ಕರ್ನಾಟಕ

ಹೆಂಡತಿಯೊಂದಿಗೆ ಅನೈತಿಕ ಸಂಬಂಧ – ಪ್ರಶ್ನೆ ಮಾಡಿದ ಗಂಡನ ಮೇಲೆ ನಾಯಿ ಛೂ ಬಿಟ್ಟ ಪ್ರಿಯಕರ

Pinterest LinkedIn Tumblr


ಹುಬ್ಬಳ್ಳಿ: ಅಕ್ರಮ ಸಂಬಂಧದ ಬಗ್ಗೆ ಪ್ರಶ್ನೆ ಮಾಡಲು ಹೋದ ಪತಿ ಮೇಲೆ ಪತ್ನಿಯ ಪ್ರಿಯಕರ ತನ್ನ ಸಾಕು ನಾಯಿ ಛೂ ಬಿಟ್ಟು ಮಾರಣಾಂತಿಕ ಹಲ್ಲೆ ಮಾಡಿಸಿದ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.

ಹುಬ್ಬಳ್ಳಿಯ ಕೇಶ್ವಾಪುರದ ನಿವಾಸಿಗಳಾಗಿರುವ ಸಂತೋಷ್ ಪತ್ನಿ ರೂಪಾದೇವಿ, ಸನ್ನಿ ಎಂಬವನ ಜೊತೆ ಅಕ್ರಮ ಸಂಭದ ಹೊಂದಿದ್ದಳು. ಸನ್ನಿ ಹಾಗೂ ರೂಪಾಳ ಅಕ್ರಮ ಸಂಬಂಧವನ್ನು ಸಂತೋಷ್ ರೆಡ್‍ಹ್ಯಾಂಡ್ ನೋಡಿದ್ದರು. ಇದನ್ನು ಪ್ರಶ್ನೆ ಮಾಡಲು ಹೋದ ಸಂದರ್ಭದಲ್ಲಿ ಪ್ರಿಯಕರ ತನ್ನ ಸಾಕು ನಾಯಿ ಛೂ ಬಿಟ್ಟು ದಾಳಿ ಮಾಡಿಸಿದ್ದಾನೆ. ಅಲ್ಲದೆ ಚಾಕುವಿನಿಂದ ಹಲ್ಲೆ ಮಾಡಿದ್ದಾನೆ.

ಈ ಘಟನೆಯಲ್ಲಿ ರೂಪಾದೇವಿ ಪತಿ ಸಂತೋಷ್ ಸೇರಿದಂತೆ ಇಬ್ಬರಿಗೆ ಮಾರಣಾಂತಿಕ ಗಾಯಗಳಾಗಿವೆ. ಘಟನೆಯ ಬಗ್ಗೆ ವಿಷಯ ತಿಳಿಯುತ್ತಿದ್ದಂತೆ ರೂಪಾದೇವಿ ಪ್ರಿಯಕರ ತನ್ನ ಪತ್ನಿಯನ್ನು ಸಹ ಮನೆಯಿಂದ ಬೇರೆಡೆ ಎಸ್ಕೇಪ್ ಮಾಡಿಸಿದ್ದಾನೆ. ರೂಪಾದೇವಿ ಹಾಗೂ ಸನ್ನಿಯ ಅಕ್ರಮ ಸಂಬಂಧ ಬಯಲಾದ ನಂತರ ರೂಪಾದೇವಿ ಸಹ ಮನೆ ಬಿಟ್ಟು ಪರಾರಿಯಾಗಿದ್ದಾಳೆ.

ಸದ್ಯ ಗಾಯಾಳುಗಳು ಕಿಮ್ಸ್ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಬಗ್ಗೆ ಕೇಶ್ವಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Comments are closed.