ಕರ್ನಾಟಕ

ಮಾಜಿ ಸಿಎಂ ಧರ್ಮಸಿಂಗ್ ಪುತ್ರ, ಶಾಸಕ ಡಾ. ಅಜಯ್ ಸಿಂಗ್ ಗೆ ಕೊರೋನಾ ಸೋಂಕು

Pinterest LinkedIn Tumblr


ಜೇವರ್ಗಿ: ಮಾಜಿ ಸಿಎಂ ಧರ್ಮಸಿಂಗ್ ಪುತ್ರ, ಕಾಂಗ್ರೆಸ್ ಶಾಸಕರಾದ ಡಾ. ಅಜಯ್ ಧರ್ಮಸಿಂಗ್ ಅವರಿಗೆ ಕೊರೋನಾ ಸೋಂಕು ದೃಢವಾಗಿದೆ.

ಶಾಸಕ ಅಜಯ್ ಸಿಂಗ್ ಸ್ವತಃ ಈ ಬಗ್ಗೆ ಟ್ವೀಟ್ ಮೂಲಕ ದೃಢಪಡಿಸಿದ್ದಾರೆ. ನನಗೆ ಕೊರೋನಾ ಪಾಸಿಟಿವ್ ವರದಿ ಬಂದಿದೆ. ಆದರೆ ಯಾವ ರೋಗಲಕ್ಷಣಗಳು ಕಂಡುಬಂದಿಲ್ಲ. ಎರಡು ವಾರಗಳ ಕಾಲ ನಾನು ಕ್ವಾರಂಟೈನ್ ಆಗಿರಲಿದ್ದು ನನ್ನ ಸಂಪರ್ಕಕ್ಕೆ ಬಂದವರು ಮುಂಜಾಗರೂಕತೆ ವಹಿಸಿರಿ. ಎಲ್ಲರೂ ಸುರಕ್ಷಿತವಾಗಿರಿ ಎಂದು ವಿಧಾನಸಭೆ ಕಾಂಗ್ರೆಸ್ ಮುಖ್ಯ ಸಚೇತಕರು ಸಹ ಆಗಿರುವ ಶಾಸಕ ಅಜಯ್ ಸಿಂಗ್ ಹೇಳಿದ್ದಾರೆ.

ಗುರುವಾರ ಕೆಪಿಸಿಸಿ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಬಾಗವಹಿಸಿದ್ದ ಅಜಯ್ ಸಿಂಗ್ ಬೆಂಗಳೂರಿನ ತಮ್ಮ ನಿವಾಸದಲ್ಲಿ ಕ್ವಾರಂಟೈನ್ ಆಗಿದ್ದಾರೆ.

ಅಜಯ್ ಸಿಂಗ್ ಅವರಿಗೂ ಮುನ್ನ ಹೊಸಕೋಟೆ ಶಾಸಕ ಶರತ್ ಬಚ್ಚೇಗೌಡ, ಕುಣಿಗಲ್ ಶಾಸಕರು ಸೇರಿ ವಿಧಾನಸಭೆ ಹಾಗೂ ವಿಧಾನ ಪರಿಷತ್ ಸದಸ್ಯರು ಸಹ ಕೊರೋನಾ ಸೋಂಕಿಗೆ ತುತ್ತಾಗಿದ್ದರು.

ರಾಜ್ಯದಲ್ಲಿ ಗುರುವಾರ ಸಂಜೆ 2,228 ಮಂದಿಯಲ್ಲಿ ಹೊಸದಾಗಿ ಕೊರೋನಾ ಸೋಂಕು ದೃಢವಾಗಿತ್ತು. ಇದರೊಂದಿಗೆ ರಾಜ್ಯದಲ್ಲಿ ಒಟ್ಟಾರೆ ಸೋಂಕಿತರ ಸಂಖ್ಯೆ ಮೂವತ್ತು ಸಾವಿರ ಗಡಿ ದಾಟಿದೆ.

Comments are closed.