ಕರ್ನಾಟಕ

ಲಾಕ್‌ಡೌನ್‌: ಶೇ. 40ರಷ್ಟು ರೆಸ್ಟೋರೆಂಟ್‌ಗಳು ಶಾಶ್ವತ ಬಂದ್‌?

Pinterest LinkedIn Tumblr


ಬೆಂಗಳೂರು: ಕೋವಿಡ್-19‌ ಬಿಕ್ಕಟ್ಟಿನಿಂದಾಗಿ ಮುಂದಿನ 6 ತಿಂಗಳಲ್ಲಿ 10ರಲ್ಲಿ 4 ಅಂದರೇ, ಶೇ.40 ರೆಸ್ಟೋರೆಂಟ್‌ಗಳು ಶಾಶ್ವತವಾಗಿ ಮುಚ್ಚಿ ಹೋಗುವ ಸಾಧ್ಯತೆಗಳಿವೆ. ಇನ್ನು ಆಹಾರ ವಿತರಣೆ ಉದ್ಯಮವು ಲಾಕ್‌ಡೌನ್‌ಗೆ ಮೊದಲಿದ್ದ ಮಟ್ಟವನ್ನು ಮುಟ್ಟಲು ಒಂದು ವರ್ಷವಾದರೂ ಬೇಕಾಗುತ್ತದೆ ಎಂದು ಉದ್ಯಮ ತಜ್ಞರು ಅಂದಾಜು ಮಾಡಿದ್ದಾರೆ.

ಲಾಕ್‌ಡೌನ್‌ಗೆ ಮುನ್ನ ರೆಸ್ಟೋರೆಂಟ್‌ಗಳ ವಹಿವಾಟು 4 ಲಕ್ಷ ಕೋಟಿ ರೂ. ಇತ್ತು. ಅಲ್ಲದೇ 70 ಲಕ್ಷ ಜನರಿಗೆ ನೇರ ಉದ್ಯೋಗಾವಕಾಶ ಕಲ್ಪಿಸಿದ್ದವು. ಸರಕಾರವು ನೆರವು ನೀಡದೇ ಹೋದರೆ, ಈ ಉದ್ಯಮಕ್ಕೆ ದೊಡ್ಡ ಹೊಡೆತ ಬೀಳಲಿದೆ.

ಲಾಕ್‌ಡೌನ್‌ ಸಂದರ್ಭದಲ್ಲಿ ಮುಚ್ಚಲಾಗಿರುವ ಕೆಲವು ರೆಸ್ಟೋರೆಂಟ್‌ಗಳು ಮತ್ತೆ ತೆರೆಯುವುದೇ ಅನುಮಾನ. ಕೆಲವು ರೆಸ್ಟೋರೆಂಟ್‌ ಮಾಲೀಕರು, ತಮ್ಮ ವ್ಯವಹಾರವನ್ನು ಮರು ವಿನ್ಯಾಸ ಮಾಡಲು ಚಿಂತನೆ ನಡೆಸಿದ್ದಾರೆ. ರಾಷ್ಟ್ರೀಯ ರೆಸ್ಟೋರೆಂಟ್‌ ಅಸೋಸಿಯೇಷನ್‌ ಆಫ್‌ ಇಂಡಿಯಾ ಅಂದಾಜಿನ ಪ್ರಕಾರ, ಫುಡ್‌ ವಿತರಣೆ ವಹಿವಾಟು ಶೇ.70ರಷ್ಟು ಕುಸಿಯಲಿದೆ. ಈಗಾಗಲೇ ಸ್ವಿಗ್ಗಿ ಮತ್ತು ಜೊಮ್ಯಾಟೊ ವಹಿವಾಟಿಗೆ ದೊಡ್ಡ ನಷ್ಟವಾಗಿದೆ.

ವೇತನ ಕಡಿತ ಮತ್ತು ಉದ್ಯೋಗ ನಷ್ಟದಿಂದಾಗಿ ಜನರ ಖರ್ಚು ಮಾಡುವ ಸಾಮರ್ಥ್ಯ‌ ತಗ್ಗುತ್ತದೆ. ಈ ಪರಿಣಾಮ ರೆಸ್ಟೋರೆಂಟ್‌ಗಳಿಗೂ ಹೊಡೆತ ಬೀಳಲಿದೆ. ಕೋವಿಡ್‌ ಭೀತಿಯಿಂದಾಗಿ ಹೊರಗಿನ ಆಹಾರದ ಬಗ್ಗೆ ಭೀತಿ ಹೆಚ್ಚುವ ಅವಕಾಶಗಳೂ ಇವೆ.

ಹೊಸ ಪ್ಲಾನ್‌

* ಪ್ಯಾಕ್‌ ಮಾಡಿದ ಊಟದ ಕಿಟ್‌ಗಳ ಮೂಲಕ ಗ್ರಾಹಕರನ್ನು ಮುಟ್ಟಲು ಯತ್ನ.

* ಆರೋಗ್ಯಕರ ಉತ್ಪನ್ನಗಳಿಗೆ ಆದ್ಯತೆ

* ಲಾಭ ರಹಿತ ವ್ಯವಹಾರಗಳ ಸ್ಥಗಿತ

* ವಾಟ್ಸ್‌ಆ್ಯಪ್‌ನಂಥ ಮಾಧ್ಯಮಗಳ ಮೂಲಕ ಗ್ರಾಹಕರ ತಲುಪುವ ಪ್ರಯತ್ನ

Comments are closed.