ಬೆಂಗಳೂರು: ಕರ್ನಾಟಕದಲ್ಲಿ ಕೊರೋನಾ ವೈರಸ್ ಅಬ್ಬರ ಮುಂದುವರೆದಿದ್ದು ಇಂದು ಮತ್ತೆ 15 ಪಾಸಿಟಿವ್ ಪ್ರಕರಣಗಳು ದಾಖಲಾಗಿದ್ದು, ಈ ಪೈಕಿ ಮೂವರು ಮಕ್ಕಳು ಕೂಡ ಸೇರಿದ್ದಾರೆ.
ರಾಜ್ಯದಲ್ಲಿ 8, 14 ಹಾಗೂ 16 ವರ್ಷದ ಮಕ್ಕಳಲ್ಲಿ ಹೊಸದಾಗಿ ಕೊರೋನಾ ವೈರಸ್ ಸೋಂಕು ಪತ್ತೆಯಾಗಿದ್ದು, ಭಾನುವಾರ ಸಂಜೆಯಿಂದ ಸೋಮವಾರ ಮಧ್ಯಾಹ್ನದವರೆಗೆ 15 ಹೊಸ ಪ್ರಕರಣಗಳು ಪತ್ತೆಯಾಗಿದೆ. ಆ ಮೂಲಕ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 247ಕ್ಕೇರಿಕೆಯಾಗಿದೆ.
ಪ್ರಮುಖವಾಗಿ ಧಾರವಾಡದಲ್ಲಿ 4 ಪ್ರಕರಣಗಳು ದಾಖಲಾಗಿದ್ದು, ಮಳವಳ್ಳಿಯಲ್ಲಿ 3, ಬೀದರ್ ನಲ್ಲಿ 2, ಬಾಗಲಕೋಟೆಯಲ್ಲಿ 1, ಬೆಳಗಾವಿಯ ರಾಯಭಾಗದಲ್ಲಿ, ದೊಡ್ಡಬಳ್ಳಾಪುರದಲ್ಲಿ 1 ಹಾಗೂ ಬೆಂಗಳೂರು ನಗರದ 1 ಪ್ರಕರಣ ವರದಿಯಾಗಿದೆ.
ಮಂಡ್ಯ ಮಳವಳ್ಳಿಯ 8 ವರ್ಷದ ಹೆಣ್ಣು ಮಗು, 18 ವರ್ಷದ ಯುವಕ ಮತ್ತು 60 ವರ್ಷದ ವೃದ್ಧರಲ್ಲಿ ವೈರಸ್ ಸೋಂಕು ದೃಢವಾಗಿದ್ದು, ಹುಬ್ಬಳ್ಳಿ-ಧಾರವಾಡದ 55 ಮತ್ತು 36 ವರ್ಷದ ಗಂಡು ಮತ್ತು 60 ವರ್ಷದ ಮಹಿಳೆಯಲ್ಲಿ ಸೋಂಕು ಪತ್ತೆಯಾಗಿದೆ. ಅಂತೆಯೇ ಬಾಗಲಕೋಟೆಯ ಮುಧೋಳದ 27 ವರ್ಷದ ಯುವಕನಲ್ಲಿ, ಬೀದರ್ ನಲ್ಲಿ 16 ಮತ್ತು 35 ವರ್ಷದ ಮಹಿಳೆ, ಬೆಳಗಾವಿಯ ರಾಯಭಾಗದಲ್ಲಿ 20, 14, 45 ವರ್ಷದ ವ್ಯಕ್ತಿಗಳು, ದೊಡ್ಡಬಳ್ಳಾಪುರದಲ್ಲಿ 39 ವರ್ಷದ ಗಂಡು, ಬೆಂಗಳೂರು ನಗರದ 62 ವರ್ಷದ ವ್ಯಕ್ತಿಯಲ್ಲಿ ಸೋಂಕು ದೃಢಪಟ್ಟಿದೆ ಎಂದು ತಿಳಿದುಬಂದಿದೆ.
Comments are closed.