
ಗದಗ: ಪ್ರಕರಣವೊಂದಕ್ಕೆ ಸಂಬಂಧಿಸಿ ನ್ಯಾಯಾಧೀಶರು ತೀರ್ಪು ಪ್ರಕಟಿಸುತ್ತಿದ್ದಂತೆ ಶಿಕ್ಷೆಗೆ ಗುರಿಯಾದ ಅಪರಾಧಿಯೊಬ್ಬ ಕಟಕಟೆಯಿಂದ ತಪ್ಪಿಸಿಕೊಂಡಿರುವ ಘಟನೆ ನಗರದ ಜಿಲ್ಲಾ ನ್ಯಾಯಾಲಯ ಸಂಕೀರ್ಣದಲ್ಲಿ ಗುರುವಾರ ನಡೆದಿದ್ದು, ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.
ಗಜೇಂದ್ರಗಡದ ಪಾಂಡುರಂಗ ಗುಡಿ ಸಮೀಪದ ನಿವಾಸಿ ಚಾಂದಲಿಂಗಪ್ಪ ಸುನಂದಾ ಬಾರಕೇರ ಎಂಬ ಅಪರಾಧಿ ತಪ್ಪಿಸಿಕೊಂಡಿದ್ದಾನೆ. ಈತನ ವಿರುದ್ಧ ಗದಗ ಪ್ರಧಾನ ದಿವಾಣಿ ಮತ್ತು ಜೆ.ಎಮ್.ಎಫ್.ಸಿ. ನ್ಯಾಯಾಲಯದಲ್ಲಿ ಕಲಂ ೧೩೮ ಎನ್.ಐ. ಯಾಕ್ಟ್ ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಕುರಿತು ವಿಚಾರಣೆ ನಡೆಸಿದ ನ್ಯಾಯಾಧೀಶರು, ಗುರುವಾರ ಸಂಜೆ 4 ಗಂಟೆ ಸುಮಾರಿಗೆ ತೀರ್ಪು ಪ್ರಕಟಿಸಿದ್ದರು. ನ್ಯಾಯಾಲಯದ ಆದೇಶ ಪ್ರತಿಗೆ ಆರೋಪಿಯಿಂದ ಸಹಿ ಪಡೆದು, ಆದೇಶದ ಪ್ರತಿ ನೀಡಿ, ಕಟಕಟೆಯಲ್ಲಿ ನಿಲ್ಲುವಂತೆ ಸೂಚಿಸಿದಾಗ ಚಾಂದಲಿಂಗಪ್ಪ ಎಸ್.ಬಾರಕೇರ ನ್ಯಾಯಾಲಯದಿಂದ ಪರಾರಿಯಾಗಿದ್ದಾನೆ.
ಈ ಕುರಿತು ಗದಗ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Comments are closed.