ಕರ್ನಾಟಕ

ಮಂಡ್ಯ: ಕೊರೋನಾದ ನಡುವೆ ಪ್ರಭಾವಿ ಖಾಸಗಿ ಶಾಲೆಗಳಲ್ಲಿ SSLC ವಿದ್ಯಾರ್ಥಿಗಳಿಗೆ ಅನಧಿಕೃತವಾಗಿ ತರಗತಿ‌

Pinterest LinkedIn Tumblr


ಮಂಡ್ಯ: ಜಿಲ್ಲೆಯಲ್ಲಿ ಸರ್ಕಾರದ ಆದೇಶಕ್ಕೆ ಕವಡೆ ಕಾಸಿನ ಕಿಮ್ಮತ್ತಿಲ್ಲದಂತಾಗಿದೆ. ಸಾರ್ವಜನಿಕ ಶಿಕ್ಷಣ ಇಲಾಖೆಯ ವ್ಯಾಪ್ತಿಗೆ ಬರುವ ಖಾಸಗಿ ಶಾಲೆಗಳಲ್ಲಿ SSLC ವಿದ್ಯಾರ್ಥಿಗಳಿಗೆ ಅನಧಿಕೃತವಾಗಿ ತರಗತಿ‌ ಮಾಡೋ ಮೂಲಕ ಶಿಕ್ಷಣ ಇಲಾಖೆಯ ಆದೇಶ ಉಲ್ಲಂಘಿಸಲಾಗುತ್ತಿದೆ. ಜಿಲ್ಲೆಯಲ್ಲಿ ಕೊರೋನಾ ಆತಂಕವಿದ್ದರೂ ಶಾಲೆಯ ಪ್ರತಿಷ್ಟೆಗೆಗಾಗಿ ವಿದ್ಯಾರ್ಥಿಗಳ ಜೀವದ ಜೊತೆ ಶಾಲೆಯ‌ ಆಡಳಿತ ಮಂಡಳಿ ಚೆಲ್ಲಾ ಟವಾಡುತ್ತಿದೆ.

ಕೊರೋನಾ ಆತಂಕದ ನಡುವೆ ರಾಜ್ಯದಲ್ಲಿ ಸರ್ಕಾರ SSLC ಪರೀಕ್ಷೆ ನಡೆಸುವ ತೀರ್ಮಾನ‌ ಮಾಡಿದೆ. ಮಾರ್ಚ್‌‌ನಿಂದ ಇಲ್ಲಿಯವರೆಗೂ ಶಾಲೆ ಮುಚ್ಚಿದ್ದು, ಜೂ-25 ರಿಂದ ಪರೀಕ್ಷೆ ಆರಂಭವಾಗಬೇಕಿದೆ. ಈ ನಡುವೆ ಸರ್ಕಾರ ಯಾವುದೇ ರೀತಿಯ ತರಗತಿ ನಡೆಸದಂತೆ ಸೂಚಿಸಿದ್ದರೂ ಮಂಡ್ಯ ಜಿಲ್ಲೆಯಲ್ಲಿ ಕೆಲ ಪ್ರಭಾವಿಗಳ ಒಡೆತನದ ಖಾಸಗಿ ಶಾಲೆಗಳಲ್ಲಿ SSLC ವಿದ್ಯಾರ್ಥಿಗಳಿಗೆ ಬಲವಂತವಾಗಿ ಶಾಲೆಗೆ ಕರೆಸಿ ತರಗತಿ ನಡೆಸಲಾಗುತ್ತಿದೆ.

ಮಂಡ್ಯ ಶಾಸಕ ಎಂ.ಶ್ರೀನಿವಾಸ್ ಒಡೆತನದ ವಿವೇಕ ವಿದ್ಯಾ ಸಂಸ್ಥೆ,ರೋಟರಿ ಎಜುಕೇಶ್ ಟ್ರಸ್ಟ್, ಆದರ್ಶ ವಿದ್ಯಾಶಾಲೆ, ಮಹರ್ಷಿ ಎಜ್ಯುಕೇಷನ್ ಟ್ರಸ್ಟ್ ಸೇರಿದಂತೆ ಬಹುತೇಕ‌ ಖಾಸಗಿ ಶಾಲೆಗಳು ಸರ್ಕಾರದ ಲಾಕ್‌ಡೌನ್ ನಿಯಮ‌ ಉಲ್ಲಂಘಿಸಿ ವಿದ್ಯಾರ್ಥಿ ಗಳನ್ನು ಕೆರೆಸಿಕೊಂಡು ಬಲವಂತದಿಂದ ತರಗತಿ ನಡೆಸಿದ್ದಾರೆ. ಇದಕ್ಕೆ ಹಲವು ಸಂಘಟನೆಗಳು ಸೇರಿ ಪೋಷಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ..

ಇನ್ನು ಜಿಲ್ಲೆಯ ಖಾಸಗಿ ಶಾಲೆಯಲ್ಲಿ SSLC ವಿದ್ಯಾರ್ಥಿಗಳಿಗೆ ತರಗತಿ ತೆಗೆದುಕೊಂಡು ಅವ್ರಿಗೆ ಬೆಳಿಗ್ಗೆ 10 ರಿಂದ 1 ಗಂಟೆಯವರೆಗೂ ಪಾಠ ಪ್ರವಚನ‌ ಮಾಡಲಾಗುತ್ತಿದೆ. ಬಹುತೇಕ ಖಾಸಗಿ ಶಾಲೆಗಳು ತಮ್ಮ ಶಾಲೆಯ ಪ್ರತಿಷ್ಟೆ ಗಾಗಿ ಈ ರೀತಿ ವಿದ್ಯಾರ್ಥಿಗಳನ್ನು ಬಲವಂತ ವಾಗಿ‌ ಕರೆಸಿಕೊಂಡು ಪಾಠ ಮಾಡುತ್ತಿದ್ದರೂ, ಇಲ್ಲಿನ ಶಿಕ್ಷಣ ಇಲಾಖೆ ಅಧಿಕಾರಿಗಳಾಗಲಿ ಅಥವಾ ಜಿಲ್ಲಾಡಳಿತವಾಗಲಿ ಯಾವುದೇ ಕ್ರಮ ಕೈಗೊಳ್ಳದೆ ಕಣ್ಮುಚ್ಚಿ ಕುಳಿತಿದ್ದಾರೆ.

Comments are closed.