ಕರ್ನಾಟಕ

ಕೊರೊನಾ ವೈರಸ್‌: 65,000 ಕೋಳಿ ಜೀವಂತ ದಹಿಸಿದ!

Pinterest LinkedIn Tumblr


ಗೋಕಾಕ: ಕೊರೊನಾ ವೈರಸ್‌ ಹಾವಳಿಯಿಂದ ಕೋಳಿ ಮಾಂಸದ ದರ ನೆಲಕ್ಕಚ್ಚಿರುವ ಹಿನ್ನೆಲೆಯಲ್ಲಿ ತಾಲೂಕಿನ ಲೋಳಸೂರ ಗ್ರಾಮದ ಕೋಳಿ ಫಾರಂ ಮಾಲೀಕರೊಬ್ಬರು 65 ಸಾವಿರ ಕೋಳಿಗಳನ್ನು ಜೀವಂತ ಹೂತ ಘಟನೆ ತಡವಾಗಿ ಬೆಳಕಿಗೆ ಬಂದಿದೆ

ನಜೀರ ಮಕಾಂದಾರ ಎಂಬವರು ತಮ್ಮ ಸ್ವಂತ ಹೊಲದಲ್ಲಿ ಗುಂಡಿ ತೆಗೆದುಕೋಳಿಗಳನ್ನು ಹೂತಿದ್ದಾರೆ. ಕೊರೊನಾ ಭೀತಿ ಹಿನ್ನೆಲೆಯಲ್ಲಿ ಖರೀದಿದಾರರು ಇಲ್ಲದಿರುವುದು ಮತ್ತು ಬೆಳೆದು ನಿಂತ ಕೋಳಿ ಆಹಾರಕ್ಕೆ ವೆಚ್ಚ ಮಾಡಲು ಸಾಧ್ಯವಾಗದಿರುವುದು ಇದಕ್ಕೆ ಕಾರಣ ಎಂದು ಅವರು ತಿಳಿಸಿದ್ದಾರೆ.
ಒಂದು ಕೆಜಿ ಕೋಳಿ ಮಾಂಸದ ದರ 8 ರಿಂದ 10 ರೂಪಾಯಿಗೆ ಇಳಿದಿದೆ. ಇನ್ನೊಂದೆಡೆ ಪ್ರತಿ ಕೆಜಿ ಕೋಳಿ ಆಹಾರದ ಬೆಲೆ 25 ರಿಂದ 30 ರೂ. ಇದೆ. ಒಂದು ಕೆಜಿ ಮಾಂಸ ತಯಾರಾಗಲು ಎರಡು ಕೆಜಿ ಆಹಾರ ನೀಡಬೇಕು.

ಇದರಿಂದ ಪ್ರತಿ ಕೋಳಿಯಿಂದ 40 ರಿಂದ 50 ರೂ. ನಷ್ಟವಾಗುತ್ತಿದೆ. ಆಹಾರಕ್ಕೆ ದುಡ್ಡು ಹೊಂದಿಸುವುದು ಕಷ್ಟವಾಗುತ್ತಿದೆ. ಹಾಗಾಗಿ ಕೋಳಿಗಳನ್ನು ಮಣ್ಣು ಮಾಡುತ್ತಿದ್ದೇನೆ ಎಂದು ನಜೀರ್‌ ಹೇಳಿದರು.

Comments are closed.