ಕರ್ನಾಟಕ

3ನೇ ದಿನದ ಮದ್ಯ ಮಾರಾಟದಿಂದ 231 ಕೋಟಿ ರೂ. ಆದಾಯ

Pinterest LinkedIn Tumblr


ಬೆಂಗಳೂರು(ಮೇ.06): ಮೂರನೇ ದಿನವೂ ಮದ್ಯ ಮಾರಾಟದಿಂದ ಅಬಕಾರಿ ಇಲಾಖೆಗೆ ಭರ್ಜರಿ ಆದಾಯ ಬಂದಿದೆ. ಇಂದು ಕೂಡ ಬಾರ್​ಗಳ ಮುಂದೆ ಲಾಕ್​ಡೌನ್​ನಿಂದ ಮದ್ಯ ಸಿಗದೇ ಬೇಸತ್ತಿದ್ದ ಮದ್ಯ ಪ್ರಿಯರು ಜಮಾಯಿಸಿದ್ದರು. ಇದರ ಪರಿಣಾಮ ಮೂರನೇ ದಿನ ಎಣ್ಣ ಮಾರಾಟದಿಂದ ಬರೋಬ್ಬರಿ 231.6 ಕೋಟಿ ರೂ. ಆದಾಯ ಬಂದಿರುವುದಾಗಿ ಅಬಕಾರಿ ಇಲಾಖೆ ತಿಳಿಸಿದೆ.

ಇಂದು ಸುಮಾರು 39 ಲಕ್ಷ ಲೀಟರ್ ಭಾರತೀಯ ಮದ್ಯ ಮಾರಾಟವಾಗಿದೆ. ಜತೆಗೆ 7 ಲಕ್ಷ ಲೀಟರ್ ಬಿಯರ್ ಮಾರಾಟವಾಗಿದೆ. ಹೀಗಾಗಿ ಮೊದಲು ಮತ್ತು ಎರಡನೇ ದಿನಕ್ಕಿಂತಲೂ ಹೆಚ್ಚು ಅಂದರೇ ಸುಮಾರು 231.6 ಕೋಟಿ ರೂ. ಆದಾಯ ಬಂದಿದೆ. ಈ ಮೂಲಕ ಮೊದಲ ಎರಡು ದಿನದ ದಾಖಲೆ ಮುರಿದು ಬಿದ್ದಿದೆ.

ಎರಡನೇ ದಿನದ ಮದ್ಯ ಮಾರಾಟ ರಾಜ್ಯ ಅಬಕಾರಿ ಇಲಾಖೆಯ ಬೊಕ್ಕಸವನ್ನು ತುಂಬಿಸಿತ್ತು. ನಿನ್ನೆ ಮದ್ಯ ಮಾರಾಟದಿಂದ ಬರೋಬ್ಬರಿ 197 ಕೋಟಿ ರೂ. ಆದಾಯ ಬಂದಿತ್ತು. ಈ ಮೂಲಕ ಮೊದಲನೇ ದಿನದ ದಾಖಲೆಯನ್ನು ಮುರಿದಿತ್ತು. ಎಂದಿನಂತೆಯೇ ರಾಜ್ಯಾದ್ಯಂತ ಎರಡನೇ ದಿನವೂ ಮಹಿಳೆಯರು ಮತ್ತು ಪುರುಷರು ಸೇರಿದಂತೆ ಎಲ್ಲಾ ವಯೋಮಾನದವರು ಬಾರ್​​ಗಳ ಮುಂದೆ ಮುಗಿಬಿದ್ದ ಪರಿಣಾಮ ಸುಮಾರು 197 ಕೋಟಿ ರೂ. ಮೌಲ್ಯದ ಮದ್ಯ ಮಾರಾಟವಾಗಿತ್ತು.

ಇನ್ನು, ಮೊದಲ ದಿನ ಸುಮಾರು 3.9 ಲಕ್ಷ ಲೀಟರ್ ಬಿಯರ್ ಮತ್ತು 8.5 ಲಕ್ಷ ಲೀಟರ್ ಭಾರತೀಯ ತಯಾರಿಕಾ ಮದ್ಯ ಮಾರಾಟವಾಗಿತ್ತು. ಈ ಮಾರಾಟದ ಅಂದಾಜು ಮೌಲ್ಯ ಸುಮಾರು 45 ಕೋಟಿ ರೂಪಾಯಿ ಎಂದು ಹೇಳಲಾಗಿತ್ತು. ಇಷ್ಟು ಪ್ರಮಾಣದ ಮದ್ಯ ಮಾರಾಟದ ಆದಾಯವೂ ಭಾರತದ ಇತಿಹಾಸದಲ್ಲೇ ಮೊದಲು ಎನ್ನಲಾಗಿತ್ತು.

Comments are closed.