ಕರ್ನಾಟಕ

ಕೊರೋನಾ: ಹೋಂ ಕ್ವಾರಂಟೈನ್ ಗೆ ಜನತೆಯಲ್ಲಿ ಸಹಕಾರ ಕೋರಿದ ಸರ್ಕಾರ

Pinterest LinkedIn Tumblr


ಬೆಂಗಳೂರು: ನೆರೆರಾಜ್ಯಗಳಿಂದ ಆಗಮಿಸಿ ಕ್ವಾರಂಟೈನ್ ಆಗಿರುವವರ ಚಲನೆಯನ್ನು ನಿಯಂತ್ರಿಸಲು ನೆರವು ನೀಡುವಂತೆ ರಾಜ್ಯ ಸರ್ಕಾರ ಸಾರ್ವಜನಿಕರು, ನಿವಾಸಿಗಳ ಕಲ್ಯಾಣ ಸಂಘ ಮತ್ತು ವಾಣಿಜ್ಯ ಮಳಿಗೆಗಳಿಗೆ ಮನವಿ ಮಾಡಿದೆ.

ಈ ಕುರಿತು ರಾಜ್ಯದ ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯಭಾಸ್ಕರ್ ಆದೇಶ ಹೊರಡಿಸಿದ್ದಾರೆ. ಎಲ್ಲಾ ಶಾಲೆಗಳು, ವಾಣಿಜ್ಯ ಮಳಿಗೆಗಳು, ಕಚೇರಿಗಳು, ಕಾರ್ಖಾನೆಗಳು, ಮಾಲ್ ಗಳೂ, ಧಾರ್ಮಿಕ ಸ್ಥಳಗಳು, ಹೋಟೆಲ್ ಗಳು ಇತ್ಯಾದಿಗಳ ಸಿಬ್ಬಂದಿ, ತಮ್ಮ ಕಟ್ಟಡದ ಆವರಣಕ್ಕೆ ಆಗಮಿಸುವ ಗ್ರಾಹಕರ ಕೈಯಲ್ಲಿ ಕ್ವಾರಂಟೈನ್ ಮುದ್ರೆಯಿದೆಯೆ ಎಂಬುದನ್ನು ಪರಿಶೀಲಿಸಬೇಕು ಎಂದು ಸೂಚಿಸಿದೆ.

ಇಂತಹ ವ್ಯಕ್ತಿಗಳು ಅಂಗಡಿಗಳಿಗೆ ಇಲ್ಲವೇ ಸಾರ್ವಜನಿಕ ಸ್ಥಳಗಳಲ್ಲಿ ಓಡಾಡುವುದು ಕಂಡುಬಂದಲ್ಲಿ ಆ ಕುರಿತು ಕೂಡಲೇ ಪೊಲೀಸರಿಗೆ ಮಾಹಿತಿ ನೀಡಬೇಕು ಎಂದು ಸರ್ಕಾರ ಮನವಿ ಮಾಡಿದೆ.

ನಿಯಮಗಳನ್ನು ಮೀರಿ ಹೊರ ರಾಜ್ಯದ ವ್ಯಕ್ತಿಗಳು ಅಂಗಡಿ ಮುಂಗಟ್ಟುಗಳನ್ನು ಪ್ರವೇಶಿಸಿದರೆ ತಕ್ಷಣವೇ ಪೊಲೀಸ್ ಸಹಾಯವಾಣಿ 100 ಕ್ಕೆ ಕರೆ ಮಾಡಬೇಕು ಎಂದು ಹೇಳಿದೆ.

Comments are closed.