ಕರ್ನಾಟಕ

ಮುನ್ನೆಚ್ಚರಿಕೆ ಇಲ್ಲದೆ ಏಕಾಏಕಿ ಲಾಕ್’ಡೌನ್ ತೆರವಾದರೆ ಬೆಂಗಳೂರಿನಲ್ಲಿಯೇ ಭಾರೀ ಸಂಖ್ಯೆಯಲ್ಲಿ ಸಾವು!

Pinterest LinkedIn Tumblr


ಬೆಂಗಳೂರು: ರಾಜ್ಯದಲ್ಲಿ ಅದರಲ್ಲೂ ಪ್ರಮುಖವಾಗ ಬೆಂಗಳೂರು ಮಹಾನಗರದಲ್ಲಿ ಮೇ.3ರ ಬಳಿಕ ಏಕಾಏಕಿ ಲಾಕ್’ಡೌನ್ ತೆರವುಗೊಳಿಸಿ, ಯಾವುದೇ ಮುನ್ನೆಚ್ಚರಿಕೆ ವಹಿಸದೆ ಸಹಜ ಜೀವನಕ್ಕೆ ಅವಕಾಶ ಮಾಡಿಕೊಟ್ಟಿದ್ದೇ ಆದರೆ, ಮುಂದೆ ಅಪಾಯ ಎದುರಾಗುವುದು ಕಟ್ಟಿಟ್ಟ ಬುತ್ತಿ ಎಂದು ಹೇಳಲಾಗುತ್ತಿದೆ.

ಮೇ.3ರ ನಂತರ ಲಾಕ್’ಡೌನ್ ತೆರವುಗೊಳಿಸಿ ಯಾವುದೇ ಎಚ್ಚರಿಕೆ ಕ್ರಮ ವಹಿಸಿದೇ ಹೋದರಲ್ಲಿ ಜುಲೈ ಅಂತ್ಯದ ವೇಳೆಗೆ ಬೆಂಗಳೂರು ನಗರ ಒಂದರಲ್ಲಿಯೇ ಭಾರೀ ಸಂಖ್ಯೆಯಲ್ಲಿ ಸಾವು ಸಂಭವಿಸಲಿದೆ ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.

ಮೇ.3ರ ಲಾಕ್’ಡೌನ್ ಬಳಿಕ 26 ದಿನಗಳ ಲಾಕ್’ಡೌನ್ ನಡೆಸಿ ಬಳಿಕ ಸಹಜ ಜೀವನಕ್ಕೆ ಮರಳಿದರೂ ಸುಮಾರು 8 ಮಂದಿ ಸಾವನ್ನಪ್ಪುವ ಸಾಧ್ಯತೆಗಳಿವೆ. ಮೇ.3 ರ ಬಳಿಕ 40 ದಿನಘಳ ಲಾಕ್’ಡೌನ್ ನಡೆಸಿ ಬಳಿಕ ಸಹಜ ಜೀವನಕ್ಕೆ ಅವಕಾಶ ನೀಡಿ ಪ್ರಕರಣಗಳ ಪ್ರತ್ಯೇಕಿಸುವುದು ಮುಂದುವರೆಸಿದರೆ ಸಾವಿನ ಪ್ರಮಾಣ ಗಂಭೀರ ಪ್ರಮಾಣದಲ್ಲಿ ಕಡಿಮೆಯಾಗಲಿದೆ. ಈ ಮುನ್ನೆಚ್ಚರಿಕೆಗಳನ್ನು ಮುಂದುವರೆಸಬೇಕೆಂಬ ಸಲಹೆಗಳು ಇದೀಗ ಬರುತ್ತಿವೆ.

ಈ ಕುರಿತು ಪ್ರತಿಕ್ರಿಯ ನೀಡಿರುವ ಸರ್ಕಾರ ಮುಖ್ಯ ಕಾರ್ಯದರ್ಶಿ ವಿಜಯ್ ಭಾಸ್ಕರ್ ಅವರು, ಲಾಕ್’ಡೌನ್ ಕುರಿತಂತೆ ಹಲವು ತಜ್ಞರು ಭಿನ್ನ ಭಿನ್ನ ರೀತಿಯ ಅಭಿಪ್ರಾಯಗಳನ್ನು ನೀಡುತ್ತಿದ್ದಾರೆ. ರಾಜ್ಯದಲ್ಲಿ ಸೋಂಕಿತ ಪ್ರಕರಣಗಳ ಸಂಖ್ಯೆ 28,000ಕ್ಕೆ ಏರಿಕೆಯಾಗಬಹುದು ಎಂದು ಅಂದಾಜಿಸಲಾಗಿದೆ. ಅದರೊಂದಿಗೆ ದೇಶದ ಆರ್ಥಿಕತೆ ಸರಿದೂಗಿಸುವುದೂ ಕೂಡ ದೊಡ್ಡ ಸವಾಲಾಗಿ ಪರಿಣಮಿಸಿದೆ. ವೈರಸ ಮಟ್ಟ ಹಾಸಲು ಸಾಕಷ್ಟು ವೈದ್ಯಕೀಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ. ಆದರೆ, ರಾಜ್ಯದ ಆರ್ಥಿಕತೆ ಸರಿದೂಗಿಸುವುದೇ ದೊಡ್ಡ ಸವಾಲಾಗಿದೆ ಎಂದು ಹೇಳಿದ್ದಾರೆ.

ಇತರೆ ರಾಜ್ಯಗಳಿಗೆ ಹೋಲಿಕೆ ಮಾಡಿದರೆ, ರಾಜ್ಯ ಉತ್ತಮ ಸ್ಥಿತಿಯಲ್ಲಿಯೇ ಇದೆ. ರಾಜ್ಯದಲ್ಲಿ ವೈದ್ಯಕೀಯ ಪರೀಕ್ಷೆಗಳ ಸಂಖ್ಯೆ ಕೂಡ ಸುಧಾರಿಸಿದೆ. ಒಬ್ಬ ವ್ಯಕ್ತಿಯಲ್ಲಿ ವೈರಸ್ ಕಾಣಿಸಿಕೊಂಡರೆ, ಅವರ ಸುತ್ತಮುತ್ತಲಿರುವ 50 ಮಂದಿಯನ್ನು ಪರೀಕ್ಷೆಗೊಳಪಡಿಸಲಾಗುತ್ತಿದೆ. ಲಾಕ್ಡೌನ್ ತೆರವುಗೊಳಿಸುವುದನ್ನೂ ಕೂಡ ಯೋಜಿತ ರೀತಿಯಲ್ಲಿಯೇ ನಡೆಸಲಾಗುತ್ತದೆ. ಇತರೆ ವಲಯಗಳತ್ತ ಕೂಡ ಗಮನ ಹರಿಸಲಾಗುತ್ತದೆ ಎಂದು ತಿಳಿಸಿದ್ದಾರೆ.

ಡಾ.ಕಸ್ತೂರಿಯವರು ಮಾತನಾಡಿ, ಸೋಂಕು ಹೆಚ್ಚಾಗುವುದನ್ನು ಜನರು ಅರ್ಥ ಮಾಡಿಕೊಳ್ಳಬೇಕಿದೆ. ಹಾಗೂ ಅದನ್ನು ನಾವು ಎದುರಿಸಲೇಬೇಕಿದೆ. ಸಾರ್ವಜನಿಕ ಆರೋಗ್ಯ ವ್ಯವಸ್ಥೆ ಬೇರಿನ ಸಮೇತ ನಾವು ಸರಿಪಡಿಸಬೇಕಿದೆ. ಕೊರೋನಾ ಲಕ್ಷಣಗಳು ಕಂಡ ಬಂದ ಕೂಡಲೇ ಯಾರನ್ನು ಸಂಪರ್ಕಿಸಬೇಕು, ಏನನ್ನು ಮಾಡಬೇಕೆಂಬುದು ಕೂಡಲೇ ಜನರಿಗೆ ಜನರಿಗೆ ತಿಳಿಯುವಂತೆ ಮಾಡಬೇಕಿದೆ. ಈ ಕುರಿತು ಶಿಕ್ಷಣ ನೀಡಬೇಕಿದೆ. ಅಲ್ಪ ಮಟ್ಟದಲ್ಲಿ ಸೋಂಕು ಕಂಡು ಬಂದವರಿಗೆ ಮನೆಗಳಲ್ಲಿಯೇ ಚಿಕಿತ್ಸೆ ನೀಡಬೇಕಿದೆ. ಕೇವಲ ಗಂಭೀರ ಪ್ರಕರಣಗಳಿಗೆ ಮಾತ್ರ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡುವಂತೆ ಮಾಡಬೇಕಿದೆ ಎಂದು ಹೇಳಿದ್ದಾರೆ.

Comments are closed.