ಕರ್ನಾಟಕ

ವಿಕಾಸ ಸೌಧದ ಸಿಬ್ಬಂದಿಗೆ ಕೊರೋನಾ ಸೋಂಕು: ಐದು ಕೊಠಡಿಗಳು ಸೀಲ್‌ಡೌನ್‌

Pinterest LinkedIn Tumblr


ಬೆಂಗಳೂರು: ರಾಜ್ಯದ ಶಕ್ರಿ ಕೇಂದ್ರಕ್ಕೂ ಕೊರೊನಾ ವೈರಸ್‌ ಕಾಲಿಟ್ಟಿದೆ. ವಿಕಾಸ ಸೌಧದ ಓರ್ವ ಸಿಬ್ಬಂದಿಗೆ ಕೋವಿಡ್‌-19 ತಗುಲಿರುವುದು ದೃಢಪಟ್ಟಿದೆ. ಬೆನ್ನಿಗೆ ಐದು ಕೊಠಡಿಗಳನ್ನು ಸೀಲ್‌ಡೌನ್‌ ಮಾಡಲಾಗಿದೆ.

ವಿಕಾಸ ಸೌಧದ ಮೊದಲ ಮಹಡಿಯ ಕೊಠಡಿ ಸಂಖ್ಯೆ 34ರಲ್ಲಿ ಕೆಲಸ ಮಾಡುತ್ತಿದ್ದ ಮಹಿಳಾ ಸಿಬ್ಬಂದಿಯ ಕೊರೊನಾ ವರದಿ ಪಾಸಿಟಿವ್‌ ಬಂದಿದ್ದು ಈ ಹಿನ್ನೆಲೆಯನ್ನು ಆರೋಗ್ಯ ಇಲಾಖೆ ಸಿಬ್ಬಂದಿ ಅವರನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾರೆ.

ಸ್ಟೆನೋಗ್ರಾಫರ್‌ ಆಗಿ ಕೆಲಸ ನಿರ್ವಹಿಸುತ್ತಿದ್ದ ಮಹಿಳೆಯು ಖಾಸಗಿ ಆಸ್ಪತ್ರೆಯಲ್ಲಿ‌ ಪರೀಕ್ಷೆ ಮಾಡಿಸಿದ್ದರು. ಈ ವೇಳೆ ಕೊರೊನಾ ಪಾಸಿಟಿವ್‌ ಇರುವುದು ಬೆಳಕಿಗೆ ಬಂದಿತ್ತು. ಮಂಗಳವಾರವೂ ಕರ್ತವ್ಯಕ್ಕೆ ಹಾಜರಾಗಿದ್ದ ಅವರನ್ನು ಸರಕಾರಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.

ಅವರು ಕಾರ್ಯ ನಿರ್ವಹಿಸುತ್ತಿದ್ದ ವಿಕಾಸ ಸೌಧದ ಆಹಾರ ಇಲಾಖೆಯ ಕೊಠಡಿಯ ಅಕ್ಕಪಕ್ಕದ ಎರಡೆರಡು ಕೊಠಡಿಗಳನ್ನ ಸೀಲ್ ಡೌನ್ ಮಾಡಲಾಗಿದ್ದು, ಒಟ್ಟು ಐದು ಕೊಠಡಿಗಳು ಸೀಲ್ ಡೌನ್ ಮಾಡಲಾಗಿದೆ.

ಇನ್ನು ಸಿಬ್ಬಂದಿಯೊಬ್ಬರಿಗೆ ಸೋಂಕು ತಗುಲಿರುವುದು ದೃಢಪಟ್ಟ ಹಿನ್ನೆಲೆಯಲ್ಲಿ ಮುಖ್ಯ ಕಾರ್ಯದರ್ಶಿ ಅವರನ್ನು ಭೇಟಿ ಮಾಡಿದ‌ ಸಚಿವಾಲಯದ ನೌಕರರ ಸಂಘದ ಅಧ್ಯಕ್ಷ ಗುರುಸ್ವಾಮಿ ಮತ್ತು ನಿಯೋಗ ಎಲ್ಲ ಸಿಬ್ಬಂದಿಗೂ ಕೋವಿಡ್‌ ಟೆಸ್ಟ್ ಮಾಡಿಸುವಂತೆ ಮನವಿ‌ ಮಾಡಿದ್ದಾರೆ.

Comments are closed.