ಕರ್ನಾಟಕ

ಶಿವಮೊಗ್ಗದಲ್ಲಿ ಅತ್ಯಾಚಾರ ಸಂತ್ರಸ್ತೆಗೂ ಕೊರೊನಾ ಸೋಂಕು!

Pinterest LinkedIn Tumblr


ಶಿವಮೊಗ್ಗ: ಜಿಲ್ಲೆಯಲ್ಲಿ ಅತ್ಯಾಚಾರಕ್ಕೆ ಒಳಗಾಗಿದ್ದ ಸಂತ್ರಸ್ತೆಗೂ ಕೊರೊನಾ ಸೋಂಕು ತಗುಲಿದೆ. ಪೊಲೀಸರು ಸಂತ್ರಸ್ತೆ ಮತ್ತು ಆರೋಪಿಯನ್ನು ಕರೆದುಕೊಂಡು ಹೋಗಿ ಮಹಜರು ಮಾಡಿದ್ದರು. ಈ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಯನ್ನು ಕೂಡ ಕ್ವಾರಂಟೈನ್ ಮಾಡಲಾಗುವುದು.

ಆದರೆ, ಮಹಜರು ಮಾಡಲು ಹೋಗಿದ್ದ ಪೊಲೀಸ್ ಅಧಿಕಾರಿಯು, ಪೊಲೀಸ್ ಇಲಾಖೆಯ ಸಭೆಯಲ್ಲಿ ಭಾಗವಹಿಸಿದ್ದರು. ಸಭೆಯಲ್ಲಿ ಭಾಗವಹಿಸಿದ್ದರಿಂದ ಡಿವೈಎಸ್ಪಿ ಸೇರಿದಂತೆ ಅಲ್ಲಿನ ಸಿಬ್ಬಂದಿಯನ್ನ ಕ್ವಾರಂಟೈನ್ ಮಾಡಲಾಗುವುದು ಎಂದು ರಾಜ್ಯದ ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದರು.

ಹಾವೇರಿಯ ಕೋವಿಡ್ 19 ಆಸ್ಪತ್ರೆಗೆ ಮಂಗಳವಾರ ಗೃಹ ಸಚಿವ ಬಸವರಾಜ ಬೊಮ್ಮಾಯಿ ಭೇಟಿ ನೀಡಿ ಪರಿಶೀಲನೆ ವೇಳೆ ಸುದ್ದಿಗಾರರ ಜತೆ ಮಾತನಾಡಿದರು.

ಜಿಲ್ಲೆಯಲ್ಲಿ ಮುಂಬೈನಿಂದ ಬಂದ ಮೂವರಲ್ಲಿ ಸೋಂಕು ಕಾಣಿಸಿಕೊಂಡಿದೆ. ಮೂವರು ಸೋಂಕಿತರ ಜೊತೆ ಪ್ರಾಥಮಿಕ ಮತ್ತು ದ್ವಿತೀಯ ಸಂಪರ್ಕ ಹೊಂದಿದ್ದವರ ವರದಿಗಳೆಲ್ಲ ನೆಗಟಿವ್ ಬಂದಿವೆ.

ಮೂವರು ಸೋಂಕಿತರನ್ನ ಗುಣಮುಖ ಮಾಡಲು ಜಿಲ್ಲಾಡಳಿತ ಎಲ್ಲ ರೀತಿಯ ಕ್ರಮ ಕೈಗೊಂಡಿದೆ.
ಮೂವರು ಸೋಂಕಿತರು ಗುಣಮುಖರಾಗಿ ಮತ್ತೆ ಜಿಲ್ಲೆ ಗ್ರೀನ್ ಜೋನ್ ಗೆ ಸೇರಲಿದೆ.

ಕೊರೊನಾ ವೈರಸ್‌ ಚಿಕಿತ್ಸೆಗೆ ಐವತ್ತೆಂಟು ಬೆಡ್ ಗಳಿವೆ. ಲಾಕ್ ಡೌನ್‌ನಿಂದ ಹಿಡಿದು ರಾಜ್ಯದ ಗಡಿ ಸೇರಿದಂತೆ ಎಲ್ಲ ಕಡೆಗಳಲ್ಲಿ ನಮ್ಮ ಇಲಾಖೆ ಕೆಲಸ ಮಾಡ್ತಿದೆ.

ಕೊರೊನಾ ನಿಯಂತ್ರಣದಲ್ಲಿ ಮುಂದಾಳುಗಳಾಗಿ ಕೆಲಸ ಮಾಡುತ್ತಿರುವ ಸಿಬ್ಬಂದಿ ತಪಾಸಣೆಗೆ ಆದೇಶ ಮಾಡಿದ್ದೇನೆ. ಕೊರೊನಾ ವಾರಿಯರ್ಸ್‌ಗಳಿಗೆ ಪಿಪಿಇ ಕಿಟ್ ಸಹ ಕೊಡಲು ಹೇಳಿದ್ದೇನೆ ಎಂದರು.

Comments are closed.