ಕರ್ನಾಟಕ

ಜಾತಿ ನೆಪ ಹೇಳಿ ಕೈ ಕೊಟ್ಟ ಪ್ರಿಯತಮನ ಮನೆಗೆ ಹೋಗಿ ಯುವತಿ ಗಲಾಟೆ

Pinterest LinkedIn Tumblr


ಬೆಳಗಾವಿ: ಆರು ವರ್ಷದಿಂದ ಪ್ರೀತಿ ಮಾಡಿ ಕೈ ಕೊಟ್ಟ ವಂಚಕ ಪ್ರಿಯತಮನ ಮನೆಗೆ ಹೋಗಿ ಯುವತಿ ಗಲಾಟೆ ಮಾಡಿದ ಘಟನೆ ಬೆಳಗಾವಿಯಲ್ಲಿ ನಡೆದಿದೆ.

ಹಲಗಾ ನಿವಾಸಿ ವಿಕ್ರಮ್ ಕ್ಯಾತನ್ನವರ್ ಮತ್ತು ಯುವತಿ ಆರು ವರ್ಷದಿಂದ ಪ್ರೀತಿಸುತ್ತಿದ್ದರು. ಪ್ರೀತಿ ಮಾಡಿದವನು ಅನ್ಯ ಜಾತಿ ನೆಪವೊಡ್ಡಿ ಮದುವೆಯಾಗಲು ನಿರಾಕರಿಸಿದ್ದನು. ಅನ್ಯಾಯಕ್ಕೊಳಗಾದ ಯುವತಿ ಆತ ವಾಸವಿದ್ದ ಬೆಳಗಾವಿಯ ಬಿಎಸ್‍ವೈ ಮಾರ್ಗದ ನಾಕಾ ಬಳಿಯ ಮನೆಗೆ ಎಂಟ್ರಿ ಕೊಟ್ಟಿದ್ದಾಳೆ. ಯುವತಿ ಬರುತ್ತಿದ್ದಂತೆ ಪ್ರಿಯಕರ ಮತ್ತು ಆತನ ತಾಯಿ ಅಲ್ಲಿಂದ ಕಾಲ್ಕಿತ್ತಿದ್ದಾರೆ.

ಈ ವೇಳೆ ಪ್ರಿಯಕರನ ಚಿಕ್ಕಮ್ಮ ಮತ್ತು ಯುವತಿ ಮಧ್ಯೆ ವಾಗ್ವಾದ ನಡೆದಿದೆ. ಪ್ರಿಯಕರ ವಿಕ್ರಮ್ ಕರೆಯಿಸಿ ಮದುವೆ ಮಾಡಿಕೊಡುವಂತೆ ಯುವತಿ ಗಲಾಟೆ ಮಾಡಿದ್ದಾಳೆ. ಆದ್ರೆ ವಿಕ್ರಮ್ ಎಲ್ಲಿ ಹೋಗಿದ್ದಾನೆ ಎಂಬುದರ ಬಗ್ಗೆ ನಮಗೆ ಗೊತ್ತಿಲ್ಲ ಎಂದು ಯುವಕನ ಚಿಕ್ಕಮ್ಮ ಹೇಳುತ್ತಿದ್ದಾರೆ.

Comments are closed.