ಕರ್ನಾಟಕ

ಕೊರೋನಾ ಭಯದಿಂದ ಬೆಂಗಳೂರಿನಿಂದ ಕೊಚ್ಚಿಗೆ ಹೋಗಲು 5 ಲಕ್ಷ ರೂ. ಕೊಟ್ಟು ಹೆಲಿಕಾಪ್ಟರ್ ಬುಕ್ ಮಾಡಿದ ಮಲೆಯಾಳಿ ಕುಟುಂಬ!

Pinterest LinkedIn Tumblr

ಕೊಚ್ಚಿ: ಇನ್ನು ಕೆಲವೇ ದಿನಗಳಲ್ಲಿ ದೇಶೀಯ ವಿಮಾನಗಳ ಹಾರಾಟ ಆರಂಭವಾಗಲಿದೆ. ಈಗ ಎಲ್ಲಾ ಕಡೆಯೂ ಕೊರೋನಾ ಭಯದಿಂದ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕೆಂದು ಇರುವಾಗ ಕೇರಳದ ಮಲೆಯಾಳಿ ಕುಟುಂಬವೊಂದು ಅಪರಿಚಿತ ಪ್ರಯಾಣಿಕರೊಂದಿಗೆ ವಿಮಾನದಲ್ಲಿ ಹಾರಾಟ ಮಾಡಲು ಭಯದಿಂದ 5 ಲಕ್ಷ ರೂಪಾಯಿಗೆ ಪ್ರತ್ಯೇಕ ಚಾರ್ಟೆರ್ಡ್ ಹೆಲಿಕಾಪ್ಟರ್ ಬುಕ್ಕಿಂಗ್ ಮಾಡಿದ್ದಾರೆ.

ಬೆಂಗಳೂರಿನಿಂದ ಕೇರಳದ ಕೊಚ್ಚಿಗೆ ಪ್ರಯಾಣಿಸಲು ಮಲೆಯಾಳಿಗಳು ಚಾರ್ಟೆರ್ಡ್ ಹೆಲಿಕಾಪ್ಟರ್ ಬುಕ್ ಮಾಡಿದ್ದಾರೆ. ಲಾಕ್ ಡೌನ್ ಸಡಿಲಿಕೆ ಮಾಡಿದ ನಂತರ ಖಾಸಗಿ ಚಾರ್ಟೆರ್ಡ್ ವಿಮಾನಗಳಿಗೆ ಲ್ಯಾಂಡಿಂಗ್ ಆಗಲು ಅನುಮತಿ ನೀಡುವಂತೆ ಮನವಿಗಳು ಬರುತ್ತಿವೆ ಎಂದು ಕೊಚ್ಚಿ ವಿಮಾನ ನಿಲ್ದಾಣ ಅಧಿಕಾರಿಗಳು ಹೇಳಿದ್ದಾರೆ.

ಕೊರೋನಾ ಭಯದಿಂದ ಹಲವರು ಚಾರ್ಟೆರ್ಡ್ ಹೆಲಿಕಾಪ್ಟರ್ ನಲ್ಲಿ ಪ್ರಯಾಣಿಸಲು ಬಯಸುತ್ತಾರೆ. ಲಾಕ್ ಡೌನ್ ನ ಮೊದಲ ಮತ್ತು ಎರಡನೇ ಹಂತದಲ್ಲಿ ಕೇರಳಕ್ಕೆ ಹೋಗಲು ದೇಶದ ಹಲವು ಭಾಗಗಳಿಂದ ಈ ರೀತಿ ವಿಚಾರಣೆಗಳು ಬಂದಿವೆ. ಈಗ ಲಾಕ್ಡೌನ್ ಸಡಿಲಿಕೆಯಾದ ನಂತರ ನಮಗೆ ಖಾಸಗಿಯವರಿಗೆ ಸೇವೆ ಒದಗಿಸಲು ಸಾಧ್ಯವೆನಿಸುತ್ತಿದೆ ಎಂದು ಖಾಸಗಿ ವಿಮಾನಯಾನದ ಹಿರಿಯ ಕಾರ್ಯಕಾರಿ ತಿಳಿಸಿದ್ದಾರೆ.

Comments are closed.