ಬೆಂಗಳೂರು: ಕರ್ತವ್ಯನಿರತ ಡಾಕ್ಟರ್, ಪೊಲೀಸ್ ಸಿಬ್ಬಂದಿ ಮತ್ತು ರಾಜಕಾರಣಿಗಳ ಪರೀಕ್ಷೆಗಾಗಿ ವಿಶೇಷ ಕೋವಿಡ್ ಆಸ್ಪತ್ರೆಗಳನ್ನು ಮೀಸಲಿರಿಸಿ ಬುಧವಾರ ಸರ್ಕಾರದಿಂದ ಆದೇಶ ಹೊರಡಿಸಲಾಗಿದೆ.
ಕೋವಿಡ್ ಕೇರ್ ಸೆಂಟರ್ ಆಗಿ ಪರಿವರ್ತಿಸಿರುವ ಕನಕಪುರ ರಸ್ತೆಯ ಶ್ರೀ ಶ್ರೀ ರವಿಶಂಕರ್ ಆಶ್ರಮದ ಮೊದಲ ಮಹಡಿಯನ್ನು ಸೋಂಕು ಲಕ್ಷಣವಿಲ್ಲದ ಮತ್ತು ಅಲ್ಪ ಲಕ್ಷಣವಿರುವ ಪೊಲೀಸ್ ಸಿಬ್ಬಂದಿಗೆ ಮೀಸಲಿರಿಸಲಾಗಿದೆ.
ಇಂದಿರಾನಗರದ ಇಎಸ್ ಐ ಆಸ್ಪತ್ರೆಯಲ್ಲಿ ತೀವ್ರ ಸೋಂಕು ಲಕ್ಷಣದ ಪೊಲೀಸ್ ಸಿಬ್ಬಂದಿ, ಚುನಾಯಿತ ಪ್ರತಿನಿಧಿಗಳು, ಸಚಿವರು ಮತ್ತು ಹಿರಿಯ ಶ್ರೇಣಿಯ ಅಧಿಕಾರಿಗಳ ಚಿಕಿತ್ಸೆಗಾಗಿ ಮೀಸಲು ಇರಿಸಲಾಗಿದೆ.
ಕುಮಾರಕೃಪ ಗೇಸ್ಟ್ ಹೌಸಿನ ಒಂದು ವಿಭಾಗವನ್ನು 100 ಕೊಠಡಿಗಳೊಂದಿಗೆ ಮೀಸಲಿರಿಸಲಾಗಿದೆ. ಸಂದರ್ಶಕರನ್ನು ಪ್ರವೇಶದ್ವಾರದಲ್ಲಿ ಥಾರ್ಮ ಮೀಟರ್ ನಿಂದ ತಪಾಸಣೆ ಮಾಡಲಾಗುತ್ತದೆ.
ಜಯನಗರ ಸಾರ್ವಜನಿಕ ಆಸ್ಪತ್ರೆಯಲ್ಲಿ 3/1 ರಷ್ಟು ಹಾಸಿಗೆ, ಐಸಿಯು ಹಾಗೂ ವೆಂಟಿಲೇಟರ್ ಗಳನ್ನು ಡಾಕ್ಟರ್ ಗಳಿಗಾಗಿ ಮೀಸಲು ಇರಿಸಲಾಗಿದೆ.
Comments are closed.