ಬೀದರ್: ತನಗೆ ಕೊರೋನಾವೈರಸ್ ಸೋಂಕು ತಗುಲಿದೆ ಎಂದು ಭಯಗೊಂಡ ಯುವಕನೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೀದರ್ ನ ಬಸವ ಕಲ್ಯಾಣ ತಾಲೂಕಿನಲ್ಲಿ ನಡೆದಿದೆ.
ಬಸವ ಕಾಲ್ಯಾಣದ ತ್ರಿಪುರಾಂತ್ ಎಂಬಲ್ಲಿ ನಡೆದ ಘಟನೆಯಲ್ಲಿ ಅಶ್ವಿನ್ ಮೆಟ್ರೆ (26) ಎಂಬ ಯುವಕ ಆತ್ಮಹತ್ಯೆಗೆ ಶರಣಾಗಿದ್ದಾರೆ. ಈತ ತನ್ನ ಕೊರೋನಾ ಟೆಸ್ಟ್ ವರದಿ ಬರುವ ಮುನ್ನವೇ ಆತ್ಮಹತ್ಯೆಗೆ ಶರಣಾಗಿದ್ದಾನೆ. ಆತ ಮಹಾರಾಷ್ಟ್ರದ ವ್ಯಕ್ತಿಯೊಬ್ಬನೊಂದಿಗೆ ಸಂಪರ್ಕ ಬಂದಿದ್ದ ಅದರಂತೆ, ಅವನಿಗೆ ಕೊರೋನಾ ಟೆಸ್ಟ್ ಮಾಡಲಾಗಿತ್ತು.ಗಂಟಲಿನ ಸ್ವ್ಯಾಬ್ ಮಾದರಿಯನ್ನು ಪರೀಕ್ಷೆಗೆ ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು. ಆದರೆ ವರದಿ ಕೈಗೆ ಬರುವ ಮುನ್ನವೇ ತಮಗೆ ಕೊರೋನಾ ಇದೆ ಎಂದು ಭಯಗೊಂಡ ಯುವಕ ಆತ್ಮಹತ್ಯೆಗೆ ಶರಣಾಗಿದ್ದಾನೆ.
ಶನಿವಾರ ಬೆಳಿಗ್ಗೆ ಮೆಟ್ರೆ ಆತ್ಮಹತ್ಯೆ ಮಾಡಿಕೊಂಡ ಬಳಿಕ ಆತನ ವರದಿ ಬಂದಿದ್ದು ಯುವಕನಿಗೆ ಕೊರೋನಾ ಸೋಂಕು ಇಲ್ಲವೆಂದು ಆರೋಗ್ಯ ಇಲಾಖೆಯ ಮೂಲಗಳು ಖಚಿತಪಡಿಸಿವೆ.
ಘಟನೆ ಸಂಬಂಧ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಆತ್ಮಹತ್ಯೆಯ ಪ್ರಕರಣ ದಾಖಲಾಗಿದೆ.
Comments are closed.