ದಾವಣಗೆರೆ: ಎಲ್ಲಾ ಅಲ್ಪಸಂಖ್ಯಾತರು ದೇಶದ್ರೋಹಿಗಳಲ್ಲ. ಭಯೋತ್ಪಾದಕರೂ ಅಲ್ಲ. ಈಗಲೂ ನಾನು ವಿನಂತಿ ಮಾಡಿಕೊಳ್ಳುತ್ತೇನೆ. ತಬ್ಲಿಘಿ ಜಮಾತ್ ಸಮಾವೇಶಕ್ಕೆ ಹೋಗಿ ಬಂದವರು ಆಸ್ಪತ್ರೆಗೆ ಹೋಗಿ ತಪಾಸಣೆ ಮಾಡಿಸಿಕೊಳ್ಳಬೇಕು ಎಂದು ಕೇಳಿಕೊಳ್ಳುತ್ತೇನೆ ಎಂದು ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ, ಶಾಸಕ ಎಂ.ಪಿ. ರೇಣುಕಾಚಾರ್ಯ ಮನವಿ ಮಾಡಿದ್ದಾರೆ.
ದಾವಣಗೆರೆಯಲ್ಲಿ ಮಾತನಾಡಿದ ರೇಣುಕಾಚಾರ್ಯ ಅವರು, ಯಾರು ದಿಲ್ಲಿಯ ತಬ್ಲಿಘಿ ಜಮಾತ್ ಸಮಾವೇಶದಲ್ಲಿ ಪಾಲ್ಗೊಂಡು ಹೊರಗಡೆ ಬರುತ್ತಾ ಇಲ್ಲ. ತಪ್ಪಿಸಿಕೊಂಡಿದ್ದಾರೆ. ನಿಜವಾಗಿಯೂ ಸರ್ಕಾರ ಅಂತಹವರಿಗೆ ರಕ್ಷಣೆ ಮಾಡಬಾರದು. ಅಂತಹವರನ್ನು ಗುಂಡಿಟ್ಟು ಹೊಡೆದರೂ ತಪ್ಪಲ್ಲ. ಒಬ್ಬರಿಂದ ಇಡೀ ದೇಶಕ್ಕೆ ವೈರಸ್ ಹರಡುತ್ತದೆ ಎಂದರು.
ಮಂಗಳವಾರ ಪಾತಾಳ ಲಿಂಗೇಶ್ವರ ದೇವಸ್ಥಾನ ಬಳಿ ಎಂ.ಪಿ. ರೇಣುಕಾಚಾರ್ಯ ಆಹಾರ ಸಾಮಗ್ರಿ ವಿತರಣೆ ಮಾಡಿದರು.
Comments are closed.