ಶಿವಮೊಗ್ಗ (ಜೂ.18): ಕಳೆದು ಒಂದು ವಾರದಿಂದ ಮಲೆನಾಡು ಭಾಗದಲ್ಲಿ ಬಿಟ್ಟು ಬಿಡದೆ ಮಳೆ ಆಗುತ್ತಿದೆ. ಹೀಗಾಗಿ ಹಳ್ಳ-ಕೊಳ್ಳ, ನದಿಗಳು ಮೈದುಂಬಿ ಹರಿಯುತ್ತಿವೆ. ಅಂತೆಯೇ ತುಂಗಾ ನದಿ ಕೂಡ ತುಂಬಿ ಹರಿಯುತ್ತಿದ್ದು, ಗಾಜನೂರು ಜಲಾಶಯ ಭರ್ತಿ ಆಗಿದೆ. ಹೀಗಾಗಿ, ಅಣೆಕಟ್ಟಿನಿಂದ ನೀರನ್ನು ಹೊರಕ್ಕೆ ಬಿಡಲಾಗಿದೆ.
ಈ ಬಾರಿ ರಾಜ್ಯಕ್ಕೆ ಜೂನ್ ತಿಂಗಳ ಆರಂಭದಲ್ಲೇ ಮಳೆಗಾಲ ಕಾಲಿಟ್ಟಿದೆ. ಕಳೆದ ಒಂದು ವಾರಗಳಿಂದ ಮಲೆನಾಡಿನಲ್ಲಿ ಬಿಟ್ಟು ಬಿಡದೆ ಮಳೆ ಆಗುತ್ತಿದೆ. ಹೀಗಾಗಿ, ಭಾರೀ ಪ್ರಮಾಣದ ನೀರು ಗಾಜನೂರು ಬಳಿ ಇರುವ ತುಂಗಾ ಡ್ಯಾಮ್ ಸೇರಿದೆ. ಇಂದು ತುಂಗಾ ಡ್ಯಾಂನಿಂದ 4 ಗೇಟ್ಗಳ ಮೂಲಕ, 2 ಸಾವಿರ ಕ್ಯೂಸೆಕ್ ನೀರನ್ನು ಹೊರ ಬಿಡಲಾಗಿದೆ.
ಗಾಜನೂರು ಡ್ಯಾಂ 588.24 ಮೀಟರ್ ಎತ್ತರ ಇದೆ. ಭಾರೀ ಪ್ರಮಾಣದಲ್ಲಿ ನೀರು ಡ್ಯಾಂ ಸೇರಿದ ಪರಿಣಾಮ ಅಣೆಕಟ್ಟಿನಲ್ಲಿ ನೀರಿನ ಮಟ್ಟ 587.69 ಮೀಟರ್ ತಲುಪಿದೆ. ಡ್ಯಾಂ ಗೆ 5,000 ಕ್ಯೂಸೆಕ್ ಒಳ ಹರಿವು ಬರುತ್ತಿದೆ.
ಉಕ್ಕಿ ಹರಿಯುತ್ತಿದೆ ಕೃಷ್ಣ:
ಮಹಾರಾಷ್ಟ್ರ ಅಚ್ಚುಕಟ್ಟು ಪ್ರದೇಶದಲ್ಲಿ ನಿರಂತರ ಮಳೆ ಆಗುತ್ತಿದೆ. ಹೀಗಾಗಿ ಬಾಗಲಕೋಟೆ ಜಿಲ್ಲೆಯಲ್ಲಿ ಕೃಷ್ಣೆಗೆ ಹೆಚ್ಚಿದ ಒಳಹರಿವು ಹೆಚ್ಚುತ್ತಿದೆ. ಜಿಲ್ಲೆಯ ಹಿಪ್ಪರಗಿ ಡ್ಯಾಂಗೆ ಇಂದು 44,000 ಕ್ಯೂಸೆಕ್ಸ್ ನೀರಿನ ಒಳ ಹರಿದು ಇದೆ. ಅಷ್ಟೇ ಪ್ರಮಾಣದಲ್ಲಿ ನೀರನ್ನು ಹೊರ ಬಿಡಲಾಗುತ್ತಿದೆ. ನದಿ ತೀರದ ಹಳ್ಳಿಗಳಿಗೆ ಈಗಾಗಲೇ ಮುಂಜಾಗೃತೆ ವಹಿಸಲು ಸೂಚಿಸಲಾಗಿದೆ.
Comments are closed.