
ಬೆಂಗಳೂರು: ಕರ್ನಾಟಕ ಸಾಂಕ್ರಾಮಿಕ ರೋಗಗಳ ನಿಬಂಧನೆಗಳು -2020 ಅಡಿ ರಾಜ್ಯಾದ್ಯಂತ ಮಾರ್ಚ್.23ರ ಮಧ್ಯರಾತ್ರಿ 12 ರಿಂದ ಮಾರ್ಚ್ 31 ಮಧ್ಯರಾತ್ರಿ 12 ಗಂಟೆವರೆಗೂ ಈ ಕೆಳಕಂಡ ನಿರ್ಬಂಧ ವಿಧಿಸಲಾಗಿದೆ.
ಈ ಎಲ್ಲಾ ಸೇವೆಗಳ ನಿರ್ಬಂಧ :
– ಸುತ್ತಲಿನ ರಾಜ್ಯಗಳ ಗಡಿ ಬಂದ್.
– ರಾಜ್ಯ ಹಾಗೂ ಅಂತರ್ ಜಿಲ್ಲೆ ಎಲ್ಲಾ ಖಾಸಗಿ ಹಾಗೂ ಸರ್ಕಾರಿ ಬಸ್ ಸೇವೆಗಳು, ವಾಹನ ಸಂಚಾರನೂ ಬಂದ್.
– ಓಲಾ, ಉಬರ್ ಸೇವೆ ಬಂದ್.
– ಅತ್ಯವಶ್ಯಕ ವಸ್ತುಗಳ ವ್ಯಾಪ್ತಿಗೆ ಬಾರದ ಎಲ್ಲಾ ಅಂಗಡಿ ಮುಂಗಟ್ಟು ವಾಣಿಜ್ಯ ಮಳಿಗೆ, ಕಾರ್ಖಾನೆ, ಗೋಡೋನ್ ಮುಚ್ಚಬೇಕು.
– ಎಲ್ಲಾ ಸಂಸ್ಥೆಗಳು ತಮ್ಮ ಕಾರ್ಮಿಕರ ಬಲವನ್ನು ಶೇ.50ಕ್ಕೆ ಇಳಿಸಬೇಕು. ಯಾರನ್ನು ಕೆಲಸದಿಂದ ತೆಗೆಯದೇ ಪಾವತಿ ಮೇಲಿನ ರಜೆ ಮಂಜೂರು ಮಾಡಬೇಕು.
– ಅತ್ಯಗತ್ಯ ಸೇವೆ ಹೊರತು ಪಡಿಸಿ ಎಲ್ಲಾ ತಾಂತ್ರಿಕ, ಜೈವಿಕ ಸಂಸ್ಥೆಗಳು ವರ್ಕ್ ಫ್ರಂ ಹೋಮ್ ಕಡ್ಡಾಯ ಜಾರಿ ಮಾಡಬೇಕು.
– ಎಲ್ಲಾ ಹವಾನಿಯಂತ್ರಿತ ಬಸ್ ನಿಲ್ಲಿಸಿ ಅಗತ್ಯವಿರುವಷ್ಟು ಬಸ್ ಕಾರ್ಯಾಚರಣೆಗೆ ಸಾರಿಗೆ ಇಲಾಖೆಗೆ ಸೂಚನೆ.
– ಸಾರ್ವಜನಿಕ ಸ್ಥಳದಲ್ಲಿ ಐದಕ್ಕಿಂತ ಹೆಚ್ಚು ಜನ ಒಂದೇ ಕಡೆ ಸೇರುವುದನ್ನು ನಿರ್ಬಂಧಿಸಲಾಗಿದೆ.
– ಎಲ್ಲಾ ರೀತಿಯ ಉತ್ಸವ, ಧಾರ್ಮಿಕ ಕಾರ್ಯಕ್ರಮ, ಪ್ರಾರ್ಥನೆ ಸೇರುವುದು, ಹೆಚ್ಚು ಮಂದಿ ಜತೆಗೂಡಿ ಹಬ್ಬ ಆಚರಣೆ ಮಾಡುವಂತಿಲ್ಲ.
– ಎಲ್ಲಾ ಟ್ಯಾಕ್ಸಿ ಹಾಗೂ ಆಟೋ ಸೇವೆಗಳು ನಿರ್ಬಂಧ. (ವೈದ್ಯಕೀಯ/ ತುರ್ತು ಸನ್ನಿವೇಶ ಹೊರತುಪಡಿಸಿ)
– ಎಲ್ಲಾ ಸರ್ಕಾರಿ ಅಧಿಕಾರಿಗಳು ಬಳಸುವ ಅಗತ್ಯವಲ್ಲದ ಸಾರಿಗೆ ಸೇವೆಗಳು ಸ್ಥಗಿತ.
-ಅಂತರ್ ರಾಜ್ಯದಿಂದ ಬರುವ ಎಲ್ಲಾ ಪ್ರಕಾರದ ವಾಹನಗಳ ಸಂಚಾರ ಸ್ಥಗಿತಗೊಳಿಸಲಾಗಿದೆ. (ವೈದ್ಯಕೀಯ ಮತ್ತಿತರ ತುರ್ತು ಸನ್ನಿವೇಶ ಹೊರತುಪಡಿಸಿ)
ಈ ಸೇವೆಗೆ ನಿರ್ಬಂಧ ಅನ್ವಯವಿಲ್ಲ:
– ದಿನಸಿ ಅಂಗಡಿ, ಹಾಲು, ತರಕಾರಿ, ಮಾಂಸ, ಮೀನು, ಹಣ್ಣು ಮಾರುಕಟ್ಟೆಗಳು ಹಾಗೂ ಮಳಿಗೆಗಳು.
– ಸರಕು ವಾಹನ ಓಡಾಟ.
– ಪೊಲೀಸ್ ಹಾಗೂ ಅಗ್ನಿ ಶಾಮಕ ಸೇವೆ.
– ಸರ್ಕಾರಿ ಕಚೇರಿಗಳು, ಪುರ ಸಭೆ, ನಗರಸಭೆ, ಎಲ್ಲಾ ಪಂಚಾಯ್ತಿಗಳು, ಅಂಚೆ ಸೇವೆ.
– ವಿದ್ಯುತ್, ನೀರು, ಬ್ಯಾಂಕ್, ಎಟಿಎಂ, ಟೆಲಿಕಾಂ.
– ಫುಡ್ ಡೆಲಿವೆರಿ, ಫಾರ್ಮಸಿಟಿಕಲ್, ವೈದ್ಯಕೀಯ ಸಲಕರಣೆ ಮಳಿಗೆ.
– ಹೋಟೆಲ್‌ಗಳಲ್ಲಿ ಪಾರ್ಸಲ್ ಸೇವೆ ಮಾತ್ರ.
– ಕೃಷಿ, ತೋಟಗಾರಿಕೆ, ಮೀನುಗಾರಿಕೆ, ಪಶುಸಂಗೋಪನೆ ಸಂಬ ಮಳಿಗೆಗಳು.
– ಮುದ್ರಣಾ ಹಾಗೂ ವಿದುನ್ಮಾನ ಮಾಧ್ಯಮ ಸಂಸ್ಥೆಗಳು
– ಕುಡಿಯುವ ನೀರಿನ ಘಟಕಗಳು.
– ಖಾಸಗಿ ಭದ್ರತಾ ಸೇವೆಗಳು.
Comments are closed.