ಕರ್ನಾಟಕ

ಕೊರೊನಾ ಪೀಡಿತ ಮಹಿಳೆಯ ಮನೆಗೆ ತೆರಳಿದ್ದ ವಿಜಯಪುರ ಪೊಲೀಸರಿಗೆ ಕ್ವಾರಂಟೈನ್!

Pinterest LinkedIn Tumblr


ವಿಜಯಪುರ: ಗುಮ್ಮಟ ನಗರಿ ವಿಜಯಪುರದಲ್ಲಿ ಮಾರಕ ಕೊರೊನಾ ವೈರಸ್ ನ ಮೊದಲ ಪ್ರಕರಣ ದಾಖಲಾಗಿದ್ದು, ಕೊರೊನಾ ವೈರಸ್ ಪೀಡಿತ ಮಹಿಳೆಯ ಮನೆಗೆ ಮಾಹಿತಿ ಸಂಗ್ರಹಿಸಲು ತೆರಳಿದ್ದ ಇಬ್ಬರು ಪೊಲೀಸರನ್ನೂ ಇದೀಗ ಕ್ವಾರಂಟೈನ್ ಗೆ ಗುರಿಪಡಿಸಲಾಗಿದೆ.

ಕೊರೊನಾ ವೈರಸ್ ಪೀಡಿತ ಮಹಿಳೆ ಮತ್ತು ಆಕೆಯ ಕುಟುಂಬ ಸದಸ್ಯರ ಕುರಿತು ಮಾಹಿತಿ ಪಡೆಯಲು ಹೋಗಿದ್ದ ಗೋಳಗುಮ್ಮಟ ಪಿಎಸ್‌ಐ ಹಾಗೂ ಇಬ್ಬರು ಪೇದೆಗಳನ್ನು ಹೋಂ ಕ್ವಾರಂಟೈನ್‌ಗೆ ಗುರಿಪಡಿಸಲಾಗಿದೆ.

ಕೊರೊನಾ ಪೀಡಿತ ಮಹಿಳೆಯ ಮನೆಗೆ ಭೆಟಿ ನೀಡಿದ್ದ ಪಿಎಸ್‌ಐ ಹಾಗೂ ಇಬ್ಬರು ಪೇದೆಗಳಿಗೆ ಮನೆಯಲ್ಲೇ ಇರಲು ಜಿಲ್ಲಾ ಪೊಲೀಸ್ ಇಲಾಖೆ ಸೂಚನೆ ನೀಡಿದ್ದು, ಅವರ ಆರೋಗ್ಯದ ಮೇಲೆ ತೀವ್ರ ನಿಗಾ ಇರಿಸಿದೆ.

ಈ ಮಧ್ಯೆ ವಿಜಯಪುರ ನಗರದಲ್ಲಿ 6 ಕೊರೊನಾ ವೈರಸ್ ಪಾಸಿಟಿವ್ ಪ್ರಕರಣಗಳು ದಾಖಲಾಗಿದ್ದು, ಗುಮ್ಮಟನಗರಿಯ ಜನರನ್ನು ಬೆಚ್ಚಿ ಬೀಳಿಸಿದೆ. ಒಂದೇ ದಿನದಲ್ಲಿ ಆರು ಪ್ರಕರಣಗಳು ದಾಖಲಾಗಿರುವುದರಿಂದ ಜಿಲ್ಲಾ ಆರೋಗ್ಯ ಇಲಾಖೆಯನ್ನು ಸರ್ವಸನ್ನದ್ಧ ಸ್ಥಿತಿಯಲ್ಲಿ ಇಡಲಾಗಿದೆ.

Comments are closed.