕದ ಹೆಚ್ಪಿಎನ್ ವೈನ್ಸ್ ಎದುರಿನ ಪುಟ್ಪಾತ್ ನಲ್ಲಿ ಅರೆ ನಗ್ನಾವಸ್ಥೆಯಲ್ಲಿ, ರಕ್ತಸಿಕ್ತ ಮಹಿಳೆಯ ಮೃತದೇಹ ಇಂದು ಬೆಳಿಗ್ಗೆ ಪತ್ತೆಯಾಗಿದ್ದು ಈಕೆ ಭಿಕ್ಷುಕಿ ಎಂದು ತಿಳಿದು ಬಂದಿದೆ.

ಹತ್ಯೆಯಾಗಿರುವ ಅಪರಿಚಿತ ಮಹಿಳೆ ಹಲವು ವರ್ಷಗಳಿಂದ ಮಂಡ್ಯ ನಗರದಲ್ಲಿಯೇ ಇದ್ದು ಭಿಕ್ಷಾಟನೆ ಮಾಡಿಕೊಂಡಿದ್ದಳು. ಹೆಚ್ಪಿಎನ್ ವೈನ್ಸ್ ಎದುರಿನ ಪುಟ್ಪಾತ್ ನಲ್ಲಿಯೇ ರಾತ್ರಿ ವೇಳೆ ಮಲಗುತ್ತಿದ್ದಳು. ಗುರುವಾರ ರಾತ್ರಿ ಕಾಮುಕರು ಆಕೆಯ ಮೇಲೆ ಅತ್ಯಾಚಾರವೆಸಗಿ ಬಳಿಕ ಆಕೆಯ ತಲೆಯ ಮೇಲೆ ಕಲ್ಲು ಎತ್ತಿಹಾಕಿ ಹತ್ಯೆ ಮಾಡಿ ಪರಾರಿಯಾಗಿದ್ದಾರೆ. ಸುದ್ದಿ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಡಾ.ವಿ.ಶೋಭಾರಾಣಿ ನೇತೃತ್ವದ ಪೊಲೀಸರ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಡ್ಯ ಪೂರ್ವ ಠಾಣೆ ಪೊಲೀಸರು ದೂರು ದಾಖಲು ಮಾಡಿಕೊಂಡಿದ್ದು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.

Comments are closed.